ಪಾರು ಪಾತ್ರಧಾರಿಯ ನಿಜವಾದ ವಯಸ್ಸೇಷ್ಟು ಗೊತ್ತಾ?? ಮೊಕ್ಷಿತಾ ರವರಿಗೆ ಒಂದು ಎಪಿಸೋಡಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹೊಸ ಹೊಸ ಧಾರಾವಾಹಿಗಳು ಪ್ರಸಾರವಾದಷ್ಟು ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತೆ. ಹೊಸ ಮುಖಗಳು ಕಾಣಸಿಗತ್ತೆ. ಹಾಗೆಯೇ ತಮ್ಮದೇ ಆದ ಅಭಿನಯ ಚಾತುರ್ಯತೆಯನ್ನೂ ಕೂಡ ತೋರ್ಪಡಿಸುತ್ತಾರೆ. ಹಾಗಾಗಿಯೇ ಹೊಸ ಧಾರಾವಾಹಿಗಳು ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಟಿ ಆರ್ ಪಿಯೂ ಹೆಚ್ಚುತ್ತಿದೆ. ಜೀ ಕನ್ನಡದಲ್ಲಿ ಕಳೆದ ವರ್ಷ ಆರಂಭವಾದ ಜೊತೆ ಜೊತೆಯಲಿ, ಗಟ್ಟಿಮೇಳ ಹಾಗೂ ಪಾರು ಧಾರಾವಾಹಿಗಳು ಇಂದು ಮನೆ ಮಾತಾಗಿವೆ.

ಇನ್ನು ಟಿ ಆರ್ ಪಿಯಲ್ಲಂತೂ ಈ ಮೂರು ಧಾರಾವಾಹಿಗಳ ನಡುವೆಯೇ ಹೆಚ್ವಿನ ಪೈಪೋಟಿಯೂ ಇದೆ. ಅದರಲ್ಲೂ ಪಾರು ಧಾರವಾಹಿ ನೂತನ ಆಯಾಮವನ್ನು ಪಡೆದು ಅದರಲ್ಲಿನ ಪಾತ್ರಧಾರಿಗಳಿಂದ ಮೆಚ್ಚುಗೆಯನ್ನು ಗಳಿಸಿದೆ. ಪಾರು ಧಾರಾವಾಹಿಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಎಂದ್ರೆ ಅದು ಪಾರು. ಒಬ್ಬ ಮುಗ್ಧ ಹಳ್ಳಿ ಹುಡುಗಿ ಪಾರ್ವತಿಯಾಗಿ ಅಭಿನಯಿಸುತ್ತಿರುವ ನಟಿಯ ಹೆಸರು ಮೊಕ್ಷಿತಾ ಪೈ. ಇವರು ಮೂಲತಃ ಮಂಗಳೂರಿನವರು.

ಮೊಕ್ಷಿತಾ ಅಪ್ಪ ಅಮ್ಮ ಜೊತೆಗೆ ಒಬ್ಬ ವಿಕಲಚೇತನ ತಮ್ಮನ ಜೊತೆ ಇದ್ದಾರೆ. ಮೊಕ್ಷಿತಾ ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕೂಡ ಅಷ್ಟೇ ಮೃದು ಸ್ವಭಾವದವರಂತೆ. ತನ್ನ ತಮ್ಮನನ್ನು ಹೆಚ್ಚಾಗಿ ಪ್ರೀತಿಸುವ ಮೊಕ್ಷಿತಾ ಬೆಳೆದಿದ್ದು ಓದಿದ್ದು ಎಲ್ಲಾ ಮಂಗಳೂರಿನಲ್ಲೇ. ಇನ್ನು 1993, ಆಕ್ಟೊಬರ್ 3ಕ್ಕೆ ಇವರ ಜನನ. ಹಾಗಾದ್ರೆ ಮೊಕ್ಷಿತಾ ವಯಸ್ಸೇಷ್ಟು ಅಂತ ನಾವು ಹೇಳೋದತಂತೂ ಬೇಡ ಅಂನ್ಸತ್ತೆ!

ಇನ್ನು ಮೊಕ್ಷಿತಾ ಧಾರಾವಾಹಿಗೆ ಆಯ್ಕೆಯಾಗಿದ್ದೆ ಅವರ ಫೇಸ್ ಬುಕ್ ಪೇಜ್ ನಿಂದ. ಹಳ್ಳಿಯ ಪಾತ್ರಕ್ಕೂ ಸೈ! ಆಧುನಿಕ ಲುಕ್ ಗೂ ಸೈ ಎನ್ನುತ್ತಾರೆ ಮೊಕ್ಷಿತಾ. ಧಾರಾವಾಹಿಯ ಜೊತೆ ಜೊತೆಗೆ ಕೆಲವು ಜಾಹೀರಾತುಗಳಲ್ಲಿಯೂ ಕೂಡ ಮೊಕ್ಷಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮೊಕ್ಷಿತಾ ಪಡೆದುಕೊಳ್ಳೋ ಸಂಭಾವನೆ ಎಷ್ಟು ಗೊತ್ತಾ !? ಸ್ನೇಹಿತರೆ ಮೊಕ್ಷಿತಾ ಪೈ ಅವರು ಪಾರು ಧಾರಾವಾಹಿಗೆ ದಿನವೊಂದಕ್ಕೆ 10 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಪಾರುವಾಗಿ ಮುಗ್ಧ ಮೊಕ್ಷಿತಾ ನಿಮಗೂ ಇಷ್ಟವಾಗಿದ್ರೆ ತಪ್ಪದೆ ಕಮೆಂಟ್ ಮಾಡಿ ಅಭಿಪ್ರಾಯ ಹಂಚಿಕೊಳ್ಳಿ.

Comments are closed.