ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸಚಿವರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ರಾಜ್ಯದ ಎಲ್ಲೆಡೆ ಹಲವಾರು ಸಮುದಾಯಗಳು ತಮಗೆ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದು ಕುಳಿತಿದೆ. ಮಠಾಧೀಶರು ಮೀಸಲಾತಿ ನೀಡದೆ ಹೋದರೆ ಸರ್ಕಾರವನ್ನು ಉರುಳಿಸಲು ಕೂಡ ಆಲೋಚನೆ ಮಾಡುವುದಿಲ್ಲ ಎಂಬ ಪರೋಕ್ಷ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಬಿಎಸ್ ಯಡಿಯೂರಪ್ಪನವರ ರಾಜೀನಾಮೆಯ ಮಾತುಗಳು ಕೂಡ ಮಠಾಧೀಶರ ಬಾಯಿಂದ ಕೇಳಿ ಬಂದಿರುವುದು ನಿಜಕ್ಕೂ ವಿಪರ್ಯಾಸ ಎಂಬಂತೆ ಕಂಡುಬರುತ್ತಿದೆ.‌

ಇನ್ನು ಇಲ್ಲಿ ಮೀಸಲಾತಿ ಹೋ’ರಾಟ ನಡೆಯುತ್ತಿರುವ ಸಂದರ್ಭದಲ್ಲಿ ಸಮುದಾಯದಗಳ ಪರ ತಮ್ಮದೇ ಆದ ಸರ್ಕಾರವನ್ನು ಹೊಂದಿದ್ದರೂ ಕೂಡ ಹಲವಾರು ಸಚಿವರು ನೇರವಾಗಿ ಕೈಜೋಡಿಸಿದ್ದಾರೆ. ತಮ್ಮದೇ ಸರ್ಕಾರ ಇದ್ದರೂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೌದು ಸ್ನೇಹಿತರೇ ತಮ್ಮದೇ ಆದ ಸರ್ಕಾರ ಹೊಂದಿರುವ ಕೆಎಸ್ ಈಶ್ವರಪ್ಪ ಶ್ರೀರಾಮುಲು ಮುರುಗೇಶ ನಿರಾಣಿ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮದೇ ಆದ ಸರ್ಕಾರದ ವಿರುದ್ಧ ಮೀಸಲಾತಿ ಘೋಷಣೆ ಮಾಡಲು ಪ್ರತಿಭಟನೆ ನಡೆಸುತ್ತಿದ್ದಾರೆ

ಹೀಗೆ ಸಚಿವರು ಮತ್ತು ಶಾಸಕರು ಮೀಸಲಾತಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷಕ್ಕೆ ಮುಜುಗರ ಹೆಚ್ಚಾಗುತ್ತಿದೆ ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಲಿದೆ. ಇನ್ನು ಉಳಿದ ಶಾಸಕರೂ ಕೂಡ ಕೇಂದ್ರ ಸರ್ಕಾರ ದತ್ತ ಬೆರಳು ತೋರಿಸಿ ಸುಮ್ಮನಾಗುತ್ತಿದ್ದಾರೆ, ಯಾರು ಕೂಡ ಮೀಸಲಾತಿ ವಿಚಾರವನ್ನು ಬಗೆಹರಿಸೋಣ ಎಂಬ ಆಸಕ್ತಿ ತೋರುತ್ತಿಲ್ಲ. ಕಳೆದ ಬಾರಿ ಇದೇ ರೀತಿ ಸಿದ್ದರಾಮಯ್ಯರವರು ಜಾತಿ ಮೀಸಲಾತಿ ಹಾಗೂ ಜಾತಿ ಎಂಬ ಜೇನುಗೂಡಿಗೆ ಕೈ ಹಾಕಿ ತನ್ನ ಅಧಿಕಾರವನ್ನು ಕಳೆದುಕೊಂಡರು, ಹೀಗಿರುವಾಗ ಬಿಜೆಪಿ ಪಕ್ಷವು ಬಹಳ ಎಚ್ಚರಿಕೆಯಿಂದ ಇಲ್ಲಿ ಹೆಜ್ಜೆ ಇಡಬೇಕಾಗುತ್ತದೆ.

ಅಷ್ಟೇ ಅಲ್ಲದೆ ರಾಜ್ಯದಲ್ಲಿ ಸಚಿವರಾಗಿ ಹಾಗೂ ಶಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ರಾಜಕಾರಣಿಗಳು ಅದೇಗೆ ಒಂದು ಜಾತಿಯ ಹೋರಾಟದಲ್ಲಿ ಭಾಗಿಯಾಗುತ್ತಾರೆ ‌ ಇದಕ್ಕೆ ಅವಕಾಶ ನೀಡಿದ ನಾಯಕರು ಯಾರು? ನಾವೆಲ್ಲರೂ ಒಂದೇ ಎಂಬುವ ಅಂಶವನ್ನು ಎಲ್ಲರಿಗೂ ಸಾರಬೇಕು ಅದನ್ನು ಬಿಟ್ಟು ನಾವೇ ಜನಗಳನ್ನು ವಿಂಗಡನೆ ಮಾಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಬಿಜೆಪಿ ಹೈಕಮಾಂಡ್ ಗರಂ ಆಗಿದೆ. ಅದೇ ಕಾರಣಕ್ಕಾಗಿ ಇದೀಗ ಎಲ್ಲಾ ಸಚಿವರಿಗೆ ಬಿಜೆಪಿ ಪಕ್ಷದ ಹೈಕಮಾಂಡ್ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದು, ಸಮಸ್ಯೆಗಳನ್ನು ಎಲ್ಲರೂ ಬಗೆಹರಿಸುವತ್ತ ಗಮನಹರಿಸಬೇಕು ಅದನ್ನು ಬಿಟ್ಟು ಸಮಸ್ಯೆಗಳನ್ನು ಹೆಚ್ಚು ಮಾಡುತ್ತಾ ಗಮನಹರಿಸಿದರೆ ಖಂಡಿತ ಮುಂದಿನ ದಿನಗಳಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಯಾವ ನಿರ್ಧಾರ ಕೈಗೊಳ್ಳುತ್ತಿರುವ ಬೇಗ ಕೈಗೊಳ್ಳಿ ಎಂದು ಸ್ಪಷ್ಟ ಸಂದೇಶ ರವಾನೆ ಮಾಡಲಾಗಿದೆ.

Comments are closed.