ರೋಡ್ ಸೈಡ್ ಹೋಟೆಲ್ ನಲ್ಲಿ ಇಡ್ಲಿಯನ್ನು ಸಾಲ ಕೇಳಿದ ಬಡಹುಡುಗ ಅದಕ್ಕೆ ಹೋಟೆಲ್ ಓನರ್ ಮಹಿಳೆ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾವು ಇಂದು ನೈಜ ಘಟನೆಯೊಂದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹಾಗಾಗಿ ತಪ್ಪದೇ ಕೊನೆಯವರೆಗೂ ಓದಿ. ಹೌದು ಸ್ನೇಹಿತರೆ ಗೋವಿಂದಸ್ವಾಮಿ ಎಂಬಾತ ಬೆಳಗ್ಗೆ ತಿಂಡಿ ತಿನ್ನಲು ಹೋಟೆಲೊಂದರ ಬಳಿಗೆ ಹೋಗುತ್ತಾನೆ. ಆಗ ಅಂಗಡಿಯ ಬಳಿ ಒಬ್ಬ ಹುಡುಗ ಹೋಟೆಲ್ ಓನರ್ ಮಹಿಳೆಯ ಬಳಿ 10 ಇಡ್ಲಿ ಬೇಕಿತ್ತು ಅಮ್ಮ ನಾಳೆ ದುಡ್ಡು ಕೊಡುತ್ತಾರೆ ಎಂಬುದಾಗಿ ಹೇಳಿದ್ದಾರೆ ಎಂದು ಹೇಳುತ್ತಾನೆ. ಆಗ ಹೋಟೆಲ್ ಓನರ್ ಮಹಿಳೆ ನಿಮ್ಮದು ಹಳೆಯದೇ ಸಾಲ ಇನ್ನೂ ಬಾಕಿ ಇದೆ.

ಇರಲಿ ಪರವಾಗಿಲ್ಲ ಈಗ ಇಡ್ಲಿ ತೆಗೆದುಕೊಂಡು ಹೋಗು ಎನ್ನುವುದಾಗಿ ಹೇಳಿ ಆತನ ಬಳಿ ಇದ್ದ ಪಾತ್ರೆಗೆ ಸಾಂಬಾರ್ ಹಾಗೂ ಇಡ್ಲಿಯನ್ನು ಕಟ್ಟಿಕೊಟ್ಟಿದ್ದಾರೆ. ಆ ಹುಡುಗ ಕೂಡಾ ಸಂತೋಷದಿಂದ ಅದನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾನೆ. ಇದನ್ನು ನೋಡಿದ ಗೋವಿಂದಸ್ವಾಮಿ ಓನರ್ ಮಹಿಳೆಯ ಬಳಿ ಯಾಕೆ ನೀವು ಅವರಿಗೆ ಇಡ್ಲಿಯನ್ನು ಕಟ್ಟಿಕೊಟ್ಟಿದ್ದೀರಿ. ಏಕೆಂದರೆ ಓನರ್ ಮಹಿಳೆಯ ಹೋಟೆಲ್ ಸಾಕಷ್ಟು ಕಷ್ಟದಿಂದ ನಡೆಸುತ್ತಿದ್ದರು. ಈಗಾಗಲೆ ಅವರು ಸಾಲ ಮಾಡಿದ್ದರು ಮತ್ತೆ ಯಾಕೆ ಕೊಟ್ಟಿದ್ದೀರಿ ಎಂಬುದಾಗಿ ಗೋವಿಂದಸ್ವಾಮಿ ಓನರ್ ಮಹಿಳೆಯ ಬಳಿ ಹೇಳುತ್ತಾರೆ.

ಅದಿಕ್ಕೆ ಓನರ್ ಮಹಿಳೆ, ಹೌದು ಅಣ್ಣ ನಾವು ಕಷ್ಟದಿಂದ ಹೋಟೆಲ್ ನಡೆಸುತ್ತಿದ್ದೇವೆ ಅವರದ್ದು ಹಿಂದಿನ ಸಾಲವೇ ಇನ್ನು ಕೈಗೆ ಬಂದಿಲ್ಲ. ಆದರೆ ಆ ಹುಡುಗ ಹೊಟ್ಟೆ ಹಸಿವಿನಿಂದ ಆತನ ತಾಯಿಯ ಬಳಿ ಇಡ್ಲಿಯನ್ನು ಕೇಳಿರುತ್ತಾನೆ ಅದಕ್ಕೆ ಅವರು ನನ್ನ ಮೇಲೆ ನಂಬಿಕೆಯಿಂದ ಸಾಲ ಪಡೆಯಲು ಇಲ್ಲಿಗೆ ಮಗುವನ್ನು ಕಳಿಸಿದ್ದಾರೆ. ನಾನು ಸಾಲ ಇಡ್ಲಿಯನ್ನು ಕೊಡದಿದ್ದರೆ ಅವರ ನನ್ನ ಮೇಲೆ ಇಟ್ಟ ನಂಬಿಕೆ ನಾನು ಕಳೆದುಕೊಂಡಂತಾಗುತ್ತದೆ ಎಲ್ಲದಕ್ಕಿಂತ ಹೆಚ್ಚಾಗಿ ಹೊಟ್ಟೆ ಹಸಿವಿನ ಮುಂದೆ ಯಾವುದು ಇಲ್ಲ ಎಂಬುದಾಗಿ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ಸಾಲ ಎನ್ನುವುದು ನಾನು ಕಷ್ಟಪಟ್ಟು ದುಡಿದ ಹಣ ಖಂಡಿತವಾಗಿ ಯಾವಾಗಲಾದರೂ ನನ್ನ ಕೈ ಸೇರಿಯೇ ಸೇರುತ್ತದೆ. ಆದರೆ ಅವರ ಹಸಿವಿಗೆ ನಾನು ಮಾನವೀಯ ದೃಷ್ಟಿಯಿಂದ ಪ್ರತಿಕ್ರಿಯಿಸದಿದ್ದರೆ ಅದು ಖಂಡಿತವಾಗಿ ತಪ್ಪಾಗಿತ್ತು ಎಂಬುದಾಗಿ ಹೇಳುತ್ತಾರೆ. ಓನರ್ ಮಹಿಳೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.