ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಒನ್​ಪ್ಲಸ್ ೯ರ್, ಖರೀದಿಸಲು ಇದು ಸೂಕ್ತ ಸಮಯವೇ??

ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಅತ್ಯಂತ ಫೇಮಸ್ ಎನಿಸಿದ್ದು ಒನ್ ಪ್ಲಸ್ ಸ್ಮಾರ್ಟ್ ಫೋನ್. ಒನ್ ಪ್ಲಸ್ ಮಾರುಕಟ್ಟೆಗೆ ಬಂದು ಒಂದು ವರ್ಷ ಕಳೆದರೂ ಅದರ ಬೇಡಿಕೆ ಮಾತ್ರ ಕಡಿಮೆಆಗಿಲ್ಲ. ಅಮೆಜಾನ್ ನಲ್ಲಿ ಒನ್ಪ್ಲಸ್ 9ಆರ್ ಸ್ಮಾರ್ಟ್ಫೋನ್ ಇದೀಗ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಸಾಕಷ್ಟು ವೈಶಿಷ್ಟ್ಯತೆಗಳಿಂದ ಕೂಡಿದ ಈ ಫೋನ್ ನಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್, 65ಡಬ್ಲ್ಯೂ ವಾರ್ಪ್ ಚಾರ್ಜ್ ಟೆಕ್ನಾಲಜಿ ಮೊದಲಾದವುಗಳನ್ನು ಹೊಂದಿದೆ.

ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಒನ್ಪ್ಲಸ್ 9ಆರ್ ಸ್ಮಾರ್ಟ್ಫೋನ್ ನ ಆಫರ್ ಬೆಲೆ ಕೇವಲ 33,999 ರೂ. ಮಾತ್ರ. ಇದರ ಮೂಲಬೆಲೆ 39,999 ರೂ.ಗಳು. ಅಮೆಜಾನ್ ಅತ್ಯಂತ ಹೆಚ್ಚಿನ ಆಫರ್ ನ್ನು ನೀಡಿದ್ದು ಬರೋಬ್ಬರಿ 6 ಸಾವಿರ ಡಿಸ್ಕೌಂಟ್ ಇದರಲ್ಲಿ ಸಿಗಲಿದೆ. ಇನ್ನು ಬ್ಯಾಂಕ್ ಆಫ್ ಬರೋಡ ಅಥವಾ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದವರಿಗೆ 1,000 ರೂ. ಹೆಚ್ಚಿನ ಡಿಸ್ಕೌಂಟ್ ಸಿಗಲಿದ್ದು ಈ ಸ್ಮಾರ್ಟ್ಫೋನನ್ನು ನೀವು 32,999 ರೂ. ಗೆ ಪಡೆಯಬಹುದು.

ಒನ್‌ಪ್ಲಸ್ 9ಆರ್ ಸ್ಮಾರ್ಟ್‌ಫೋನ್‌ 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಪ್ಲಾಟ್‌ ಪ್ಲೂಯಿಡ್‌ ಅಮೋಲೆಡ್‌ ಡಿಸ್‌ಪ್ಲೇ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಎಸ್ಒಸಿ ಪ್ರೊಸೆಸರ್‌ ನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಆಪರೇಟಿಂಗ್‌ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB ರ್ಯಾಮ್+128GB, 12GB ರ್ಯಾಮ್+256GB ಇಂಟರ್‌ ಸ್ಟೋರೇಜ್‌ ನ ಸ್ಮಾರ್ಟ್ ಫೋನ್ ಇದಾಗಿದೆ.

ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಪೋನ್ ನಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕೆ ರಾತ್ರಿ ವೇಳೆ ಫೋಟೋ ತೆಗೆದರೂ ಫೋಟೋ ಕ್ಲಾರಿಟಿ ಚೆನ್ನಾಗಿರುತ್ತದೆ. ಹಾಗೆಯೇ ಫೋಕಸ್ ಸ್ಪೀಡ್ ಕೂಡ ಉತ್ತಮವಾಗಿದ್ದು, ರಾತ್ರಿ ವೇಳೆ ವೇಗವಾಗಿ ಫೋಟೊ ತೆಗೆಯಬಹುದು. ಇನ್ನು ಎರಡನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್‌, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ. 4,500ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಇದ್ದು, 10 ನಿಮಿಷಗಳಲ್ಲಿ 25-30% ಚಾರ್ಜ್ ಆಗುತ್ತದೆ. ಅತ್ಯಂತ ಆಕರ್ಷಣೀಯವೂ, ವೈಶಿಷ್ಟ್ಯತೆಗಳನ್ನೂ ಹೊದಿರುವ ಈ ಸ್ಮಾರ್ಟ್ ಫೋನ್ ಖಂಡಿತವಾಗಿಯೂ ನಿಮಗೂ ಇಷ್ಟವಾಗಬಹುದು.

Comments are closed.