ಮಂಜು ರವರನ್ನು ಎಂಟರ್ಟೈನ್ಮೆಂಟ್ ನಲ್ಲಿ ಮೀರಿಸುತ್ತಿರುವ ಏಕೈಕ ಸ್ಪರ್ಧಿ ಯಾರು ಗೊತ್ತಾ?? ಕೊನೆ ಕ್ಷಣಗಳಲ್ಲಿ ಬದಲಾಗುತ್ತಿದೆ ವಿನ್ನರ್ ಲೆಕ್ಕಾಚಾರ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಯಾವ ಕ್ಷಣದಲ್ಲಿ ಯಾವ ರೀತಿ ಬೇಕಾದರೂ ಸ್ಪರ್ಧಿಗಳು ಇರಬಹುದು ಅಥವಾ ತಾವು ಮಾಡಿದ ಒಂದೇ ಒಂದು ತಪ್ಪಿನಿಂದ ಮನೆಯಿಂದ ಹೊರಗಡೆ ಬಂದು ಬಿಡಬಹುದು. ಇನ್ನು ಮೊದಲಿಂದಲೂ ಅತಿ ಹೆಚ್ಚು ಪ್ರೇಕ್ಷಕರನ್ನು ಮೊದಲ ದಿನದಿಂದಲೇ ಸೆಳೆದು ಇತ್ತೀಚೆಗೆ ಟ್ರೋಲ್ ಒಳಗಾಗುತ್ತಿದ್ದರೂ ಕೂಡ ಮಂಜು ಪಾವಗಡ ರವರು ಗೆಲ್ಲುವ ನೆಚ್ಚಿನ ಸ್ಪರ್ಧೆ ಎನಿಸಿ ಕೊಂಡಿದ್ದಾರೆ.

ಇವರನ್ನು ಹೊರತು ಪಡಿಸಿದರೇ ಅರವಿಂದ್ ರವರು ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಹಾಗೂ ಇವರಿಗೆ ದಿವ್ಯ ಉರುಡುಗ ಹಾಗೂ ಅರವಿಂದ್ ರವರಿಗೆ ಇರುವ ಪ್ರತ್ಯೇಕ ಅಭಿಮಾನಿ ಬಳಗ ಫೈನಲ್ ತಲುಪಲು ಸಹಾಯ ಮಾಡಬಹುದು ಎಂಬ ಲೆಕ್ಕಾಚಾರಗಳು ಮೊದಲಿನಿಂದಲೂ ಕೇ ಳಿಬರುತ್ತಿತ್ತು.

ಆದರೆ ಅತಿಯಾದರೆ ಅಮೃತವೂ ಅದೇನೋ ಆದಂತೆ ಎಂಬಂತೆ ದಿವ್ಯ ಉರುಡುಗ ಹಾಗೂ ಅರವಿಂದ್ ರವರು ಹೆಚ್ಚು ಹೆಚ್ಚು ಸಮಯ ಕಳೆದು ಕೇವಲ ಅದನ್ನೇ ಹೆಚ್ಚು ಒತ್ತು ನೀಡಿ ತೋರಿಸಿದ ಕಾರಣ ಪ್ರೇಕ್ಷಕರು ಈ ಜೋಡಿಯ ವಿರುದ್ಧ ಈಗಾಗಲೇ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ,ಇನ್ನು ಮಂಜುರವರು ಮೊದಲ ಇನ್ನಿಂಗ್ಸಿನಲ್ಲಿ ದಿವ್ಯ ಸುರೇಶ್ ರವರ ಜೊತೆ ಸೇರಿ ಜನಪ್ರಿಯತೆ ಕಳೆದು ಕೊಂಡರೆ ಮತ್ತೊಂದೆಡೆ ಎರಡನೆ ಇನ್ನಿಂಗ್ಸ್ ನಲ್ಲಿ ಪ್ರಶಾಂತ ಸಂಬರ್ಗಿ ರವರ ವಿಚಾರದಲ್ಲಿ ತೆಗೆದು ಕೊಳ್ಳುತ್ತಿರುವ ನಿಲುವುಗಳು ಅದೆಷ್ಟು ಜನರಿಗೆ ಇಷ್ಟವಾಗುತ್ತಿಲ್ಲ,

ಪ್ರತಿ ವಿಚಾರದಲ್ಲೂ ಪ್ರಶಾಂತ ಸಂಬರ್ಗಿ ರವರ ವಿರುದ್ಧ ಬಾಣ ಬಿಡಲು ಮಂಜು ಪಾವಗಡ ರವರು ಕಾಯುತ್ತಿರುತ್ತಾರೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ, ಟ್ರೊಲ್ ಪೇಜ್ ಗಳಿಗಂತೂ ಮಂಜು ಪಾವಗಡ ರವರು ಹಬ್ಬವಾಗಿ ಬಿಟ್ಟಿದ್ದಾರೆ. ಹೀಗಿರುವಾಗ ಮನೆಯಲ್ಲಿ ಇದೀಗ ಹೊಸ ಗೆಲುವಿನ ಲೆಕ್ಕಾಚಾರ ಕೇಳಿ ಬಂದಿದೆ ಇದಕ್ಕೆಲ್ಲ ಕಾರಣ ಒಂದು ಸಹಾನುಭೂತಿ ಮತ್ತೊಂದು ತಾವು ಹೇಳುವ ಮಾತಿನಿಂದ ಮನೆಯ ಮಂದಿಯೆಲ್ಲ ಟಾರ್ಗೆಟ್ ಮಾಡುತ್ತಿದ್ದರು ಕೂಡ ಪ್ರತಿ ವಿಚಾರದಲ್ಲೂ ನೇರವಾಗಿ ಮಾತನಾಡಿ ಮನೆಯಲ್ಲಿ ತಲ್ಲಣ ಸೃಷ್ಟಿಸುತ್ತಿರುವ ಪ್ರಶಾಂತ ಸಂಬರ್ಗಿ ರವರು ಇದೀಗ ಗೆಲ್ಲುವ ನೆಚ್ಚಿನ ಸ್ಪರ್ಧೆಗಿಳಿಸಿ ಕೊಂಡಿದ್ದಾರೆ.

ಅದರಲ್ಲಿಯೂ ಕಳೆದ ವಾರ ಮಂಜು ಪಾವಗಡ ದಿವ್ಯ ಉರುಡುಗ ವೈಷ್ಣವಿ ಎಲ್ಲರೂ ಸೇರಿ ಪ್ರಶಾಂತ್ ಅವರನ್ನು ಕಳಪೆ ಎಂದು ಟಾರ್ಗೆಟ್ ಮಾಡಿದ್ದರು, ಆದರೆ ಸುದೀಪ್ ರವರು ಕಿಚ್ಚನ ಚಪ್ಪಾಳೆ ನೀಡುವ ಮೂಲಕ ಮತ್ತೊಮ್ಮೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಸಾರಿದರು. ಅಷ್ಟೇ ಅಲ್ಲದೆ ವೈಷ್ಣವಿ ರವರು ಪ್ರಶಾಂತ ಸಂಬರ್ಗಿ ರವರ ಜೊತೆ ನಡೆದುಕೊಂಡ ರೀತಿ ಯಲ್ಲಿ ಯಾವುದೇ ತಪ್ಪಿಲ್ಲ ಎಂದು ಕೂಡ ಸುದೀಪ ಸ್ಪಷ್ಟಪಡಿಸಿದರು. ಹೀಗೆ ಪ್ರತಿ ವಾರವೂ ಕೂಡ ಮನೆಯ ಮಂದಿಯಿಂದ ಟಾರ್ಗೆಟ್ ಆಗಿ ಕೊನೆಯಲ್ಲಿ ಸುದೀಪ್ ರವರಿಂದ ಶಬ್ಬಾಶ್ ಗಿರಿ ಪಡೆಯುತ್ತಿರುವ ಪ್ರಶಾಂತ ಸಂಬರ್ಗಿ ರವರು ಇದೀಗ ಗೆಲ್ಲುವ ನೆಚ್ಚಿನ ಸ್ಪರ್ಧೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Comments are closed.