ಅಂತೇ ಕಂತೆ ಬಿಡಿ, ಪುಷ್ಪ ಚಿತ್ರಕ್ಕಾಗಿ ರಶ್ಮಿಕ ಮಂದಣ್ಣ ನವರು ಪಡೆದಿರುವ ಅಸಲಿ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆ ಹಾಗೂ ಯಶಸ್ವಿ ನಟಿ ಯಾರೆಂದು ಕೇಳಿದರೆ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ನಮ್ಮ ಕೊಡಗಿನ ಕುವರಿ ಆಗಿರುವ ರಶ್ಮಿಕ ಮಂದಣ್ಣ ಅವರ ಹೆಸರನ್ನು ಹೇಳಬಹುದಾಗಿದೆ. ಅದರಲ್ಲಿ ಇತ್ತೀಚೆಗೆ ಅವರ ನಟನೆಯ ಪಂಚಭಾಷಾ ಚಿತ್ರವಾಗಿರುವ ಪುಷ್ಪ ಚಿತ್ರದ ಯಶಸ್ಸಿನ ನಂತರವಂತೂ ಅವರ ಬೇಡಿಕೆ ಎನ್ನುವುದು ಬಹುತೇಕ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ.

ಮೊದಲೇ ಅವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ ಈ ಚಿತ್ರದ ಜನಪ್ರಿಯತೆ ಮೇಲೆ ಇನ್ನೂ ಅವರು ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳುವುದು ಕೂಡ ಅನುಮಾನವಾಗಿ ಕಾಣುತ್ತಿವೆ. ಅದೇನೇ ಇರಲಿ ಪುಷ್ಪ ಚಿತ್ರದಲ್ಲಿ ಅವರ ಬೋಲ್ಡ್ ಹಾಗೂ ಗ್ಲಾಮರಸ್ ಅಭಿನಯ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಕೂಡ ಮೆಚ್ಚುವಂತೆ ಮಾಡಿದೆ. ಪುಷ್ಪ ಚಿತ್ರ ವರ್ಲ್ಡ್ ವೈಡ್ 300 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವುದು ಕೂಡ ಇನ್ನೊಂದು ಹೆಮ್ಮೆಯ ಸಾಧನೆಯಾಗಿದೆ. ಇನ್ನು ಪುಷ್ಪ ಚಿತ್ರದ ಎರಡನೇ ಭಾಗಕ್ಕಾಗಿ ದೇಶಾದ್ಯಂತ ಸಿನಿಮಾ ಪ್ರೇಕ್ಷಕರು ಕಾತರರಾಗಿ ಕಾಯುತ್ತಿದ್ದಾರೆ.

rashmika pushpa | ಅಂತೇ ಕಂತೆ ಬಿಡಿ, ಪುಷ್ಪ ಚಿತ್ರಕ್ಕಾಗಿ ರಶ್ಮಿಕ ಮಂದಣ್ಣ ನವರು ಪಡೆದಿರುವ ಅಸಲಿ ಸಂಭಾವನೆ ಎಷ್ಟು ಗೊತ್ತಾ??
ಅಂತೇ ಕಂತೆ ಬಿಡಿ, ಪುಷ್ಪ ಚಿತ್ರಕ್ಕಾಗಿ ರಶ್ಮಿಕ ಮಂದಣ್ಣ ನವರು ಪಡೆದಿರುವ ಅಸಲಿ ಸಂಭಾವನೆ ಎಷ್ಟು ಗೊತ್ತಾ?? 2

ಪುಷ್ಪ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ನವರು ಪಡೆದಿರುವ ಸಂಭಾವನೆ ಕುರಿತಂತೆ ಎಲ್ಲರಿಗೂ ಕೂಡ ಕುತೂಹಲವಿದೆ. ಆ ಕುತೂಹಲವನ್ನು ನಾವು ನಿಮಗೆ ಪರಿಹರಿಸಲು ಬಂದಿದ್ದೇವೆ. ಹೌದು ಗೆಳೆಯರೇ ರಶ್ಮಿಕ ಮಂದಣ್ಣ ನವರು ಸೂಪರ್ ಹಿಟ್ ಪುಷ್ಪ ಚಿತ್ರಕ್ಕಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಮೊದಲ ಭಾಗದ ಯಶಸ್ಸಿನಿಂದಾಗಿ ಎರಡನೇ ಭಾಗಕ್ಕಾಗಿ ರಶ್ಮಿಕ ಮಂದಣ್ಣ ನವರು ಒಂದು ಕೋಟಿ ರೂಪಾಯಿ ಹೆಚ್ಚಿಗೆ ಎಂದರೆ ಒಟ್ಟಿಗೆ ಮೂರು ಕೋಟಿ ರೂಪಾಯಿ ಸಂಭಾವನೆಯನ್ನು ಚಿತ್ರದ ನಿರ್ಮಾಪಕರ ಬಳಿ ಬೇಡಿಕೆಯನ್ನು ಇಟ್ಟಿದ್ದಾರೆ.

Comments are closed.