ಒಂದು ಕಾಲದ ಟಾಪ್ ನಟಿ ಶ್ರೀಯಾ ರವರ ಮಗಳಿಗೆ ರಾಧಾ ಎಂದು ಹೆಸರಿಡಲು ರಷ್ಯಾ ಕಾರಣವಂತೆ ಅದೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ತಮಿಳು ತೆಲುಗು ಮೊದಲಾದ ಭಾಷೆಗಳಲ್ಲಿ ಅತ್ಯದ್ಭುತ ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದವರು ಶ್ರೀಯಾ ಶರಣ್. ಕೇವಲ ನಟನೆ ಮಾತ್ರವಲ್ಲದೇ ಸಕ್ಕತ್ ಗ್ಲಾಮರ್ ಫೋಟೋಶೂಟ್ ಗಳಲ್ಲಿ ಕೂಡ ಶ್ರೀಯಾ ಕಾಣಿಸಿಕೊಳ್ಳುತ್ತಾರೆ. ಇನ್ನು ಶ್ರೀಯಾ ಅವರ ಮದುವೆಯ ವಿಷಯ ಯಾರಿಗೂ ಗೊತ್ತಿಲ್ಲದೇ ಇದ್ದಿದ್ದು ವಿಶೇಷ.

ಒಬ್ಬ ಪಬ್ಲಿಕ್ ಫಿಗರ್ ಆಗಿದ್ದ ಯಾವುದೇ ವ್ಯಕ್ತಿ ಅವರ ವಯಕ್ತಿಕ ವಿಷಯವನ್ನು ಗುಟ್ಟಾಗಿ ಇಡುವುದು ಕಷ್ಟ ಅದರಲ್ಲೂ ಮದುವೆ ಮಕ್ಕಳ ವಿಷಯಗಳಲ್ಲಂತೂ ಸಾಧ್ಯನೇ ಇಲ್ಲ. ಆದ್ರೆ ಶ್ರೀಯಾ ಶರಣ್ ಅವರದ್ದು ವಿಭಿನ್ನ ಕಥೆ. ಅವರು ಮದುವೆಯಾಗಿ ಮಗುವಿಗೆ ಒಂದು ವರ್ಷವಾದರೂ ಪಬ್ಲಿಕ್ ಮುಂದೆ ಕರೆತರಲೇ ಇಲ್ಲ. ಇನ್ನು ಶ್ರೀಯಾ ಮದುವೆಯಾಗಿದ್ದು ಯಾರನ್ನ ಗೊತ್ತಾ?

ಶ್ರೀಯಾ ಶರಣ್, ರಷ್ಯಾದ ಟೆನಿಸ್ ಆಟಗಾರ ಆಂಡ್ರೀ ಕೊಸ್ಚೀವ್ ಅವರನ್ನು ಮದುವೆಯಾಗಿದ್ದಾರೆ. ಇನ್ನು ಇವರ ಮಗಳ ಹೆಸರು ರಾಧಾ. ರಾಧಾ ಎಂಬ ಹೆಸರು ಭಾರತದಲ್ಲಿ ತುಂಬಾನೇ ದೈವಿಕ ಮಹತ್ವವನ್ನೂ ಪಡೆದಿರುವ ಹೆಸರು. ಈ ಹೆಸರು ರಷ್ಯನ್ನರಿಗೂ ಅಷ್ಟೇ ಚಿರಪರಿಚಿತ. ‘ನಮಗೆ ಮದುವೆ ಆಗಿದೆ ಎಂದ ಕೂಡಲೇ ನನ್ನ ತಾಯಿ ರಾಧಾ ರಾಣಿ ಹುಟ್ಟುತ್ತಾಳೆ ಎಂದಿದ್ದರು. ಆಗ ನನ್ನ ಪತಿ ಆಂಡ್ರೀಗೆ ಅಚ್ಚರಿಯಾಗಿ, ನಿಮ್ಮ ತಾಯಿ ಯಾಕೆ ರಷ್ಯಾದ ಹೆಸರನ್ನು ಹೇಳುತ್ತಿದ್ದಾರೆ ಅಂತ ಕೇಳಿದ್ರು. ರಾಧಾ ಎನ್ನುವುದು ರಷ್ಯಾದ ಹೆಸರಲ್ಲ ಎಂದೆ. ಆದರೆ ರಾಧಾ ಎಂದರೆ ರಷ್ಯನ್ ಭಾಷೆಯಲ್ಲಿ ಖುಷಿ ಎಂದರ್ಥವಂತೆ. ಹಾಗಾಗಿ ನಾವು ಮಗಳಿಗೆ ರಾಧಾ ಶರಣ್ ಕೊಸ್ಚೀವ್ ಎಂದು ನಾಮಕರಣ ಮಾಡಿದ್ದೇವೆ’ ಎಂದು ಶ್ರೀಯಾ ಶರಣ್ ಹೇಳಿದ್ದಾರೆ.

ಒಂದುವರೆ ವರ್ಷಗಳ ಬಳಿಕ ಮಗಳ ಬಗ್ಗೆ ಹಲವು ವಿಚಾರಗಳನ್ನು ಸಂದರ್ಶನಗಳಲ್ಲಿ ಹಂಚಿಕೊಂಡಿದ್ಡಾರೆ ಶ್ರೀಯಾ ಶರಣ್. ಶ್ರಿಯಾ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ರಾಜಮೌಳಿ ನಿರ್ದೇಶನದ ‘೩ ಆರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 7ರಂದು ತೆರೆಗೆ ಬರಲಿದೆ.

Comments are closed.