ಮಹಿಳೆಯರಿಗಾಗಿ ಎಲ್ ಐಸಿಯ ’ಆಧಾರ್ ಶಿಲಾ’ – ಕೇವಲ 29 ರೂಪಾಯಿ ಪಾವತಿಸಿದ್ರೆ ಸಿಗೋದು ಎಷ್ಟು ಲಕ್ಷ ಗೊತ್ತಾ??

ನಮಸ್ಕಾರ ಸ್ನೇಹಿತರೇ ಎಲ್ ಐ ಸಿ ವಿಮಾ ಕಂಪನಿ ಮಕ್ಕಳಿಂದ ಮುದುಕರವರೆಗೂ ಹಲವು ವಿಮಾ ಯೋಜನೆಗಳನ್ನು ಹೊಂದಿದೆ. ಆದರೆ ಈ ಬಾರಿ ಎಲ್ ಐ ಸಿ ರೂಪಿಸಿರುವ ಹೊಸ ವಿಮಾ ಯೋಜನೆ ಮಹಿಳೆಯರಿಗಾಗಿ ಮಾತ್ರ. ಅದುವೇ ’ಆಧಾರ್ ಶಿಲಾ’ ಯೋಜನೆ. ಹೌದು. ಈ ವಿಮಾ ಯೋಜನೆ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗಾಗಿ ಮಾತ್ರ. ಮಹಿಳೆಯರು ದಿನಕ್ಕೆ ಕೇವಲ ೨೯ ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯಾಗಿ ನಾಲ್ಕು ಲಕ್ಷ ಹಣವನ್ನು ಪಡೆಯಬಹುದು. ಇದರ ಇನ್ನೊಂದು ಮುಖ್ಯ ಬೆನಿಫಿಟ್ ಎಂದರೆ ಈ ಹಣದ ಮೇಲೆ ಸಾಲವನ್ನೂ ಕೂಡ ಪಡೆಯಬಹುದು. ಬನ್ನಿ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯೋಣ.

ಈ ಯೋಜನೆಯ ಲಾಭ ಪಡೆಯುವ ಮಹಿಳೆಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು. 20 ವರ್ಷ ಅವಧಿಯ ಈ ಪಾಲಿಸಿಯಲ್ಲಿ ನೀವು 3 ಲಕ್ಷ ರೂಪಾಯಿ ವಿಮೆ ಮಾಡಿಸಿದ್ರೆ ವರ್ಷಕ್ಕೆ 10,649 ರೂಪಾಯಿ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಮೆಚ್ಯೂರಿಟಿಯಲ್ಲಿ 4 ಲಕ್ಷ ರೂ. ವಿಮಾ ಮೊತ್ತ 2 ಲಕ್ಷ ಹಾಗೂ ಮತ್ತು ಬಾಕಿ ಮೊತ್ತವು ಲಾಯಲ್ಟಿ ಬೋನಸ್ ಆಗಿರುತ್ತದೆ. ಇನ್ನು ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಆಧಾರವಾಗಿ ಆಯ್ದುಕೊಳ್ಳಬಹುದು. ವಾರ್ಷಿಕವಾಗಿ ಆಯ್ದ ಪ್ರೀಮಿಯಂ ನ್ನು ನೀವು ಸಮಯಕ್ಕೆ ಪಾವತಿಸಲು ಆಗದಿದ್ದರೆ ನಿಮಗೆ 30 ದಿನಗಳ ಗ್ರೇಸ್ ಅವಧಿ ಸಿಗುತ್ತದೆ ಅದೇ ಮಾಸಿಕ ಆಧಾರದ ಮೇಲೆ ಪ್ರೀಮಿಯಂ ಪಾವತಿಸಲು ಆಯ್ಕೆ ಮಾಡಿದರೆ ನಿಮಗೆ 15 ದಿನಗಳ ಗ್ರೇಸ್ ಅವಧಿ ಸಿಗುತ್ತದೆ.

savings lic | ಮಹಿಳೆಯರಿಗಾಗಿ ಎಲ್ ಐಸಿಯ ’ಆಧಾರ್ ಶಿಲಾ’ – ಕೇವಲ 29 ರೂಪಾಯಿ ಪಾವತಿಸಿದ್ರೆ ಸಿಗೋದು ಎಷ್ಟು ಲಕ್ಷ ಗೊತ್ತಾ??
ಮಹಿಳೆಯರಿಗಾಗಿ ಎಲ್ ಐಸಿಯ ’ಆಧಾರ್ ಶಿಲಾ’ – ಕೇವಲ 29 ರೂಪಾಯಿ ಪಾವತಿಸಿದ್ರೆ ಸಿಗೋದು ಎಷ್ಟು ಲಕ್ಷ ಗೊತ್ತಾ?? 2

ಇನ್ನು ಪಾಲಿಸಿಯ ಹಣ ಕೈಸೇರುವುದು ಹೇಗೆ? ಪಾಲಿಸಿದಾರನು ಪಾಲಿಸಿಯನ್ನು ಆರಂಭಿಸಿದ 5 ವರ್ಷಗಳೊಳಗೆ ನಿಧನರಾದರೆ, ವಿಮಾ ಮೊತ್ತಕ್ಕೆ ಸಮನಾದ ಮೊತ್ತ ಬರುತ್ತದೆ. ವಿಮೆಯ ನಂತರ ಸಾವು ಸಂಭವಿಸಿದಲ್ಲಿ, ನಾಮಿನಿಗೆ ವಿಮಾ ಮೊತ್ತ ಮತ್ತು ಲಾಯಲ್ಟಿ ಬೋನಸ್ ಅನ್ನು ಪಡೆಯುತ್ತಾನೆ. ಯೋಜನೆಯ ಅವಧಿ ಮುಕ್ತಾಯವಾದ ನಂತರ, ನೀವು ಸಂಪೂರ್ಣ ಪಾಲಿಸಿ ಹಣವನ್ನು ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ನಿಮಗೆ ಬೇಕಾದ ಹಾಗೆ ಪಡೆಯಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಎಲ್ ಐ ಸಿ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.

Comments are closed.