ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ಮತ್ತೊಬ್ಬರು ಟಾಪ್ ನಟ, ಯಾರು ಮತ್ತು ಯಾವ ಕಾರ್ಯಕ್ರಮ ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಲಾಕ್ಡೌನ್ ಗೂ ಮುನ್ನ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ರಾಬರ್ಟ್ ಪೊಗರು ಯುವರತ್ನ ಬಿಟ್ಟರೆ ಅವುಗಳ ನಂತರ ಅತ್ಯಂತ ಹೆಚ್ಚು ಯಶಸ್ವಿಯಾದಂತ ಚಿತ್ರವೆಂದರೆ ಅದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ಪೆಕ್ಟರ್ ವಿಕ್ರಂ ಚಿತ್ರ. ಹೌದು ಸ್ನೇಹಿತರೆ ಸ್ಯಾಂಡಲ್ ವುಡ್ ನಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಇತ್ತೀಚಿನ ವರ್ಷಗಳಲ್ಲಿ ಯಶಸ್ವಿ ಚಿತ್ರವಿಲ್ಲದೆ ಒದ್ದಾಡುತ್ತಿದ್ದರು.

ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಇನ್ಸ್ಪೆಕ್ಟರ್ ವಿಕ್ರಂ ಚಿತ್ರ ಅವರ ಸಿನಿ ಜೀವನದಲ್ಲಿ ಒಂದು ಉತ್ತಮ ತಿರುವನ್ನು ನೀಡಿದೆ. ಹಿಂದೆ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ನೀಡಿದ ಸಂದರ್ಭದಲ್ಲಿ ಕೆಲವು ಚಿತ್ರಗಳು ಯಶಸ್ವಿಯಾಗಿ ಉದಯೋನ್ಮುಖ ನಟರಾಗಿ ಗುರುತಿಸಿಕೊಂಡಿದ್ದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ನಂತರ ದಿನಗಳಲ್ಲಿ ಅಷ್ಟೊಂದು ಯಶಸ್ಸನ್ನು ಪಡೆದುಕೊಂಡಿರಲಿಲ್ಲ. ಈಗ ಒಂದು ಗೆಲುವಿನ ನಂತರ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಕೈಯಲ್ಲಿ ಮಾಫಿಯಾ ಅಬ್ಬರ ವೀರಂ ಹೀಗೆ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ಈಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರು ಸಿನಿ ರಂಗದಿಂದ ಕಿರುತೆರೆಗೆ ಜಾರುವ ಸೂಚನೆ ನೀಡಿದ್ದಾರೆ. ಹೌದು ಸ್ನೇಹಿತರೆ ಡೈನಾಮಿಕ್ ಪ್ರಿನ್ಸ್ ರವರು ಉತ್ತಮ ನಟನೆ ಜೊತೆಗೆ ಡ್ಯಾನ್ಸ್ ಕೂಡ ಚೆನ್ನಾಗಿ. ಅವರಷ್ಟೇ ಏಕೆ ಅವರ ಪತ್ನಿಯಾಗಿರುವ ರಾಗಿಣಿ ಕೂಡ ಉತ್ತಮ ಡ್ಯಾನ್ಸರ್. ಇನ್ನು ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ಹೊಸ ಡ್ಯಾನ್ಸಿಂಗ್ ರಿಯಾಲಿಟಿ ಶೋಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಜಡ್ಜ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ. ಪ್ರೋಮೋ ಶೂಟಿಂಗ್ ಈಗಾಗಲೇ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕಿರುತೆರೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಡ್ಯಾನ್ಸಿಂಗ್ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *