News from ಕನ್ನಡಿಗರು

ಕ್ಯಾಮೆರಾ ಇಂದ ದೂರ ಉಳಿದಿರುವ ಖ್ಯಾತ ನಟ ಪತ್ನಿಯರು ಯಾರ್ಯಾರು ಗೊತ್ತೇ?? ಇವರನ್ನು ನೋಡಿರಲೂ ಸಾಧ್ಯವೇ ಇಲ್ಲ.

158

ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ಹಲವಾರು ಬಾಲಿವುಡ್ ನಟರು ತಮ್ಮ ಅಭಿಮಾನಿಗಳಿಂದಾಗಿ ಹಾಗೂ ತಮ್ಮ ಚಿತ್ರದ ಯಶಸ್ಸಿನಿಂದಾಗಿ ಸಾಕಷ್ಟು ಜನಪ್ರಿಯ ರಾಗಿರುತ್ತಾರೆ. ಆದರೆ ಅವರ ಪತ್ನಿಯರ ಕುರಿತಂತೆ ಯಾರಿಗೂ ಕೂಡ ತಿಳಿದಿರುವುದಿಲ್ಲ. ಇಂದಿನ ವಿಷಯದಲ್ಲಿ ಸ್ಟಾರ್ ನಟರ ಪತ್ನಿಯರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ‌. ತಪ್ಪದೇ ಕೊನೆಯವರೆಗೂ ಓದಿ.

ಧರ್ಮೇಂದ್ರ ಹಾಗೂ ಪ್ರಕಾಶ್ ಕೌರ್ ಬಾಲಿವುಡ್ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ ರವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇನ್ನು ಅವರ ಎರಡನೇ ಪತ್ನಿ ಹೇಮಮಾಲಿನಿ ಅವರ ಬಗ್ಗೆ ಕೂಡ ಎಲ್ಲರಿಗೂ ಗೊತ್ತು. ಆದರೆ ಮೊದಲ ಪತ್ನಿ ಪ್ರಕಾಶ್ ಕೌರ್ ಕುರಿತಂತೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಧರ್ಮೇಂದ್ರ ರವರ ಇಬ್ಬರು ಪುತ್ರರಾಗಿರುವ ಬಾಬಿ ಡಿಯೋಲ್ ಹಾಗೂ ಸನ್ನಿ ಡಿಯೋಲ್ ಇಬ್ಬರೂ ಕೂಡ ಪ್ರಕಾಶ್ ಕೌರ್ ರವರ ಮಕ್ಕಳೇ. ಇನ್ನು ಇಬ್ಬರು ಹೆಣ್ಣುಮಕ್ಕಳು ಕೂಡ ಇವರಿಗೆ ಇದ್ದಾರೆ. ಜಾನ್ ಅಬ್ರಹಾಂ ಹಾಗೂ ಪ್ರಿಯ ರುಂಚಾಲ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟನಾಗಿರುವ ಜಾನ್ ಅಬ್ರಹಾಂ ರವರು ನಟಿ ಬಿಪಾಶಾ ಬಸು ಅವರೊಂದಿಗೆ 9ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿ ಇದ್ದರು. ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬಂದು ಬ್ರೇಕಪ್ ಮಾಡಿಕೊಂಡರು. ನಂತರ ಜಾನ್ ಅಬ್ರಾಹಂ 2014 ರಲ್ಲಿ ಪ್ರಿಯಾ ರುಂಚಾಲ್ ಅವರ ಜೊತೆಗೆ ಸಪ್ತಪದಿ ತುಳಿದರು. ಇನ್ನು ಪ್ರಿಯಾ ರುಂಚಾಲ್ ರವರು ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿದ್ದಾರೆ.

ಇಮ್ರಾನ್ ಹಶ್ಮಿ ಹಾಗೂ ಪರ್ವೀನ್ ಸಾಹನಿ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಸ್ಟಾರ್ ನಟರಲ್ಲಿ ಒಬ್ಬರಾಗಿ ಇಮ್ರಾನ್ ಹಶ್ಮಿ ಅವರು ಕಾಣಿಸಿಕೊಳ್ಳುತ್ತಾರೆ. ತನ್ನ ಸಿನಿಮಾಗಳಿಂದಾಗಿ ವೀಕ್ಷಕರಲ್ಲಿ ನೆಚ್ಚಿನ ನಟನಾಗಿ ಕಾಣಿಸಿಕೊಳ್ಳುತ್ತಾರೆ ಇಮ್ರಾನ್ ಹಶ್ಮಿ. ಇನ್ನು ಇಮ್ರಾನ್ ಹಶ್ಮಿ ಅವರ ಪತ್ನಿ ಪರ್ವೀನ್ ಸಾಹನಿ ಅವರು ಅಷ್ಟೊಂದಾಗಿ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಇನ್ನು ಅವರು ಹೌಸ್ ವೈಫ್ ಆಗಿದ್ದು ಎಲ್ಲಾ ಕಾರ್ಯಗಳನ್ನು ಅವರೇ ಸಂಭಾಳಿಸುತ್ತಾರೆ. ಇನ್ನು ಇವರಿಬ್ಬರು ಮದುವೆ ಆಗಿದ್ದು 2006 ರಲ್ಲಿ.

ಶರ್ಮನ್ ಜೋಷಿ ಹಾಗೂ ಪ್ರೇರಣಾ ಚೋಪ್ರಾ ಶರ್ಮನ್ ಜೋಷಿ ಅವರ ಪತ್ನಿ ಆಗಿರುವ ಪ್ರೇರಣಾ ಚೋಪ್ರಾ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟನಾಗಿರುವ ಪ್ರೇಮ್ ಚೋಪ್ರಾ ರವರ ಮಗಳಾಗಿದ್ದರೆ. ಶರ್ಮನ್ ಜೋಶಿಯವರು ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರಿಬ್ಬರು 2000 ಇಸವಿಯಲ್ಲಿ ಮದುವೆಯಾಗಿದ್ದಾರೆ. ಇನ್ನು ಖ್ಯಾತನಟನ ಮಗಳಾಗಿದ್ದರೂ ಶರ್ಮನ್ ಜೋಷಿ ಅವರ ಮಡದಿ ಆಗಿದ್ದರೂ ಕೂಡ ಇವರು ಹೊರಗೆ ಎಲ್ಲೂ ಕೂಡ ಕಾಣಸಿಗುವುದಿಲ್ಲ.

ಆರ್ ಮಾಧವನ್ ಹಾಗೂ ಸರಿತ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಆರ್ ಮಾಧವನ್ ಸಾಕಷ್ಟು ಜನಪ್ರಿಯರು. ಇನ್ನು ಇವರು ಏರ್ ಹೋಸ್ಟೆಸ್ ಆಗಿರುವ ಸರಿತಾ ರವರನ್ನು 1999 ರಲ್ಲಿ ಮದುವೆಯಾಗಿದ್ದಾರೆ. ಆದರೂ ಕೂಡ ಮಾಧವನ್ ರವರ ಪತ್ನಿಯ ಕುರಿತಂತೆ ಅಷ್ಟೊಂದು ಜನರಿಗೆ ತಿಳಿದಿಲ್ಲ. ಇನ್ನು ಇವರಿಗೆ ವೇದಾಂತ ಎಂಬ ಮಗ ಕೂಡ ಇದ್ದಾರೆ.

ಸೊಹೈಲ್ ಖಾನ್ ಹಾಗೂ ಸೀಮಾ ಖಾನ್ ಸಲ್ಮಾನ್ ಖಾನ್ ರವರು ತಮ್ಮನಾಗಿರುವ ಸೊಹೈಲ್ ಖಾನ್ ರವರು ಬಾಲಿವುಡ್ ಚಿತ್ರರಂಗದಲ್ಲಿ ನಟನಾಗಿ ಹಾಗೂ ನಿರ್ಮಾಪಕರಾಗಿ ತಮ್ಮ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಇನ್ನು ಇವರ ಸೀಮಾ ಖಾನ ರವರನ್ನು 1998 ರಲ್ಲಿ ಮದುವೆಯಾಗಿದ್ದಾರೆ. ಇವರು ಕೂಡ ಕ್ಯಾಮರದಿಂದ ದೂರವಿರುತ್ತಾರೆ. ಇವರಿಗೆ ನಿರ್ವಾಣ್ ಹಾಗೂ ಅಸಲ್ಮಾನ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸನ್ನಿ ಡಿಯೋಲ್ ಹಾಗೂ ಪೂಜಾ ಡಿಯೋಲ್ ಧರ್ಮೇಂದ್ರ ರವರ ಸುಪುತ್ರ ನಾಗಿರುವ ಸನ್ನಿಡಿಯೋಲ್ ರವರು 1984 ರಲ್ಲಿ ಪೂಜಾ ಡಿಯೋಲ್ ರವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಸನ್ನಿ ಡಿಯೋಲ್ ರವರ ಪತ್ನಿ ಕೂಡ ಪ್ರಚಾರದಿಂದ ದೂರವಿರುತ್ತಾರೆ.

Leave A Reply

Your email address will not be published.