ಪ್ರೆಷರ್ ಕುಕ್ಕರ್ನಲ್ಲಿ ಬಹಳ ಮೃದುವಾಗಿ ಹಾಗೂ ಉದುರು ಉದುರಾಗಿ ಅನ್ನ ಮಾಡುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ಬಹುತೇಕರ ಮನೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಅನ್ನ ಮಾಡುವ ಸಮಯ ಉಳಿಸಲು ಕುಕ್ಕರ್ ಗಳ ಮೊರೆ ಹೋಗಲಾಗುತ್ತದೆ. ಎಲ್ಲರೂ ಕೂಡ ಬಹುತೇಕ ಕುಕ್ಕರ್ ಬಳಸುತ್ತಾರೆ ಅದರಲ್ಲಿಯು ಪ್ರಮುಖವಾಗಿ ಅನ್ನ ಮಾಡಲು. ಆದರೆ ಈ ಕುಕ್ಕರ್ ನಲ್ಲಿ ಮೃದುವಾದ ಹಾಗೂ ಬಹಳ ಸಾಫ್ಟ್ ಆಗಿ ಅನ್ನ ಮಾಡುವುದು ಸುಲಭದ ಕೆಲಸವಲ್ಲ.

ಸುಮ್ಮನೆ ಇಂತಿಷ್ಟು ನೀರು ಹಾಗೂ ಅಕ್ಕಿ ಹಾಕಿ ಬಿಟ್ಟರೆ ಅನ್ನ ಆಗುತ್ತದೆ ಒಪ್ಪಿ ಕೊಳ್ಳುತ್ತೇವೆ, ಆದರೆ ನಿಮಗೆ ಬೇಕಾದ ರೀತಿಯಲ್ಲಿ ಅಂದರೆ ನಿಮ್ಮ ಅಡುಗೆಗೆ ತಕ್ಕನಾದ ಸಾಫ್ಟ್ ಹಾಗೂ ಮೃದುವಾದ ಅನ್ನದ ಅವಶ್ಯಕತೆ ಇರುವ ಸಮಯದಲ್ಲಿ ನೀವು ಈ ರೀತಿ ಮಾಡಿದರೆ ಬಹಳ ಸುಲಭವಾಗಿ ಪರ್ಫೆಕ್ಟಾಗಿ ಕುಕ್ಕರ್ನಲ್ಲಿ ಅನ್ನ ಮಾಡಬಹುದಾಗಿದೆ. ಹೌದು ಸ್ನೇಹಿತರೇ ನಾವು ಹೇಳುವ ಅಳತೆ ಹಾಗೂ ಕ್ರಮಗಳನ್ನು ಫಾಲೋ ಮಾಡಿದರೆ ಪರ್ಫೆಕ್ಟ್ ಆಗಿ ಕುಕ್ಕರ್ ನಲ್ಲಿ ಅನ್ನವನ್ನು ಮಾಡಬಹುದು.

ಕುಕ್ಕರ್ ನಲ್ಲಿ ಉದುರು ಉದುರಾಗಿ ಅನ್ನ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ 2 ಲೋಟ ಅಕ್ಕಿ ಹಾಗೂ ನೀರನ್ನು ಹಾಕಿ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದಕ್ಕೆ ಮತ್ತೆ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ.ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 3 ಲೋಟ ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ 1 ಚಮಚ ಎಣ್ಣೆಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಕುಕ್ಕರ್ ನಲ್ಲಿ ಸಾಫ್ಟ್ ಮತ್ತು ಉದುರು ಉದುರಾಗಿ ಅನ್ನ ಸಿದ್ದವಾಗುತ್ತದೆ.

Comments are closed.