ನೀವೂ ಬಾಡೂಟ ಪ್ರಿಯರೇ, ಹಾಗಿದ್ದರೇ ಮಲೆನಾಡಿನ ಶೈಲಿಯ ಪೋರ್ಕ್ ಫ್ರೈ ಮಾಡುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾನುವಾರ ಎಂದರೇ ಹಲವರ ಮನೆಯಲ್ಲಿ ಬಾಡೂಟ ಫಿಕ್ಸು. ಈ ಲಾಕ್ ಡೌನ್ ವೇಳೆಯಲ್ಲಿ ಸದಾ ಚಿಕನ್,ಮಟನ್,ಫಿಶ್ ತಿಂದು ನಾಲಿಗೆ ಬೋರಾಗಿದ್ದರೇ, ನಾವಿಂದು ನಿಮಗೆ ಹೊಸ ರುಚಿ ಹೇಳಿಕೊಡುತ್ತಿದ್ದೆವೆ. ಮಳೆಗಾಲದಲ್ಲಿ ಹೆಚ್ಚಾಗಿ ಹಂದಿ ಮಾಂಸ ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂದು ವೈದ್ಯರು ಸಹ ಹೇಳುತ್ತಾರೆ. ಮಲೆನಾಡಿನ ಶೈಲಿಯ ಹಂದಿ ಮಾಂಸದ ಡ್ರೈ ಪೋರ್ಕ್ ಫ್ರೈನ್ನು ಹೇಗೆ ಮಾಡುವುದು ಎಂದು ತಿಳಿಯೋಣ ಬನ್ನಿ.

ಇದಕ್ಕೆ ಬೇಕಾಗುವ ಸಾಮಗ್ರಿಗಳು ಈ ಕೆಳಗಿನಂತಿವೆ. ಈರುಳ್ಳಿ – 2, ಹಸಿಮೆಣಸಿನ ಕಾಯಿ – 5 ರಿಂದ 6,ಶುಂಠಿ, ಬೆಳ್ಳುಳ್ಳಿ – 2 ಟೀ ಸ್ಪೂನ್, ಅರಿಶಿಣ- 1 ಟೀ ಸ್ಪೂನ್, ಖಾರದ ಪುಡಿ – 2 ಟೀ ಸ್ಪೂನ್ ದನಿಯಾ ಪುಡಿ – 2 ಟೀ ಸ್ಪೂನ್ ಲಿಂಬೆ ಹಣ್ಣು,ಕಾಳುಮೆಣಸಿನ ಪುಡಿ- 3 ಟೀ ಸ್ಪೂನ್ ,ಹಂದಿ ಮಾಂಸ – 1 ಕೆಜಿ,ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ – ಮೊದಲು ಶುಚಿಯಾದ ಹಂದಿ ಮಾಂಸವನ್ನು ಚೆನ್ನಾಗಿ ತೊಳೆದು ಕುಕ್ಕರ್ ನಲ್ಲಿ ಹಾಕಿ ಇಡಬೇಕು. ನಂತರ ಮತ್ತೊಂದು ಬಾಣಲೆಯಲ್ಲಿ ಈರುಳ್ಳಿ,ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಅರಿಶಿಣ, ಉಪ್ಪು,ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಹಂದಿ ಮಾಂಸವಿರುವ ಕುಕ್ಕರ್ ಗೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಎರಡು ವಿಶಲ್ ಬರುವ ತನಕ ಬೇಯಿಸಿಕೊಳ್ಳಬೇಕು.

ನಂತರ ಬಾಣಲೆಗೆ ಖಾರದ ಪುಡಿ, ದನಿಯಾ ಪುಡಿ, ಇನ್ನು ಸುವಾಸನೆ ಬೇಕಿದ್ದರೆ, ರೆಡಿ ಚಿಕನ್ ಅಥವಾ ಮಟನ್ ಮಸಾಲಾ ಪೌಡರ್ ಗಳನ್ನ ಹಾಕಿಕೊಂಡು ಫ್ರೈ ಮಾಡಿಟ್ಟುಕೊಳ್ಳಬೇಕು. ನಂತರ ಹುರಿದ ಪುಡಿಯನ್ನು ಕುಕ್ಕರ್ ನಲ್ಲಿ ಅರೆಬೆಂದಿರುವ ಮಾಂಸಕ್ಕೆ ಚೆನ್ನಾಗಿ ಮಿಶ್ರಣ ಮಾಡಿ ,2 ರಿಂದ 3 ನಿಮಿಷ ಒಪನ್ ಪ್ಯಾನ್ ನಲ್ಲಿ ಬೇಯಿಸಿದರೇ ರುಚಿಕರವಾದ ಮಲೆನಾಡು ಶೈಲಿಯ ಪೋರ್ಕ್ ಫ್ರೈ ಸವಿಯಲು ಸಿದ್ದ. ಮಲೆನಾಡು ಶೈಲಿಯ ಅಕ್ಕಿ ರೊಟ್ಟಿ ಅಥವಾ ಬಿಸಿ ಬಿಸಿ ಅನ್ನದ ಜೊತೆ ಸವಿಯಲು ಇದು ತುಂಬಾ ಚೆನ್ನಾಗಿರುತ್ತದೆ. ಮತ್ತೇಕೆ ತಡ, ಮನೆಯಲ್ಲಿ ಒಮ್ಮೆ ಟ್ರೈ ಮಾಡಿ, ಹೇಗಿತ್ತು ಅನ್ನೋದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.