Health Insurance: ಅತಿ ಸುಲಭವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಹೇಗೆ ಗೊತ್ತೇ? ಈ ಟ್ರಿಕ್ಸ್ ತಿಳಿದುಕೊಳ್ಳಿ, ಎಲ್ಲರಿಗೂ ಒಳ್ಳೆಯದು.
Health Insurance: ಮನುಷ್ಯನಿಗೆ ಬಹಳ ಮುಖ್ಯವಾದದ್ದು ಆರೋಗ್ಯ, ಅದೊಂದಿದ್ದರೆ ಮನುಷ್ಯರು ಏನು ಬೇಕಾದರೂ ಮಾಡಬಹುದು. ಆದರೆ ಆರೋಗ್ಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಕೆಲವು ಮನಸ್ಸಿಗೆ ಬೇಸರ ಆಗುವ ಘಟನೆಗಳಿಂದ ಹಾಗೂ ಇನ್ನಿತರ ಘಟನೆಗಳಿಂದ ಖಾಯಿಲೆಗೆ ಒಳಗಾಗಬಹುದು. ಒಂದು ವೇಳೆ ಹೀಗಾದರೆ, ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚು ಹಣ ಖರ್ಚಾಗುತ್ತದೆ. ಹಾಗಿದ್ದಾಗ ಹೆಲ್ತ್ ಇನ್ಷುರೆನ್ಸ್ ಅಥವಾ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದು. ಆದರೆ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದಕ್ಕಿಂತ ಮೊದಲು ಕೆಲವು ವಿಷಯಗಳನ್ನು ಗಮನದಲ್ಲಿ ಇಡಬೇಕು..
ಉತ್ತಮ ಕವರೇಜ್ ಇರಬೇಕು :- ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವಂಥ ಇನ್ಷುರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಡೇ ಕೇರ್ ಖರ್ಚು, ವಾಹನದಲ್ಲಿ ಓಡಾಟ, ಆಸ್ಪತ್ರೆಗೆ ಅಡ್ಮಿಟ್ ಆಗುವುದಕ್ಕಿಂತ ಮೊದಲು ಹಾಗೂ ನಂತರದ ಖರ್ಚುಗಳು ಈ ಎಲ್ಲದಕ್ಕೂ ಕೆಲವು ಯೋಜನೆಗಳು ಪರಿಹಾರ ನೀಡುತ್ತದೆ. ನೀವು ಆಯ್ಕೆ ಮಾಡುವ ಪಾಲಿಸಿಯಲ್ಲಿ ಇದನ್ನು ನೆನಪಿಡಿ, ಇದು ನಿಮಗೆ ಮಾತ್ರವಲ್ಲದೆ, ನಿಮ್ಮ ಮನೆಯವರಿಗೂ ಪ್ರಯೋಜನ ಕೊಡುತ್ತದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ. ಇದನ್ನು ಓದಿ..WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ
ದುಬಾರಿ ಇರಬಾರದು :- ಈ ಯೋಜನೆ ನಿಮ್ಮ ಅವಶ್ಯಕತೆಗಳನ್ನು ಪೂರೈಸಬೇಕು, ಜೊತೆಗೆ ನಿಮ್ಮ ಆದಾಯಕ್ಕೆ ಸರಿದೂಗುವ ಹಾಗೆ ಇರಬೇಕು. ಹೆಲ್ತ್ ಇನ್ಷುರೆನ್ಸ್ ನಲ್ಲಿ ನಿಮ್ಮ ಬಜೆಟ್ ಸಹ ಮುಖ್ಯವಾಗುತ್ತಫೆ. ಯೋಜನೆಯ ವೆಚ್ಚ ಮತ್ತು ಪ್ರಯೋಜನ ಎರಡನ್ನು ಸಹ ನೀವು ನೋಡಿಕೊಳ್ಳಬೇಕು. ನೀವು ಪಾವತಿ ಮಾಡುವ ಪ್ರೀಮಿಯಂ ಹಾಗೂ ಸಿಗುವ ಕವರೇಜ್ ಎರಡು ಕೂಡ ನಿಮ್ಮ ಸರಿಹೊಂದುವ ಹಾಗೆ ಇರಬೇಕು. ಹೆಲ್ತ್ ಇನ್ಷುರೆನ್ಸ್ ಮಾಡಿಸಿಕೊಂಡ ನಂತರ ಆಗಾಗ ಅದನ್ನು ಚೆಕ್ ಮಡುತ್ತಿರಿ.
ಲೈಫ್ ಟೈಮ್ ಇರುವ ಇನ್ಷುರೆನ್ಸ್ ಆಯ್ಕೆ ಮಾಡಿ :- ನೀವು ಹೆಲ್ತ್ ಇನ್ಷುರೆನ್ಸ್ ಮಾಡಿಸುವಾಗ ಅದರ ಪ್ರಯೋಜನ ಎಷ್ಟು ವರ್ಷಗಳವರೆಗು ಇರುತ್ತದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಅದು ಮುಗಿದ ಬಳಿಕ ನಿಮಗೆ ಹೆಚ್ಚು ಆರೋಗ್ಯ ಸಮಸ್ಯೆಯಾದರೆ ನಿಮಗೆ ತೊಂದರೆ ಆಗುತ್ತದೆ. ಹಾಗಾಗಿ ಲಸಿಫ್ ಟೈಮ್ ಇರುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದನ್ನು ಓದಿ..Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.
High Settlement Ratio: ನೀವು ಯಾವ ಸಂಸ್ಥೆಯಿಂದ ಲೈಫ್ ಇನ್ಷುರೆನ್ಸ್ ಖರೀದಿ ಮಾಡುತ್ತೀರೋ, ಅಲ್ಲಿನ settlement ratio ಅನ್ನು ಚೆಕ್ ಮಾಡಿ. ಬೇರೆ ಬೇರೆ ಕಂಪನಿಗಳಲ್ಲಿ ಬೇರೆ ಬೇರೆ ರೀತಿ settlement ratio ಇರುತ್ತದೆ, ಎಲ್ಲವನ್ನು ಒಮ್ಮೆ ಚೆಕ್ ಮಾಡಿ. ಹೆಚ್ಚಿನ High Settlement Ratio ಇರುವ ವಿಮೆಯನ್ನು ಆಯ್ಕೆ ಮಾಡಿ.
Comments are closed.