ಯಾವ ಆಸ್ಪತ್ರೆಯು ಬೇಡ ಕೇವಲ ಹೀಗೆ ಮಾಡಿ ಮನೆಯಲ್ಲಿಯೇ ಕಿಡ್ನಿ ಕಲ್ಲುಗಳನ್ನು ಕರಗಿಸಿ, ಹೇಗೆ ಗೊತ್ತೇ??

ಆರೋಗ್ಯ

ನಮಸ್ಕಾರ ಸ್ನೇಹಿತರೇ, ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳು ಎಷ್ಟು ಮುಖ್ಯವಾಗದವು ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಅಂಶವೇ! ಆದರೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಮೂತ್ರಪಿಂಡಗಳಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್ ನಮ್ಮನ್ನು ಭಾದಿಸುವುದು ಖಂಡಿತ.

ಏನಿದು ಕಿಡ್ನಿ ಸ್ಟೋನ್: ಮೂತ್ರಪಿಂಡದಲ್ಲಿ ಸೇರಿಕೊಂಡ ಕೊಳಕನ್ನು ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರು ಕುಡಿದಷ್ಟು ಮೂತ್ರ ಆಚೆಬಂದು ಕಲ್ಮಶಗಳು ಹೊರಹೋಗುತ್ತವೆ. ಹೀಗಾಗದೇ ಇದ್ದಲ್ಲಿ, ಆ ಹೊಲಸುಗಳೇ ಕಲ್ಲಿನ ರೂಪ ತಾಳಿ ಮೂತ್ರದಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎನಿಸಿಕೊಳ್ಳುತ್ತದೆ. ಕಿಡ್ನಿ ಸ್ಟೋನ್ ಸಣ್ಣದಾಗಿದ್ದರೆ ಅದನ್ನು ಮನೆಮದ್ದುಗಳ ಮೂಲಕವೇ ಕರಗಿಸಬಹುದು. ಆದರೆ ಇದು ದೊಡ್ದದಾದರೆ ಅಥವಾ ಅತಿಯಾದ ನೋವು ಭಾದಿಸುತ್ತಿದ್ದರೆ ಶಸ್ತ್ರಚಿಕಿತ್ಸೆಗಳ ಮೊರೆ ಹೋಗಬೇಕಾಗುತ್ತದೆ. ಹಾಗಾದರೆ ಕಿಡ್ನಿ ಸ್ಟೋನ್ ಹೋಗಲಾಡಿಸಲು ಮನೆ ಮದ್ದುಗಳೇನು? ಮುಂದೆ ಓದಿ.

ಮೊದಲನೆಯದಾಗಿ ನೀರು: ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ಇದು ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ. ಕೇವಲ ಬಾಯಾರಿಕೆಯಾದಾಗ ಮಾತ್ರ ನೀರನ್ನು ಕುಡಿಯುವುದಲ್ಲ. ದೇಹದ ಸಂಪೂರ್ಣ ವ್ಯವಸ್ಥೆ ಸುಸ್ಥಿರವಾಗಿರಲು ನೀರು ಬೇಕೆ ಬೇಕು. ಎರಡನೆಯದಾಗಿ ಆಪಲ್ ಸೀಡರ್ ವಿನೇಗರ್ ನ್ನು ನೀರಿಗೆ ಹಾಕಿಕೊಂಡು ದಿನವೂ ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ಕರಗುತ್ತದೆ.

ಮೂರನೆಯದಾಗಿ ತುಳಸಿ ಎಲೆಗಳು ಸಕಲ ರೋಗಕ್ಕೂ ಮದ್ದು. ಕೆಮ್ಮು ಶೀತ ನೆಗಡಿ ಇಂಥ ಯಾವುದೇ ಸಮಸ್ಯೆ ಇದ್ದರೂ ತುಳಸಿ ಎಲೆಗಳನ್ನು ಬಳಸಿ ಕಷಾಯ ಮಾಡಿ ಕುಡಿಯಬಹುದು. ತುಳಸಿ ಎಲೆಗಳು ಹಾಗೂ ಸ್ವಲ್ಪ ಜೇನನ್ನು ಸೇರಿಸಿ ಜಗಿದು ತಿನ್ನುವುದರಿಂದ ಮೂತ್ರಕಲ್ಲಿನ ನೋವು ಉಪಶಮನವಾಗುತ್ತದೆ. ಇದರಲ್ಲಿರುವ ಆಸೆಟಿಮ್ ಆಮ್ಲ ಉತ್ತಮ ಆರೋಗ್ಯ ವರ್ಧಕವಾಗಿದೆ. ನಾಲ್ಕನೆಯದಾಗಿ ಬಾಳೆದಿಂಡು – ಇದರಲ್ಲಿ ಕೂಡ ಸಾಕಷ್ಟು ಔಷಧಿಯ ಗುಣಗಳಿವೆ. ಬಾಳೆದಿಂಡಿನ ರಸ ತೆಗೆದು ಹಾಲಿನಲ್ಲಿ ರಾತ್ರಿಯಿಡಿ ನೆನೆಸಿಡಿ. ಬೆಳಗ್ಗೆ ಇದಕ್ಕೆ ಚಿಟಿಕೆ ಸಕ್ಕರೆ, ಅರಿಶಿನ ಸೇರಿಸಿ ರುಬ್ಬಿ ಜ್ಯೂಸ್ ಮಾಡಿ ಕುಡಿಯಬೇಕು. ಇದರಿಂದ ಕಿಡ್ನಿ ಸ್ಟೋನ್ ಬಹುತೇಕ ಕರಗಿಹೋಗುತ್ತದೆ.

ಇನ್ನು ದಿನವೂ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸಿ. ಹಾಗೂ ದಿನಕ್ಕೊಂದು ಸೇಬುವನ್ನು ತಿನ್ನಿ.ಇನ್ನು ಅಷ್ಟೇ ಅಲ್ಲದೆ ಕಿಡ್ನಿ ಬೀನ್ಸ್ ಕೂಡ ಕಿಡ್ನಿಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ಫೈಬರ್ ಅಂಶ ಮೂತ್ರಪಿಂಡಗಳ ಆರೋಗ್ಯಕ್ಕೆ ಅತ್ಯವಶ್ಯಕ. ಇನ್ನು ದಾಳಿಂಬೆ ಬೀಜದಲ್ಲಿ ನೀರಿನ ಅಂಶವಿದೆ. ಬರಿಯ ನೀರನ್ನು ಕುಡಿಯಲು ಬೇಸರವಾದರೆ ದಾಳಿಂಬೆ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು. ಇನ್ನು ಕಲ್ಲಂಗಡಿ ಬೀಜ ಅತ್ಯಂತ ಪ್ರಭಾವಶಾಲಿ ಔಷಧಿ.

ಕಲ್ಲಂಗಡಿ ಹಣ್ಣು ತಿನ್ನಲು ಎಷ್ಟು ರುಚಿಯೋ ಹಾಗೆ ಅದರ ಬೀಜಗಳು ಕೂಡ ಮೂತ್ರಪಿಂಡದಲ್ಲಿನ ಕಲ್ಲನ್ನು ಹೊರಹಾಕಲು ಅಷ್ಟೇ ಒಳ್ಳೆಯದು. ಈ ಬೀಜಗಳ ಪೇಸ್ಟ್ ತಯಾರಿಸಿ ಒಂದು ಲೋಟ ಕುದಿಸಿದ ನೀರಿಗೆ ಹಾಕಿ ಇನ್ನಷ್ಟು ಕುದಿಸಿ. ನಂತರ ಈ ನೀರನ್ನು ಆರಿಸಿ ಕುಡಿಯಿರಿ. ಇದು ಮೂತ್ರ ಪಿಂಡದಲ್ಲಿನ ಕಲ್ಲು ಕರಗಲು ಸಹಾಯ ಮಾಡುವುದು ಮಾತ್ರವಲ್ಲದೇ ನೋವನ್ನು ಕೂಡ ನಿವಾರಣೆ ಮಾಡುತ್ತದೆ. ಆಲೀವ್ ಆಯಿಲ್ ಕೂಡ ದೇಹಕ್ಕೆ ಬಹಳ ಒಳ್ಳೆಯದು. ಅದನ್ನು ನಿತ್ಯವೂ ಒಂದಿಲ್ಲೊಂದು ರೂಪದಲ್ಲಿ ಬಳಸಿದರೆ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ. ಅರ್ಧ ಚಮಚ ಆಲೀವ್ ಆಯಿಲ್ ಗೆ ಒಂದು ಚಮಚ ನಿಂಬೆ ರಸ ಸೇರಿಸಿ ನಿತ್ಯವೂ ಸೇವಿಸುವುದರಿದ ಸಹಜವಾಗಿಯೇ ಕಿಡ್ನಿ ಸ್ಟೋನ್ ಕರಗುತ್ತದೆ.

ಸ್ನೇಹಿತರೆ, ಈ ಎಲ್ಲಾ ಮನೆಮದ್ದುಗಳು ಖಂಡಿತವಾಗಿಯೂ ಸಾಕಷ್ಟು ಪರಿಣಾಮಕಾರಿ. ಕಿಡ್ನಿ ಸ್ಟೋನ್ ಆದಾಗ ಇವುಗಳನ್ನು ಸೆವಿಸುವುದು ಮಾತ್ರವಲ್ಲ, ದಿನವೂ ಈ ಕೆಲವು ಪದ್ಧತಿಗಳನ್ನು ನಮ್ಮ ಆಹಾರ ಕ್ರಮಗಳ ಜೊತೆಗೆ ರೂಢಿಸಿಕೊಂಡರೆ ಕಿಡ್ನಿ ಸ್ಟೋನ್ ಆಗುವುದನ್ನೂ ಸಹ ಶಾಶ್ವತವಾಗಿ ತಡೆಯಬಹುದು.

Leave a Reply

Your email address will not be published. Required fields are marked *