News from ಕನ್ನಡಿಗರು

ಅಪ್ಪು ಕೆಲಸಗಳ ಕುರಿತು ಮೊದಲಬಾರಿಗೆ ಮಾತನಾಡಿದ ದೊಡ್ಮನೆ ಮಗ ರಾಘವೇಂದ್ರ ರಾಜಕುಮಾರ್ ಮಹತ್ವವಾದ ನಿರ್ಧಾರ ತೆಗೆದುಕೊಂಡು ಹೇಳಿದ್ದೇನು ಗೊತ್ತೆ??

174

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಎರಡು ವಾರಗಳ ಮೇಲೆ ಕಳೆದಿವೆ. ಅವರು ಮಾಡಿರುವ ಸಮಾಜಮುಖೀ ಕಾರ್ಯಗಳು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅವರನ್ನು ಜೀವಂತವಾಗಿಟ್ಟಿದೆ. ಅಭಿಮಾನಿಗಳಾಗಿ ನಮಗೆ ಎಷ್ಟೊಂದು ದುಃಖವಾಗುತ್ತಿದೆ ಎಂದರೆ ಅವರ ಮನೆಯವರಿಗೆ ಎಷ್ಟು ದುಃಖವಾಗಿರಬೇಡ ಎಂಬುದನ್ನು ನೀವೇ ಅಂದಾಜು ಮಾಡಿಕೊಳ್ಳಿ.

ಇನ್ನು ನೀವೆಲ್ಲ ನೋಡಿಯೇ ಇರುವಂತೆ ಅಪ್ಪು ಅವರು ನಿಧನ ಹೊಂದಿದಾಗ ಎಲ್ಲರನ್ನೂ ಸಮಾಧಾನ ಮಾಡುವ ಹಾಗೂ ಎಲ್ಲಾ ಕಾರ್ಯಗಳನ್ನು ಮುಂದೆ ನಿಂತು ನಿರ್ವಹಿಸಿದ್ದು ನಮ್ಮ ರಾಘಣ್ಣ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಮುಂಚೆಯಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ತಮ್ಮ ಮಗನಂತೆ ಕಾಣುತ್ತಿದ್ದರು ನಮ್ಮ ರಾಘಣ್ಣ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಈಗ ಕಳೆದುಕೊಂಡು ಮಗನನ್ನೇ ಕಳೆದುಕೊಂಡಂತೆ ಆಗಿದೆ ಎಂದು ಹೇಳುತ್ತಾರೆ ರಾಘಣ್ಣ. ಇನ್ನು ಈಗ ಪ್ರತಿದಿನ ಕಂಠೀರವ ಸ್ಟುಡಿಯೋದ ಬಳಿ ಅಪ್ಪ-ಅಮ್ಮನ ಸಮಾಧಿ ದರ್ಶನ ಮಾಡುವುದರ ಜೊತೆಗೆ ತಮ್ಮ ತಮ್ಮನಾಗಿರುವ ಪುನೀತ್ ರಾಜಕುಮಾರ್ ರವರ ದರ್ಶನವನ್ನೂ ಕೂಡ ಮಾಡಿ ಬರುತ್ತಾರೆ ರಾಘಣ್ಣ.

ರಾಜಣ್ಣನವರು ಹೇಳುವಂತೆ ಪುನೀತ್ ರಾಜಕುಮಾರ್ ಅವರು 10% ಸಿನಿಮಾದಿಂದ ಎಲ್ಲರ ಮನಗೆದ್ದಿದ್ದಾರೆ 90% ತಮ್ಮ ಸಮಾಜಮುಖಿ ಕಾರ್ಯಗಳಿಂದಾಗಿ ಎಲ್ಲರ ಹೃದಯ ಸಿಂಹಾಸನದಲ್ಲಿ ರಾಜಕುಮಾರನಂತೆ ಮರೆಯುತ್ತಿದ್ದರು. ಇನ್ನು ಅಪ್ಪು ಅವರ ನೇತ್ರದಾನದ ನಂತರ ಹಲವಾರು ನೇತ್ರದಾನಗಳ ಅರ್ಜಿಗೆ ಸೈನ್ ಹಾಕಿರುವವರು ಗಣನೀಯವಾಗಿ ಹೆಚ್ಚಾಗಿದ್ದಾರೆ ಎಂಬುದನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ಇಂದು ಮಕ್ಕಳ ದಿನಾಚರಣೆ ದಿನದಂದು ಕೂಡ ತಮ್ಮ ಬಾಲ್ಯದ ಅಪ್ಪು ಅವರ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡು ಬಾನದಾರಿಯಲ್ಲಿ ಸೂರ್ಯ ಬಂದ ಹಾಡಿನ ಕ್ಯಾಪ್ಷನ್ ಅನ್ನು ಬರೆದುಕೊಂಡಿದ್ದಾರೆ. ಇನ್ನೂ ಒಂದು ಪ್ರಮುಖ ನಿರ್ಧಾರವನ್ನು ಕೈಗೊಂಡಿರುವ ರಾಘಣ್ಣನವರು ಪುನೀತ್ ರಾಜಕುಮಾರ್ ಅವರು ಬಯಸಿದ ಎಲ್ಲಾ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರವನ್ನು ಮಾಡಿದ್ದಾರಂತೆ. ಈ ಹೊಸ ಹಾದಿಯಲ್ಲಿ ರಾಘಣ್ಣನವರಿಗೆ ಆ ದೇವರ ಹಾಗೂ ಪುನೀತ್ ರಾಜಕುಮಾರ್ ಅವರ ಆಶೀರ್ವಾದವಿರಲಿ ಎಂದು ಹಾರೈಸೋಣ.

Leave A Reply

Your email address will not be published.