News from ಕನ್ನಡಿಗರು

ಕುಣಿದು ಕುಪ್ಪಳಿಸಿದ ರಮ್ಯಾ ಫ್ಯಾನ್ಸ್: ಕೊನೆಗೂ ಸಿಹಿ ಸುದ್ದಿ ಕೊಟ್ಟ ರಮ್ಯಾ, ಆದರೆ ಈ ನಿರ್ಧಾರದ ಹಿಂದಿದೆಯೇ ಆ ಮರೆಯಲಾಗದ ನೋವು??

37

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾ ರವರು ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ನಿಜ ಆದರೂ ಕೂಡ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲಿ ಎನ್ನುವುದಾಗಿ ಇಂದಿಗೂ ಕೂಡ ಅವರ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ರಸಿಕರು ಕಾಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ನಟಿ ರಮ್ಯಾರವರು ಅತಿಶೀಘ್ರದಲ್ಲೇ ಗುಡ್ ನ್ಯೂಸ್ ನೀಡುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಿನಿಮಾರಂಗದಲ್ಲಿ ಬ್ಯುಸಿ ಆಗಿದ್ದ ನಟಿ ರಮ್ಯಾ ರವರು ಸಡನ್ನಾಗಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ರಾಜಕೀಯ ಕ್ಷೇತ್ರಕ್ಕೆ ಸೇರಿಕೊಂಡಿದ್ದರು. ಖಂಡಿತವಾಗಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ನಡೆಸಲು ಬರುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಅಂದುಕೊಂಡಿದ್ದರು.

ಆದರೆ ನಟಿ ರಮ್ಯಾ ಅವರು ರಾಜಕೀಯದಲ್ಲಿ ತಮ್ಮ ಸಕ್ರಿಯತೆಯನ್ನು ಹೆಚ್ಚಿಸಿದರು. ಹೀಗಾಗಿ ನಟಿ ರಮ್ಯಾ ರವರು ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ ಇನ್ನುಮುಂದೆ ನಟಿಸುವುದಿಲ್ಲ ಎನ್ನುವುದಾಗಿ ಕೂಡ ಅಭಿಮಾನಿಗಳು ಬೇಸರದಿಂದ ಕುಳಿತಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳು ನಟಿ ರಮ್ಯಾ ರವರು ಮತ್ತೆ ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ ಎಂಬುದಾಗಿ ಹೇಳಲಾಗುತ್ತಿದೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಅವರ ಹಾಗೂ ಡಿಕೆಶಿ ಅವರ ಬೆಂಬಲಿಗರ ನಡುವೆ ನಡೆಯುತ್ತಿರುವಂತಹ ಶೀತಲ ಸಮರ ಎನ್ನುವುದು ಅವರ ಮನಸ್ಸಿಗೆ ಸಾಕಷ್ಟು ದುಃಖವನ್ನು ಉಂಟು ಮಾಡಿದೆ ಎಂದರೆ ತಪ್ಪಾಗಲಾರದು.

ಹೀಗಾಗಿ ರಾಜಕೀಯವನ್ನು ಬಿಟ್ಟು ರಮ್ಯಾರವರು ಮರಳಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬುದಾಗಿ ದೊಡ್ಡಮಟ್ಟದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ನಟಿ ರಮ್ಯಾರವರು ಇನ್ಸ್ಟಾಗ್ರಾಮ್ ಖಾತೆ ಮೂಲಕ ಮತ್ತೆ ನಟಿಸುವ ಎನ್ನುವ ಹಾಗೆ ರಕ್ಷಿತ್ ಅವರನ್ನು ಮೆನ್ಷನ್ ಮಾಡಿದ್ದರು. ಈ ಸುಳಿವು ಸಿಕ್ಕಿದ್ದೇ ತಡ ನಟಿ ರಮ್ಯಾರವರು ಅತಿಶೀಘ್ರದಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ನಡೆಸಲಿದ್ದಾರೆ ಎಂಬುದಾಗಿ ಎಲ್ಲಾ ಕಡೆ ಹರಿದಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಅಧಿಕೃತ ಮಾಹಿತಿಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ರಮ್ಯಾರವರ ಸಿನಿಮಾರಂಗದಲ್ಲಿ ನಟಿಸುವ ನಿರ್ಧಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.