ಮುಂದಿನ ವಾರದ ಎಲಿಮಿನೇಷನ್ ನಲ್ಲಿ ಬಿಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್, ಏನು ಗೊತ್ತಾ?? ಅಚ್ಚರಿಯ ನಿಲುವು ತೆಗೆದುಕೊಂಡು ಮಾಡಿದ್ದೇನು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಸೀಸನ್ 8 ತನ್ನ ಅಂತಿಮ ಘಟ್ಟದಲ್ಲಿದೆ. ಮೊದಲ ಸೀಸನ್ ಎಪ್ಪತ್ತೆರೆಡು ದಿನಕ್ಕೆ ನಿಂತಿತ್ತು. ಕೋರೋನಾ ಸಂಖ್ಯೆ ಕಡಿಮೆಯಾದ ನಂತರ ಎರಡನೇ ಇನ್ನಿಂಗ್ಸ್ ಆರಂಭವಾಯಿತು. ಇನ್ನಿಂಗ್ಸ್ ಆರಂಭದಲ್ಲಿ ಬಿಗ್ ಬಾಸ್ ನ ನಿರೂಪಕ ಕಿಚ್ಚ ಸುದೀಪ್ ಈ ಎರಡನೇ ಇನ್ನಿಂಗ್ಸ್ ಕೇವಲ ಒಂದು ತಿಂಗಳು ಮಾತ್ರ ನಡೆಯಲಿದೆ ಎಂದಿದ್ದರು. ಸದ್ಯ ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಶುರುವಾಗಿ ಮೂರು ವಾರಗಳಾಗಿವೆ. ಇನ್ನು ಮನೆಯಲ್ಲಿ ಒಂಬತ್ತು ಸದಸ್ಯರು ಇದ್ದಾರೆ.

ಈ ವಾರ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಿಯಾಂಕಾ ತಿಮ್ಮೇಶ್ ರಗಳೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ನೀಡುವ ಎಲ್ಲಾ ಸಿದ್ಧತೆಗಳು ನಡೆದಿದ್ದು ಆ ಟ್ವಿಸ್ಟ್ ಏನು ಹಾಗೂ ಮುಂದಿನ ನಡೆಗಳ ಎಂಬುದರ ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ.

ಸ್ನೇಹಿತರೆ ಹೆಚ್ಚೆಂದರೆ ಬಿಗ್ ಬಾಸ್ ಕೇವಲ ನಾಲ್ಕರಿಂದ ಆರು ವಾರಗಳ ಕಾಲ ಮಾತ್ರ ಇರಲಿದೆ ಎಂಬುದು ಕೇಳಿಬರುತ್ತಿರುವ ಮಾತು. ಇಂತಹ ಸಮಯದಲ್ಲಿ ಇನ್ನು 9 ಜನ ಮನೆಯಲ್ಲಿ ಇರುವ ಕಾರಣ ಹಾಗೂ ಫಿನಾಲೆಗೆ ಐದು ಜನ ಸದಸ್ಯರು ಇರಬೇಕಾದ ಕಾರಣ ಈ ವಾರ ಅಥವಾ ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಎಂದಿನಂತೆ ಶನಿವಾರವೂ ಒಬ್ಬರನ್ನು ಎಲಿಮಿನೇಟ್ ಮಾಡಿ, ವಾರದ ಮಧ್ಯದಲ್ಲಿ ಜನರ ಅಭಿಪ್ರಾಯದ ಮೇರೆಗೆ ಮತ್ತೊಬ್ಬರನ್ನು ಎಲಿಮಿನೇಟ್ ಮಾಡುವ ಕುರಿತು ಆಲೋಚನೆ ನಡೆಸುತ್ತಿದ್ದು ಮುಂದಿನ ವಾರಗಳಲ್ಲಿ ಮತ್ತಷ್ಟು ಕುತೂಹಲಕಾರಿಯಾಗಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿಬರಲಿದೆ.

ಬೇರೆ ಸೀಸನ್ ಗಳಲ್ಲಿ ನಡೆಸಿದಂತೆ ಮಧ್ಯದ ಯಾವುದಾದರೂ ಒಂದು ವಾರ, ಆನ್ ದ ಸ್ಪಾಟ್ ಏಲಿಮಿನೇಷನ್ ಸಹ ನಡೆಯಬಹುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕುಗಳು, ಸ್ಪರ್ಧಿಗಳು, ಗಾಸಿಪ್ ಗಳು, ರೋಚಕ ಫೈಟುಗಳು, ಮಧ್ಯೆ ಕೊಂಚ ಕಣ್ಣೀರುಗಳು ಹೀಗೆ ಮನೊರಂಜನೆಗೆ ಬೇಕಾದ ಎಲ್ಲಾ ಅಂಶಗಳ ಫುಲ್ ಮೀಲ್ಸ್ ಆಗಿದೆ ಸದ್ಯದ ಬಿಗ್ ಬಾಸ್ ಸೀಸನ್ -8 ರ ಮನೆ. ಹಾಗಾಗಿ ಫಿನಾಲೆಗೆ ಹೋಗುವ ಸದಸ್ಯರು ಯಾರು ಯಾರು ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಫಿನಾಲೆಗೆ ಯಾವ ಯಾವ ಸದಸ್ಯರು ಹೋಗಬೇಕು ಎಂಬ ನಿಮ್ಮ ಆಯ್ಕೆಯನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *