ಮಗನನ್ನು ಕಂಟ್ರೋಲ್ ನಲ್ಲಿ ಇಡದೇ, ಮಗನಿಗಾಗಿ ಬಾಡಿಗಾರ್ಡ್ ನೇಮಿಸಿದ ಶಾರುಖ್, ಸಂಭಾವನೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಆಗಿರುವುದು ಕಿಂಗ್ ಖಾನ್ ಶಾರುಖ್ ಖಾನ್ ರವರ ಪುತ್ರ ಆರ್ಯನ್ ಖಾನ್ ರವರು. ಯಾವುದೇ ಚಿತ್ರಗಳಲ್ಲಿ ಪಾದಾರ್ಪಣೆ ಮಾಡುವ ಮುನ್ನವೇ ಇಷ್ಟೊಂದು ಜನಪ್ರಿಯ ಪಡೆದುಕೊಂಡು ಬಿಟ್ಟಿದ್ದಾರೆ. ಅದರ ವಿಚಾರ ಏನೇ ಇರಲಿ ಈಗ ಆರ್ಯನ್ ಖಾನ್ ರವರು ಜೈಲಿನಿಂದ ಹೊರಬಂದ ಮೇಲೆ ಮಾಧ್ಯಮದವರು ಅವರ ಮೇಲೆ ಮುತ್ತಿಗೆ ಇಡುವುದು ಜಾಸ್ತಿಯಾಗಿ ಬಿಟ್ಟಿದೆ. ಇದಕ್ಕಾಗಿ ಮಗನನ್ನು ಸುರಕ್ಷಿತವಾಗಿ ಇಡಬೇಕೆಂಬ ದೃಷ್ಟಿಯಿಂದ ಹಲವಾರು ನಿರ್ಧಾರಗಳನ್ನು ತಂದೆ ಶಾರುಖ್ ಖಾನ್ ರವರು ಕೈಗೊಂಡಿದ್ದಾರೆ.

ಎಲ್ಲಾ ಸರಿಯಾಗಿದ್ದಿದ್ದರೆ ಶಾರುಖ್ ಖಾನ್ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ಪಠಾಣ್ ಚಿತ್ರದ ಸಾಂಗ್ ಶೂಟಿಂಗ್ ಗಾಗಿ ದುಬೈಗೆ ತೆರಳಬೇಕಾಗಿತ್ತು. ಆದರೆ ಮಗನ ವಿ’ವಾದಗಳಲ್ಲಿ ಸಿಲುಕಿಕೊಂಡು ಶಾರುಖ್ ಖಾನ್ ರವರು ಮಗನನ್ನು ಉಳಿಸುವ ಕಾರ್ಯಕ್ಕಾಗಿ ಚಿತ್ರೀಕರಣವನ್ನು ಮುಂದೆ ಹಾಕಿಕೊಂಡಿದ್ದರು. ಇನ್ನು ಈಗ ಯಶ್ ರಾಜ್ ಫಿಲಂಸ್ ಬ್ಯಾನರ್ ನಡಿಯಲ್ಲಿ ಮೂಡಿಬರುತ್ತಿರುವ ಪಠಾಣ್ ಚಿತ್ರಕ್ಕಾಗಿ ಶಾರುಖ್ ಖಾನ್ ರವರು ದುಬೈಗೆ ಚಿತ್ರೀಕರಣಕ್ಕಾಗಿ ಹೋಗಬೇಕಾಗಿದೆ. ಹೋಗುವ ಮುನ್ನ ಮಗನಿಗಾಗಿ ಬಾಡಿಗಾರ್ಡ್ ನೇಮಿಸಲು ಸಿದ್ದರಾಗಿದ್ದಾರೆ. ಯಾಕೆಂದರೆ ಪ್ರಕರಣಗಳಿಂದಾಗಿ ಆರ್ಯನ್ ಖಾನ್ ರವರು ಮೊದಲಿನಂತೆ ಇಲ್ಲ. ಹೀಗಾಗಿ ಮಗನ ಸುರಕ್ಷತೆ ತಂದೆಗೆ ಮುಖ್ಯ ಆಗಿದೆ.

arya sharuk | ಮಗನನ್ನು ಕಂಟ್ರೋಲ್ ನಲ್ಲಿ ಇಡದೇ, ಮಗನಿಗಾಗಿ ಬಾಡಿಗಾರ್ಡ್ ನೇಮಿಸಿದ ಶಾರುಖ್, ಸಂಭಾವನೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ.
ಮಗನನ್ನು ಕಂಟ್ರೋಲ್ ನಲ್ಲಿ ಇಡದೇ, ಮಗನಿಗಾಗಿ ಬಾಡಿಗಾರ್ಡ್ ನೇಮಿಸಿದ ಶಾರುಖ್, ಸಂಭಾವನೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ. 2

ಇನ್ನು ಹಲವಾರು ವರ್ಷಗಳಿಂದ ಶಾರುಖ್ ಖಾನ್ ರವರಿಗೆ ರವಿ ಸಿಂಗ್ ರವರು ಬಾಡಿಗಾರ್ಡ್ ಆಗಿದ್ದರು. ಎಂತಹುದೇ ಜನ ಭರಿತ ಪ್ರದೇಶಕ್ಕೆ ಹೋದರೂ ಕೂಡ ಕಿಂಗ್ ಖಾನ್ ಅವರನ್ನು ಸುರಕ್ಷಿತವಾಗಿ ರವಿ ಸಿಂಗ್ ಕರೆತರುತ್ತಿದ್ದರು. ಇನ್ನು ಈಗ ರವಿ ಸಿಂಗ್ ರವರನ್ನು ಆರ್ಯನ್ ಖಾನ್ ರವರ ಬಾಡಿಗಾರ್ಡ್ ಆಗಿ ನೇಮಿಸಿದ್ದಾರೆ ಶಾರುಖ್ ಖಾನ್. ಇನ್ನು ಶಾರುಖ್ ಖಾನ್ ರವರು ತಮಗಾಗಿ ಹೊಸ ಬಾಡಿಗಾರ್ಡ್ ಅನ್ನು ಹುಡುಕಲು ನಿಶ್ಚಯಿಸಿದ್ದಾರೆ. ಇನ್ನು ರವಿ ಸಿಂಗ್ ರವರಿಗೆ ವಾರ್ಷಿಕವಾಗಿ 2.7 ಕೋಟಿ ವೇತನವನ್ನು ನೀಡುತ್ತಿದ್ದರು. ಬಾಲಿವುಡ್ ಚಿತ್ರರಂಗದ ಅತ್ಯಂತ ದುಬಾರಿ ಬಾಡಿಗಾರ್ಡ್ ಆಗಿ ರವಿ ಸಿಂಗ್ ರವರು ಕಾಣಿಸಿಕೊಂಡಿದ್ದರು.

Comments are closed.