ಕೇವಲ ಒಂದೇ ನಿಮಿಷದಲ್ಲಿ ಒಂದು ಬುಟ್ಟಿ ತಾಮ್ರದ ಹಿತ್ತಾಳೆ ಪಾತ್ರೆಗಳನ್ನು ತೊಳೆಯುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 1 ನಿಮಿಷಗಳಲ್ಲಿ 1 ಬುಟ್ಟಿ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ತೊಳೆಯುವ ಸುಲಭ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸಾಮಾನ್ಯವಾಗಿ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ತೊಳೆಯುವುದು ಬಹಳ ಕಷ್ಟ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಬಳಸುತ್ತಿದ್ದರು. ಈ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆದರೆ ಈಗ ಹೆಚ್ಚಾಗಿ ಈ ಪಾತ್ರೆಗಳನ್ನು ಬಳಸುವುದಿಲ್ಲ. ಯಾಕೆಂದರೆ ಈ ಪಾತ್ರೆಗಳನ್ನು ತೊಳೆಯುವುದು ಕಷ್ಟ ಎಂಬುದು ಇಂದಿನ ಲೆಕ್ಕಾಚಾರ. ಆದರೆ ಈಗಲೂ ಕೂಡ ಕೆಲವೊಂದು ಸನ್ನಿವೇಶಗಳಲ್ಲಿ ನಾವು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಬಳಸಲೇ ಬೇಕಾಗುತ್ತದೆ, ಆಗಲು ಕೂಡ ತೊಳೆಯುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಬಹಳ ಸುಲಭವಾಗಿ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಹೇಗೆ ತೊಳೆಯುವುದು ಎಂದು ನಾವು ಹೇಳುತ್ತೇವೆ ಕೇಳಿ.

ನಾವು ಹೇಳುವ ಪದಾರ್ಥಗಳನ್ನು ಬಳಸಿ ಲಿಕ್ವಿಡ್ ಅನ್ನು ತಯಾರಿಕೊಂಡು ನಿಮ್ಮ ಮನೆಯಲ್ಲಿರುವ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಸುಲಭವಾಗಿ ತೊಳೆದುಕೊಳ್ಳಿ. ಮೊದಲಿಗೆ ಒಂದು ಬಟ್ಟಲಿಗೆ 1 ಚಮಚದಷ್ಟು ಡಿಶ್ ವಾಶ್ ಲಿಕ್ವಿಡ್ ಅನ್ನು ಹಾಕಿಕೊಳ್ಳಿ. ಒಂದು ವೇಳೆ ಲಿಕ್ವಿಡ್ ಡಿಶ್ ವಾಷರ್ ಇಲ್ಲದಿದ್ದರೆ 1 ಚಮಚ ಸೋಪಿನ ಪುಡಿಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 2 ಚಮಚ ವಿನೆಗರ್, 2 ಚಮಚ ನಿಂಬೆ ಹಣ್ಣಿನ ರಸ, 2 ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು 6 ತಿಂಗಳುಗಳ ಕಾಲ ಸ್ಟೋರ್ ಮಾಡಬಹುದು. ನಂತರ ಈ ಮಿಶ್ರಣವನ್ನು ಒಂದು ಬಾಟಲಿಗೆ ಹಾಕಿಕೊಳ್ಳಿ. ಪ್ರತಿ ಬಾರಿ ಉಪಯೋಗಿಸುವ ಮೊದಲು ಒಂದು ಬಾರಿ ಶೇಕ್ ಮಾಡಿಕೊಳ್ಳಿ. ನಂತರ ಒಂದು ನಾರಿನ್ನು ಮಿಶ್ರಣಕ್ಕೆ ಅದ್ದಿ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಯನ್ನು ಉಜ್ಜಿಕೊಂಡರೆ ಕಪ್ಪಾಗಿರುವ ಪಾತ್ರೆ ಸುಲಭವಾಗಿ ಕ್ಲೀನ್ ಆಗುತ್ತದೆ.

Comments are closed.