ಪೆಟ್ರೋಲ್ ಬೆಲೆ ಹೆಚ್ಚಾದರೇ, ಭಕ್ತರು ಮೋದಿಗೆ ಮತ ನೀಡುವುದಿಲ್ಲವೇ?? ಇಲ್ಲಿದೆ ಬಿಜೆಪಿ ಅಭಿಮಾನಿಗಳ ಉತ್ತರ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದಕ್ಕಾಗಿ ಇಡೀ ದೇಶದಲ್ಲಿ ಪೆಟ್ರೋಲ್ ದರ ಏರಿಕೆಯಾಗಿದೆ, ಆರ್ಥಿಕ ತಜ್ಞರ ಪ್ರಕಾರ ಕರೋನ ಸಮಯದಲ್ಲಿ ತೆರಿಗೆ ಕಡಿಮೆ ಸಂಗ್ರಹವಾಗಿತ್ತು ಹಾಗೂ ಇನ್ನೂ ಕನಿಷ್ಠ ಒಂದು ವರ್ಷಗಳ ಕಾಲ ಹಲವಾರು ಕಂಪನಿಯ ಮೂಲಗಳಿಂದ ಹಾಗೂ ಸಾರ್ವಜನಿಕರಿಂದ ನೇರವಾಗಿ ಸಂಗ್ರಹವಾಗುತ್ತಿದ್ದ ತೆರಿಗೆ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಆದ ಕಾರಣ ಪೆಟ್ರೋಲ್ ಬೆಲೆಯನ್ನು ಇಳಿಸದೆ ಕೇಂದ್ರ ಸರ್ಕಾರವು ತನ್ನ ತೆರಿಗೆಯನ್ನು ಹಾಗೆ ಉಳಿಸಿದೆ, ರಾಜ್ಯ ಸರ್ಕಾರಗಳು ಕೂಡ ಪೆಟ್ರೋಲ್ ತೆರಿಗೆಯನ್ನು ಕಡಿಮೆ ಮಾಡದೆ ಸಿಕ್ಕ ಸಮಯದಲ್ಲಿ ತೆರಿಗೆ ಹೆಚ್ಚು ಮಾಡುವುದನ್ನು ಮಾತ್ರ ಬಿಡುತ್ತಿಲ್ಲ, ಈ ನಡುವೆ ಸಾಮಾನ್ಯ ಜನರು ಪೆಟ್ರೋಲ್ ಬೆಲೆ ಏರಿಕೆಯಾದ ತಕ್ಷಣ ದೇಶದ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ವಿಪಕ್ಷಗಳು ಬಿಟ್ಟರೆ ಹಾಗೂ ವಿಪಕ್ಷಗಳ ಕಾರ್ಯಕರ್ತರು ಬಿಟ್ಟರೆ ಮತ್ಯಾರೂ ಕೂಡ ಮೋದಿ ಸರ್ಕಾರದ ವಿರುದ್ಧ ಪೆಟ್ರೋಲ್ ಬೆಲೆ ಏರಿಕೆ ಕುರಿತು ಮಾತನಾಡುತ್ತಿಲ್ಲ.

ಇದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದು ಸುಳ್ಳಲ್ಲ, ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಕೂಡ ಮೋದಿಗೆ ಮತ ನೀಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಇದಕ್ಕೆ ಉತ್ತರ ನೀಡಿರುವ ಮೋದಿ ಅಭಿಮಾನಿಗಳು ಲಕ್ಷ ಲಕ್ಷ ಕೋಟಿ ಹಗರಣ ಮಾಡಿದ ಕಾಂಗ್ರೆಸ್ ಪಕ್ಷವನ್ನು ಆ ಪಕ್ಷದ ಕಾರ್ಯಕರ್ತರು ಬಿಟ್ಟು ಕೊಡಲು ತಯಾರಿಲ್ಲ, ಇನ್ನು ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ನರೇಂದ್ರ ಮೋದಿ ಅವರಿಗೆ ಮತ ನೀಡದೆ ಇರಲು ಸಾಧ್ಯವೇ, ಸಾಧ್ಯವೇ ಇಲ್ಲ ಮೋದಿ ಏನೇ ಮಾಡಿದರೂ ದೇಶಕ್ಕಾಗಿ ಎಂಬ ಉತ್ತರವನ್ನು ನೀಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Comments are closed.