ಜಿಂಕೆಮರಿ ನಂದಿತಾ ಶ್ವೇತಾ ಬದುಕಿನಲ್ಲಿ ಅಂಥದ್ದೇನಾಯಿತು?? ಎಲ್ಲರ ಮನಗೆದ್ದಿದ್ದ ಶ್ವೇತಾ ರವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಇಲ್ಲಿಯವರೆಗೆ ಹಲವಾರು ನಟಿಯರು ಬಂದಿದ್ದಾರೆ. ಕೆಲವರಿಗೆ ನಟನೆ ಮಾಡಿದ ಮೇಲೂ ಕೂಡ ಅದೃಷ್ಟ ಕೈ ಹಿಡಿಯದೇ ಚಿತ್ರಗಳು ಯಶಸ್ವಿಯಾಗದೇ ಕಾಣೆಯಾಗುವುದು ನೀವು ನೋಡಿರುತ್ತೀರಿ. ಆದರೆ ಇಂದು ನಾವು ಹೇಳಹೊರಟಿರುವುದು ನಟಿಸಿದ ಮೊದಲ ಚಿತ್ರದಲ್ಲೇ ಸೂಪರ್ ಹಿಟ್ ಯಶಸ್ಸನ್ನು ಪಡೆದರು ಕೂಡ ಆಕೆಗೆ ಚಿತ್ರರಂಗದಲ್ಲಿ ಅದೃಷ್ಟ ಕೈಹಿಡಿಯಲಿಲ್ಲ ಎಂದು ಹೇಳಬಹುದಾಗಿದೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಲೂಸ್ ಮಾದ ಯೋಗಿ ನಟನೆಯ ಅತ್ಯಂತ ಯಶಸ್ವಿ ಚಿತ್ರ ನಂದ ಲವ್ಸ್ ನಂದಿತ ಚಿತ್ರದ ಶ್ವೇತಾ ರವರ ಕುರಿತಂತೆ. ಹೌದು ಸ್ನೇಹಿತರೆ ಈ ಚಿತ್ರದ ನಂತರ ಎಲ್ಲರೂ ಅವರನ್ನು ನಂದಿತಾ ಶ್ವೇತಾ ಎಂಬುದಾಗಿ ಕರೆದಿದ್ದರು. ಹೌದು ಸ್ನೇಹಿತರೆ ಲೂಸ್ ಮಾದ ಯೋಗಿ ನಟನೆಯ ನಂದ ಲವ್ಸ್ ನಂದಿತಾ ಚಿತ್ರ ಚಿತ್ರದ ನಂತರ ಶ್ವೇತಾ ರವರು ಯಾವುದೇ ಕನ್ನಡ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಇನ್ನೂ ಶ್ವೇತ ಅವರು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ವೇತಾ ರವರು ನಂದ ಲವ್ಸ್ ನಂದಿತ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ.

ಪರಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಶ್ವೇತಾ ರವರು ನಟಿಸಿದ್ದಾರೆ. ಇನ್ನು ಈಗ ಶ್ವೇತಾ ಅವರು ಏನು ಮಾಡುತ್ತಿದ್ದಾರೆ ಎಂದು ನೋಡೋಣ ಬನ್ನಿ. ಹೌದು ಸ್ನೇಹಿತರೆ ಶ್ವೇತಾ ರವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಸಲ್ಮಾನ್ ಖಾನ್ ರವರ ದಬಾಂಗ್-3 ಚಿತ್ರಕ್ಕೆ ಕೂಡ ಕಂಠದಾನವನ್ನು ಮಾಡಿದ್ದರು ಶ್ವೇತಾ ರವರು. ಇನ್ನು ರಾಕಿಂಗ್ ಸ್ಟಾರ್ ಯಶ್ ರವರ ಮೈ ನೇಮ್ ಇಸ್ ಕಿರಾತಕ ಚಿತ್ರದಲ್ಲಿ ಶ್ವೇತ ಅವರು ನಟಿಸಬೇಕಿತ್ತು ಆದರೆ ಆ ಚಿತ್ರ ಕಾರಣಾಂತರಗಳಿಂದ ನಿಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ ಶ್ವೇತಾ ರವರು. ಸದ್ಯಕ್ಕೆ ಶ್ವೇತಾ ರವರು ಒಳ್ಳೆಯ ಚಿತ್ರದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಸದ್ಯ ಯಾವುದೇ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತಿಲ್ಲ ಎಂಬುದು ತಿಳಿದು ಬಂದಿದೆ. ಶ್ವೇತ ರವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ.

Leave a Reply

Your email address will not be published. Required fields are marked *