ತನ್ನ ಆಹಾರವಾಗಿ ಬಂದ ಜಿಂಕೆಯನ್ನು ಬಿಟ್ಟ ಮೊಸಳೆ! ಕಾರಣ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ??

ನಮಸ್ಕಾರ ಸ್ನೇಹಿತರೇ ಎಲ್ಲರೂ ಹೇಳುವಂತೆ ದಯೆ ಹಾಗೂ ಕರುಣೆ ಎಂಬ ಗುಣಗಳನ್ನು ಆ ದೇವರು ಎಲ್ಲ ಜೀವಿಗಳಲ್ಲಿ ಇಟ್ಟಿರುತ್ತಾನೆ. ಪ್ರತಿಯೊಂದು ಜೀವಿಯು ಅನೇಕ ಸಮಯದಲ್ಲಿ ಈ ಗುಣಗಳನ್ನು ತೋರಿಸುತ್ತದೆ. ಕೇವಲ ಮಾನವ ಅಷ್ಟೇ ಅಲ್ಲದೆ ಹಲವಾರು ಪ್ರಾಣಿ-ಪಕ್ಷಿಗಳಲ್ಲಿ ಕೂಡ ಈ ಗುಣಗಳು ಕಂಡುಬರುತ್ತವೆ. ಕೆಲವೊಮ್ಮೆ ಇವು ಕಣ್ಣಿಗೆ ಕಂಡು ಬಂದರೆ ಮತ್ತೆ ಕೆಲವು ಬಾರಿಗೆ ಕಂಡು ಬಂದಿರುವುದಿಲ್ಲ. ಮಾನವ ಜಾತಿಯಲ್ಲಿ ಈ ಗುಣವನ್ನು ಹೊಂದಿದ ಅತ್ಯಂತ ದೊಡ್ಡ ವ್ಯಕ್ತಿತ್ವ ತಾಯಿ ಹೊಂದಿರುತ್ತಾಳೆ. ಹೌದು ತಾಯಿ ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಅವುಗಳನ್ನು ತನ್ನಲ್ಲಿ ಇಟ್ಟುಕೊಂಡು ಮಕ್ಕಳ ರಕ್ಷಣೆಗೆ ಮುಂದಾಗುತ್ತಾಳೆ. ಇನ್ನು ಇಂತಹ ತಾಯಿ ರೂಪವು ಪ್ರಾಣಿಗಳಲ್ಲೂ ಕೂಡ ಕಂಡುಬರುತ್ತದೆ.

ಇನ್ನು ಕಾಡುಗಳಲ್ಲಿ ವಾಸಿಸುವ ಅದೆಷ್ಟು ಕಾಡುಮೃಗಗಳು ಕೂಡ ಹಲವಾರು ಬಾರಿ ತಮ್ಮ ಹೊಟ್ಟೆ ಹಸಿದಿದ್ದರೂ ಕೂಡ ತಾವು ತಿನ್ನುವಂತಹ ಪ್ರಾಣಿಗಳನ್ನು ಕರುಣೆಯಿಂದ ಬಿಟ್ಟುಬಿಡುತ್ತವೆ. ಇನ್ನು ವಿಚಿತ್ರ ಏನೆಂದರೆ ಯೋಚಿಸುವ ವಿಚಾರಶಕ್ತಿ ಮಾನವನಿಗೆ ಮಾತ್ರ ದೇವರು ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ ಅದು ಕೆಲವು ಬಾರಿ ಪ್ರಾಣಿಗಳಲ್ಲಿ ಕೂಡ ಕಂಡುಬರುತ್ತದೆ. ಇನ್ನು ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ವಿಡಿಯೋ ಒಂದು ಲಭ್ಯವಾಗಿದೆ. ಹೌದು ಈ ವಿಡಿಯೋದಲ್ಲಿ ಜಿಂಕೆಯು ಮೊಸಳೆಯಿಂದ ಪಾರಾಗಿದೆ. ಅದಕ್ಕಿಂತ ಹೆಚ್ಚು ಮೊಸಳೆಯು ಜಿಂಕೆಯನ್ನು ಬಿಟ್ಟಿದ್ದು ಎಲ್ಲರಿಗೂ ಕೂಡ ಅಚ್ಚರಿ ಉಂಟುಮಾಡಿದೆ.

ಹೌದು ಪ್ರತಿದಿನದಂತೆ ಜಿಂಕೆಯು ತನ್ನ ಆಹಾರವನ್ನು ಹುಡುಕಿಕೊಂಡು ಅಲೆದಾಡುತ್ತಿತ್ತು. ಅದು ತುಂಬುಗರ್ಭಿಣಿ ಕೂಡ ಆಗಿತ್ತು. ಆಗ ಅಲ್ಲೇ ಇದ್ದ ಮೊಸಳೆಯೊಂದು ಈ ಜಿಂಕೆಯನ್ನು ಗಮನಿಸಿತ್ತು. ಇನ್ನು ಎಲ್ಲರಿಗೂ ತಿಳಿದಿರುವಂತೆ ಮೋಸಳೆ ಮಾಂಸಹಾರಿ ಪ್ರಾಣಿ. ಇದು ಅಲ್ಲಿ ಇಲ್ಲಿ ಸಿಕ್ಕ ಪ್ರಾಣಿಗಳನ್ನು ತಿಂದು ಬದುಕುತ್ತದೆ. ಅದೇ ರೀತಿ ಯಾವ ಮೊಸಳೆಯು ಕೂಡ ಜಿಂಕೆಯನ್ನು ತನ್ನ ಆಹಾರವಾಗಿ ಮಾಡಿಕೊಳ್ಳಲು ನಿರ್ಧರಿಸಿತ್ತು. ಅಷ್ಟೇ ಅಲ್ಲದೆ ಆ ಜಿಂಕೆಯನ್ನು ಕೂಡ ತನ್ನ ಬಾಯಿಯಲ್ಲಿ ಗಟ್ಟಿಯಾಗಿ ಹಿಡಿದಿತ್ತು. ಆದರೆ ಆ ಜಿಂಕೆ ಗರ್ಭಿಣಿಯಾಗಿದ್ದರಿಂದ ಅದು ದಯೆತೋರಿ ಜಿಂಕೆಯನ್ನು ಜೀವಂತವಾಗಿ ಬಿಟ್ಟುಬಿಟ್ಟಿತು. ಇದು ಆಶ್ಚರ್ಯವೆನಿಸಿದರೂ ಕೂಡ ಈ ವಿಡಿಯೋ ಮೂಲಕ ನೀವು ಅದು ಸತ್ಯವಾದದ್ದು ಎಂಬುದನ್ನು ತಿಳಿದುಕೊಳ್ಳಬಹುದು.

Comments are closed.