WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ

WhatsApp: ವಾಟ್ಸಾಪ್ ಇದು ಈಗ ಬಹುತೇಕ ಎಲ್ಲರೂ ಬಳಸುವ ಅಪ್ಲಿಕೇಶನ್ ಆಗಿದೆ. ವಾಟ್ಸಾಪ್ ಬಳಕೆದಾರರಿಗಾಗಿ ಹಲವು ಹೊಸ ಫೀಚರ್ಸ್ ಗಳನ್ನು ವಾಟ್ಸಾಪ್ ಕೊಡುತ್ತಿದೆ. ಪ್ರೊಫೈಲ್ ಪಿಕ್, ಲಾಸ್ಟ್ ಸೀನ್ ಇದೆಲ್ಲವನ್ನು ನೀವು ಹೈಡ್ ಮಾಡಬಹುದು. ಆದರೆ ಕೆಲವೊಮ್ಮೆ ಕೆಲವು ಮೆಸೇಜ್ ಗಳನ್ನು ಓಪನ್ ಮಾಡುವುದು ಬೇಡ ಎಂದು ಅಂದುಕೊಂಡಿರುತ್ತೇವೆ..ಆದರೆ ಅಂಥ ಮೆಸೇಜ್ ಗಳು ಅಚಾನಕ್ ಆಗಿ ಓಪನ್ ಆಗಿ ಬಿಡುತ್ತದೆ, ಆದರೆ ಇನ್ನುಮೇಲೆ ಈ ಸಮಸ್ಯೆ ಇಲ್ಲ, ರಹಸ್ಯವಾಗಿ ನೀವು ಅಂಥ ಮೆಸೇಜ್ ಗಳನ್ನು ಓದಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

whatsapp tricks | WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ
WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ 2

*ವಾಟ್ಸಾಪ್ ವಿಜೆಟ್ ಗಳು :- ಈ ವಾಟ್ಸಾಪ್ ವಿಜೆಟ್ ನಿಮಗೆ ಅಪ್ಲಿಲೇಶನ್ ಓಪನ್ ಮಾಡದೆಯೇ ಮೆಸೇಜ್ ಓದುವುದಕ್ಕೆ ಸಹಾಯ ಮಾಡುತ್ತದೆ. ಇದನ್ನು ನಿಮ್ಮ ಹೋಮ್ ಸ್ಕ್ರೀನ್ ಗೆ ಹಾಕಿಕೊಳ್ಳಬಹುದು. ಇದನ್ನು ಆಕ್ಟಿವೇಟ್ ಮಾಡಲು ಮೊದಲು ನಿಮ್ಮ ಮೊಬೈಲ್ ನ ಹೋಮ್ ಸ್ಕ್ರೀನ್ ನಲ್ಲಿ ಖಾಲಿ ಸ್ಪೇಸ್ ಇರುವ ಕಡೆ ಹೋಗಿ, ಹೋಲ್ಡ್ ಪ್ರೆಸ್ ಮಾಡಿ, ಈಗ ವಿಜೆಟ್ ಎಂದು ಆಯ್ಕೆ ಬರುತ್ತದೆ, ಅದರಲ್ಲಿ ವಾಟ್ಸಾಪ್ ಚಾಟ್ ಐಕಾನ್ ನೋಡಿ ಅದನ್ನು ಆಯ್ಕೆ ಮಾಡಿ. ಈಗ ಹೋಮ್ ಸ್ಕ್ರೀನ್ ನಲ್ಲಿಯೇ ಎಲ್ಲಾ ಚಾಟ್ಸ್ ಬರುತ್ತದೆ. ಇದನ್ನು ಓದಿ..Toyota Car: ಫಾರ್ಚುನರ್ ಕಾರ್ ಅನ್ನು ಕೂಡ ಮೀರಿಸಿ ಮಾರಾಟವಾಗುತ್ತಿರುವ ಈ ಕಾರ್ ನ ವಿಶೇಷತೆ ಏನು ಗೊತ್ತೇ? ಎಲ್ಲರೂ ಇದೆ ಬೇಕು ಬೇಕು ಎನ್ನಲು ಕಾರಣವೇನು ಗೊತ್ತೇ?

*ಏರ್ ಪ್ಲೇನ್ ಮೋಡ್ :- ವಿಜೆಟ್ ಇಂದ ಫೋನ್ ಬ್ಯಾಟರಿ ಖಾಲಿ ಆಗುತ್ತದೆ ಎನ್ನುವವರು ಈ ವಿಧಾನ ಅನುಸರಿಸಬಹುದು. ಮೊಬೈಲ್ ನಲ್ಲಿ ಏರ್ ಪ್ಲೇನ್ ಮೋಡ್ ಆನ್ ಮಾಡಿ, ಬಳಿಕ ಆ ಮೆಸೇಜ್ ಅನ್ನು ಓದಿ, ನಂತರ ಏರ್ ಪ್ಲೇನ್ ಮೋಡ್ ಆಫ್ ಮಾಡಿ, ಈಗ ನೆಟ್ವರ್ಕ್ ಬರುತ್ತದೆ ಹಾಗೆಯೇ ನೀವು ಮೆಸೇಜ್ ಓದಿದ್ದೀರಾ ಎಂದು ಕಳುಹಿಸಿದವರಿಗೆ ಗೊತ್ತಾಗುವುದಿಲ್ಲ.

*ರೀಡ್ ರೆಸಿಟ್ಸ್ ಆಫ್ ಮಾಡಿ :- ಇದು ಹೆಚ್ಚಿನ ಜನರಿಗೆ ಇಷ್ಟ ಆಗುವುದಿಲ್ಲ. ನೀವು ಅಕೌಂಟ್ ಸೆಟ್ಟಿಂಗ್ಸ್ ಗೆ ಹೋಗಿ, ಅಲ್ಲಿ ಪ್ರೈವೆಸಿ ಸೆಲೆಕ್ಟ್ ಮಾಡಿ, ರೀಡ್ ರೆಸಿಟ್ಸ್ ಆಫ್ ಮಾಡಬಹುದು. ಇದನ್ನು ಆಫ್ ಮಾಡಿದರೆ, ನಾವು ಅವರಿಗೆ ನಾವು ಮೆಸೇಜ್ ಓದಿರುವುದು ಗೊತ್ತಾಗುವುದಿಲ್ಲ, ಅವರಿಗೆ ಅದು ಬ್ಲೂ ಟಿಕ್ ಬರುವುದಿಲ್ಲ. ಅದೇ ರೀತಿ ನಮಗೂ ಕೂಡ ನಮ್ಮ ಮೆಸೇಜ್ ಯಾರು ನೋಡಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಇದನ್ನು ಓದಿ..Motorola Edge 40: ಫೈರ್ – ಬೋಲ್ಟ್ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತೇ?? ದೀರ್ಘ ಬ್ಯಾಟರಿ, ಕರೆ ಮಾಡುವುದರ ಜೊತೆಗೆ ಏನೆಲ್ಲಾ ಇದೆ ಗೊತ್ತೇ? ತಿಳಿದರೆ ಇಂದೇ ಖರೀದಿ ಮಾಡುತ್ತೀರಿ

Comments are closed.