ತಿಂಗಳುಗಟ್ಟಲೆ ಆಲೂಗಡ್ಡೆಯನ್ನು ಕೆಡದಂತೆ ಕಾಪಾಡಲು ಮನೆಯಲ್ಲಿಯೇ ಅನುಸರಿಸಬೇಕಾದ ಸಿಂಪಲ್ ಟಿಪ್ಸ್. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಯಾವ ತರಕಾರಿ ಖಾಲಿ ಆದ್ರೂ ಆಲೂಗಡ್ಡೆ ಒಂದು ಇದ್ದೇ ಇರತ್ತೆ ಅಲ್ವಾ? ಯಾಕಂದ್ರೆ ಆಲೂಗಡ್ಡೆಯಿಂದ ತುರ್ತಾಗಿ ಏನಾದ್ರು ಕರಿದು, ಬೇಯಿಸಿ ಪದಾರ್ಥ ತಯಾರಿಸುವುದು ಸುಲಭ. ಅಲ್ಲದೇ ಆಲೂಗಡ್ಡೆ ಎಂದ್ರೆ ತುಂಬಾ ಜನರಿಗೆ ಅಚ್ಚುಮೆಚ್ಚು. ಮಾಂಸಹಾರ ಹಾಗು ಸಸ್ಯಾಹಾರ ಎಲ್ಲದಕ್ಕೂ ಫಿಟ್ ಈ ಆಲೂಗಡ್ಡೆ. ಹಾಗಾಗಿ ಇದನ್ನು ಉಳಿದ ತರಕಾರಿಗಳಿಗಿಂತ ತುಸು ಹೆಚ್ಚಾಗಿಯೇ ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾರೆ. ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಿ ನೀವು ಕೂಡ ಬೇರೆ ಯಾವ ತರಕಾರಿ ಇಲ್ಲದಿದ್ರೂ ಆಲೂಗಡ್ಡೆಯನ್ನಂತೂ ತಂದು ಇಟ್ಟುಕೊಂಡಿರಬಹುದು ಅಲ್ವಾ? ಆದರೆ ಆಲೂಗಡ್ಡೆಯನ್ನು ಮನೆಯಲ್ಲಿ ಕೆಡದಂತೆ ಸಂಗ್ರಹಿಸಿ ಇಟ್ಟುಕೊಳ್ಳುವುದು ಕೂಡ ಒಂದು ಟಾಸ್ಕ್!

ಸಾಮಾನ್ಯವಾಗಿ ಆಲೂಗಡ್ಡೆಯನ್ನು ತಂದ ಸ್ವಲ್ಪ ದಿನಕ್ಕೆ ಅದರಲ್ಲಿ ಮೊಳಕೆ ಮೂಡಲು ಆರಂಭವಾಗುತ್ತದೆ ಅಥವಾ ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗಲು ಶುರುವಾಗುತ್ತದೆ. ಹೀಗಾದರೆ ಆಲೂಗಡ್ಡೆಯ ರುಚಿಯೂ ಕೆಡುತ್ತದೆ. ಕಹಿ ರುಚಿಯನ್ನು ಕೊಡಲು ಶುರುಮಾಡುತ್ತದೆ. ಹಾಗಾಗಿ ಬಹಳ ಕಾಲ ಆಲೂಗಡ್ಡೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ನಾವಿಲ್ಲಿ ಕೆಲವೊಂದು ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ. ಇವುಗಳನ್ನು ಅನುಸರಿಸಿದರೆ ನೀವು ಖಂಡಿತವಾಗಿಯೂ ಆಲೂಗಡ್ಡೆಯನ್ನು ಕೆಡದಂತೆ ಇಡಬಹುದು.

ಆಲೂಗಡ್ಡೆ ಎಷ್ಟು ರುಚಿ ಎಂದರೆ ಮಕ್ಕಳೂ ಕೂಡ ಬೇಯಿಸಿಕೊಟ್ಟರೆ ಆಲೂಗಡ್ಡೆಯನ್ನು ಖುಷಿಯಿಂದ ತಿನ್ನುತ್ತಾರೆ. ಹಾಗಾಗಿ ಆಲೂಗಡ್ಡೆಯನ್ನು ಸಂಗ್ರಹಿಸಿಟ್ಟುಕೊಳ್ಳಲು ಒಂದು ತಂಪಾದ ಹಾಗೂ ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿಡಿ. ಆಲೂಗಡ್ಡೆಗೆ ಸೂರ್ಯನ ಬೆಳಕು ತಾಕಬಾರದು. ಅಧಿಕ ಉಷ್ಣಾಂಶಕ್ಕೆ ತೆರೆದುಕೊಂಡರೆ ಆಲೂಗಡ್ಡೆ ಮೊಳಕೆ ಒಡೆಯಲು ಶುರುವಾಗುತ್ತದೆ. ಇನ್ನು ಆಲೂಗಡ್ದೆಯನ್ನು ಮಾರುಕಟ್ಟೆಯಿಂದ ತರುವಾಗ ಸರಿಯಾಗಿ ಆರಿಸಿ ತನ್ನಿ. ತುಂಬಾ ಹಸಿಯಾದ ಆಲೂಗಡ್ಡೆ ಒಳ್ಳೆಯದಿರುವುದಿಲ್ಲ. ಆಲೂಗಡ್ಡೆಯನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೆ ಆಲೂಗಡ್ಡೆಯಲ್ಲಿನ ಪಿಷ್ಠ ಸಕ್ಕರೆಯಾಗಿ ಮಾರ್ಪಡುತ್ತದೆ ಹಾಗಾಗಿ ಬೇಯಿಸಿದಾಗ ಇದು ಸಿಹಿಯಾಗಿರುತ್ತದೆ. ಚಿಕ್ಕ ರಂಧ್ರಗಳಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿಟ್ಟರೆ ಆಲೂಗಡ್ಡೆ ಕೆಡದೇ ಹೆಚ್ಚು ಸಮಯ ಇರುತ್ತದೆ.

ಆಲೂಗಡ್ಡೆ ಚಿಕ್ಕ ಚಿಕ್ಕ ಮೊಳಕೆ ಬಂದಿದ್ದರೆ ಅದನ್ನು ತೆಗೆದು ಹಾಕಿ ಸಿಪ್ಪೆ ತೆಗೆದು ಬೇಯಿಸಿ ತಿನ್ನಬಹುದು. ಇನ್ನು ಆಲೂಗಡ್ಡೆ ಹಸಿರಾಗಿದ್ದರೆ ಆ ಭಾಗವನ್ನು ತೆಗೆದುಹಾಕಿ ಬಳಸಿ. ಯಾಕೆಂದರೆ ಅದರಲ್ಲಿರುವ ಸೊಲನೈನ್ ಎಂಬ ರಾಸಾಯನಿಕ ಆಲೂಗಡ್ಡೆಯನ್ನು ಕಹಿಯಾಗಿಸುತ್ತದೆ. ಸ್ನೇಹಿತರೆ ಈ ಮೇಲಿನ ಕ್ರಮಗಳನ್ನು ಅನುಸರಿಸಿದರೆ ದೀರ್ಘಕಾಲದವರೆಗೆ ಆಲೂಗಡ್ಡೆ ಕೆಡದಂತೆ ಇಡಬಹುದು.

Comments are closed.