ದಿನಕ್ಕೊಂದು ಸೀಬೆ ಹಣ್ಣು ತಿಂದರೇ, ನಿಮ್ಮ ದೇಹಕ್ಕಾಗುವ ಪ್ರಯೋಜನಗಳು ಯಾವುವು ಗೊತ್ತಾ??

ಆರೋಗ್ಯ

ನಮಸ್ಕಾರ ಸ್ನೇಹಿತರೇ ಮನುಷ್ಯ ಸಂಘ ಜೀವಿ. ಅನಾದಿ ಕಾಲದಿಂದಲೂ ತನ್ನ ಹೊಟ್ಟೆಪಾಡಿಗಾಗಿ, ಹಣ್ಣು-ತರಕಾರಿಗಳನ್ನು, ಸೊಪ್ಪು-ಸೆದೆಗಳನ್ನು ತಿನ್ನುತ್ತಾ ಬರುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹಣ್ಣು ತಿನ್ನುವುದು ಸಹ ಪ್ಯಾಶನ್ ಆಗಿದೆ. ಸೀಸನ್ ಪ್ರಕಾರ ಸಿಗುವ ಹಣ್ಣುಗಳಿಗೆ ಸಹಜವಾಗಿ ಸ್ವಲ್ಪ ಡಿಮ್ಯಾಂಡ್ ಜಾಸ್ತಿ. ಈಗ ಸದ್ಯ ಸೀಬೆ ಹಣ್ಣಿನ ಸೀಸನ್. ಈಗ ಎಲ್ಲೆಡೆ ಸಿಗುತ್ತಿರುವ ಸೀಬೆ ಹಣ್ಣನ್ನು ತಿನ್ನುವುದರಿಂದ ಸಹ ಬಹಳಷ್ಟು ಉಪಯೋಗಗಳಿವೆ. ಆ ಉಪಯೋಗಗಳು ಯಾವುವೆಂದು ತಿಳಿದರೇ, ನೀವು ಹುಡುಕಿಕೊಂಡು ಸೀಬೆಹಣ್ಣು ತಿನ್ನುತ್ತಿರಿ. ಬನ್ನಿ ಆ ಉಪಯೋಗಗಳು ಯಾವುವು ಎಂದು ತಿಳಿಯೋಣ.

ಸೀಬೆಹಣ್ಣು ಅಥವಾ ಪೇರಲ ಹಣ್ಣು ವಿಟಮಿನ್ ಮತ್ತು ಪ್ರೋಟೀನ್ ಗಳ ಆಗರ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ , ವಿಟಮಿನ್ ಇ, ಮೆಗ್ನಿಷಿಯಂ, ನಾರಿನಂಶ, ಪೊಟ್ಯಾಶಿಯಂ ಮ್ಯಾಂಗನೀಸ್, ಫಾಸ್ಪರಸ್ ಅಂಶದ ಜೊತೆಗೆ ಇನ್ನಿತರ ಹಲವಾರು ಆಂಟಿಆಕ್ಸಿಡೆಂಟ್ ಅಂಶಗಳು ಸಹ ಇವೆ. ವಿಶೇಷವಾಗಿ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ.

ಇನ್ನು ದಿನನಿತ್ಯ ಸೀಬೆ ಹಣ್ಣನ್ನು ತಿನ್ನುವುದರಿಂದ ಮಲಬದ್ದತೆಯನ್ನು ತಡೆಗಟ್ಟಬಹುದು. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಸಿ ವಿಟಮಿನ್ ಇರುವ ಕಾರಣ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ತೂಕ ಇಳಿಸುವವರು, ಡಯಟ್ ಮಾಡುವವರು, ಸೀಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಉತ್ತಮ ಫಲಿತಾಂಶವನ್ನ ಶೀಘ್ರದಲ್ಲಿಯೇ ನೀರಿಕ್ಷಿಸಬಹುದು. ಖಿನ್ನತೆಯಿಂದ ಬಳಲುತ್ತಿರುವ ಗರ್ಭಿಣಿ ಸ್ತ್ರೀಯರು ಸೀಬೆಹಣ್ಣನ್ನ ತಿನ್ನುವುದರಿಂದ ಮಾನಸಿಕ ಸ್ಥಿತಿ ಉತ್ತಮವಾಗುತ್ತದೆ. ಇನ್ನು ಸೀಬೆಹಣ್ಣು ಉತ್ತಮ ಸೌಂದರ್ಯವರ್ಧಕ ಸಹ ಆಗಿದೆ. ಸೀಬೆ ಹಣ್ಣಿನ ಫೇಸ್ ಪ್ಯಾಕ್ ಮಾಡಿಕೊಂಡರೇ ಮುಖದಲ್ಲಿನ ಕಪ್ಪು ಕಲೆ, ಮೊಡವೆಗಳು ಸಹ ನಿವಾರಣೆಯಾಗುತ್ತವೆ.

ಮತ್ತೇಕೆ ತಡ, ಪೃಕೃತಿದತ್ತವಾಗಿ ಸಿಗುವ ಸೀಬೆಹಣ್ಣನ್ನ ಖಾರದ ಪುಡಿ ಹಾಗೂ ಉಪ್ಪು ಹಾಕಿ ಚಪ್ಪರಿಸಿಕೊಂಡು ತಿಂದು ಬಾಯಿತಂಪು ಮಾಡಿಕೊಳ್ಳಿ. ಹಾಗೂ ಗರಿಷ್ಠ ಆರೋಗ್ಯದ ಲಾಭವನ್ನು ಪಡೆಯಿರಿ. ಈ ಬಗ್ಗೆ ನಿಮಗೆ ತಿಳಿದಿರುವ ಆರೋಗ್ಯ ಸಲಹೆಗಳು ಹಾಗೂ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *