ಜರಿ ಹುಳು ಕಡಿದ್ರೆ ಏನಾಗಬಹುದು ಗೊತ್ತಾ? ನೀವು ಊಹಿಸಲೂ ಸಾಧ್ಯವಿಲ್ಲ ನೋಡಿ ಕಚ್ಚಿದರೆ ಏನು ಮಾಡ್ಬೇಕು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈಗಂತೂ ಮಳೆಗಾಲ, ಈ ಸಮಯದಲ್ಲಿ ಅದೆಲ್ಲೆಲ್ಲೋ ಮೂಲೆಯಲ್ಲಿ ಅವಿತಿರುವ ಹುಳುಗಳೆಲ್ಲ ಮೇಲೆ ಬರುತ್ತವೆ. ಇವುಗಳಲ್ಲಿ ಕೆಲವು ವಿಷ ಜಂತುಗಳೂ ಹೌದು. ಹಾಗಾಗಿ ಅವುಗಳು ಕಡಿಯದಂತೆಯೂ ಜಾಗ್ರತೆವಹಿಸುವುದು ಬಹಳ ಮುಖ್ಯ. ಅದರಲ್ಲೂ ಮಕ್ಕಳನ್ನಂತೂ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಉದಾಹರಣೆಗೆ ನೀವು ಜರಿ ಹುಳದ ಬಗ್ಗೆ ಕೇಳಿರಬಹುದು ಅಥವಾ ನೋಡಿರಲೂ ಬಹುದು. ಇದು ಬಹಳ ಅಪಾಯಕಾರಿ. ಕಚ್ಚಿದರೆ ನೋವಂತೂ ಎಷ್ಟು ಹೊತ್ತು ಇರುತ್ತದೆ ಎಂದು ಹೇಳುವುದೇ ಕಷ್ಟ. ಕನಿಷ್ಟ 3 ಗಂಟೆಗಳ ಕಾಲ ನೋವು, ಊತ ಇದ್ದೇ ಇರುತ್ತದೆ. ಇನ್ನು ಮಕ್ಕಳಿಗೆ ಕಡಿದರೆ ಸಾವು ನೋವುಗಳು ಕೂಡ ಸಂಭವಿಸಬಹುದು. ಈ ಜರಿ ಹುಳ ನೋಡುವುದಕ್ಕೂ ಅಷ್ಟೇ ವಿಚಿತ್ರವಾಗಿರುತ್ತದೆ.

ಜರಿ ಹುಳ ಕಚ್ಚಿದರೆ ಏನು ಮಾಡಬೇಕು??: ಜರಿ ಹುಳ ಹಳ್ಳಿಗಳಲ್ಲಿ ಪಡ್ಚುಳ ಎಂದೂ ಕರೆಯಲ್ಪಡುತ್ತದೆ. ಇದು ಬೇರೆ ಬೇರೆ ಗಾತ್ರಗಳಾಲ್ಲಿರುತ್ತದೆ. ಜರಿ ಹುಳ ಕಚ್ಚಿದರೆ ಮೊದಲು ಆ ಜಾಗಕ್ಕೆ ಬೆಚ್ಚನೆಯ ನೀರನ್ನು ಹಾಕಬೇಕು. ಅಥವಾ ಬೆಚ್ಚನೆಯ ನೀರಿನಲ್ಲಿ ಹುಳ ಕಚ್ಚಿದ ಜಾಗವನ್ನು ಮುಳುಗಿಸಿದರೆ ನೋವು ಕಡಿಮೆಯಾಗುವುದಲ್ಲದೆ, ಊತವೂ ನಿವಾರಣೆಯಾಗುತ್ತದೆ.

ಇನ್ನೊಂದು ಪರಿಹಾರವೆಂದರೆ ಜರಿ ಹುಳ ಕಚ್ಚಿದ ಭಾಗಕ್ಕೆ ಅರಿಶಿನವನ್ನು ಹಚ್ಚುವುದು. ಇದರಲ್ಲಿರುವ ಆಂಟಿ ಬಯೋಟಿಕ್ ಗುಣ ಉರಿಯನ್ನು ಕಡಿಮೆ ಮಾಡುತ್ತದೆ. ಇನ್ನು ತುಳಸಿ ಎಲೆಗಳನ್ನು ಜಜ್ಜಿ ಕಚ್ಚಿದ ಭಾಗದಲ್ಲಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಹಾಗೆಯೇ ಬೆಳ್ಳುಳ್ಳಿ ಜಜ್ಜಿ ಹಚ್ಚುವುದರಿಂದಲೂ ಕೂಡ ಊತ ಕಡಿಮೆಯಾಗುತ್ತದೆ. ಜೇನುತುಪ್ಪವೂ ಕೂಡ ಉತ್ತಮ ಪರಿಹಾರ. ಜರಿ ಹುಳುವಂಥ ವಿಶಕಾರಿ ಹುಳು ಕಚ್ಚಿದರೆ ಈ ಮೇಲಿನ ಕ್ರಮಗಳನ್ನು ಪಾಲಿಸಿದರೆ ನೋವು ಹಾಗೂ ಊತ ಬಹುಪಾಲು ಉಪಶಮನವಾಗುತ್ತದೆ.

Comments are closed.