ಮೋದಿಗೆ ಬಂತು ಕ್ರಿಸ್ ಗೇಲ್ ಮತ್ತು ಆಂಡ್ರೆ ರಸೆಲ್ ರವರಿಂದ ವಿಶೇಷ ಸಂದೇಶ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ವಿಶ್ವವೇ ಕೋರೋಣ ಕಾರಣದಿಂದ ತತ್ತರಿಸಿ ಹೋಗಿದೆ ಇಂತಹ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ಇರುವ ಒಂದೇ ಒಂದು ಆಶಾದಾಯಕ ವಿಷಯವೇನೆಂದರೆ ಅದುವೇ ಭಾರತ. ಹೌದು ಸ್ನೇಹಿತರೇ ಭಾರತದ ಸಂಜೀವಿನಿ ಲಸಿಕೆಗಳು ಇಡೀ ವಿಶ್ವದ ಮೂಲೆ ಮೂಲೆಯನ್ನು ತಲುಪುತ್ತಿದ್ದು ಭಾರತದ ಎಷ್ಟು ವೇಗವಾಗಿ ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ ಎಂದರೇ ಇತ್ತಕಡೆ ಭಾರತೀಯರಿಗೂ ಕೂಡ ಹಂತಹಂತವಾಗಿ ಲಸಿಕೆ ವಿತರಣೆಯಾಗುತ್ತಿದೆ.

ಅಷ್ಟೇ ಅಲ್ಲದೆ ಇದೇ ಸಮಯದಲ್ಲಿ ಹಲವಾರು ಬಡ ದೇಶಗಳಿಗೆ ಉಚಿತ ಲಸಿಕೆ ಕಳುಹಿಸುವ ಕೆಲಸವನ್ನು ಭಾರತ ಮಾಡುತ್ತಿದೆ, ಅಷ್ಟೇ ಅಲ್ಲದೆ ಕೆಲವೊಂದು ಶ್ರೀಮಂತ ರಾಷ್ಟ್ರಗಳಿಗೆ ಕೂಡ ಭಾರತ ಅಗತ್ಯಕ್ಕೆ ತಕ್ಕಂತೆ ಲಸಿಕೆ ರವಾನೆ ಮಾಡುತ್ತಿದ್ದು ವಿಶ್ವದ ಮೂಲೆ ಮೂಲೆಗಳಿಂದ ಭಾರತಕ್ಕೆ ಧನ್ಯವಾದಗಳು ಮಹಾಪೂರವೇ ಹರಿದು ಬರುತ್ತಿದೆ.

ಇದೀಗ ಕೋರೋಣದಿಂದ ಸಾಕಷ್ಟು ತೊಂದರೆಗೆ ಒಳಗಾಗಿರುವ ಜಮೈಕಾ ದೇಶಕ್ಕೆ ನರೇಂದ್ರ ಮೋದಿರವರು ಮನವಿಯಂತೆ 50000 ಲಸಿಕೆಗಳನ್ನು ಕಳುಹಿಸಿ ಕೊಟ್ಟ ಕಾರಣ ಈ ಕುರಿತು ಮಾತನಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ರವರು ಮತ್ತು ಆಂಡ್ರೆ ರಸೆಲ್ ರವರು ಮೋದಿ ಅವರಿಗೆ ವಿಡಿಯೋಗಳ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಇತ್ತೀಚೆಗೆ ಕೆನಡಾ, ಬ್ರೆಸಿಲ್ ದೇಶಗಳು ಸೇರಿದಂತೆ ಹಲವಾರು ದೇಶಗಳು ಭಾರತಕ್ಕೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸುವ ಕೆಲಸ ಮಾಡಿದ್ದಾರೆ.

Comments are closed.