ಮತ್ತೊಬ್ಬ ಮಹಾನಾಯಕರ ಜೀವನಾಧಾರಿತ ಚಿತ್ರಕ್ಕೆ ಕೈ ಹಾಕಿದ್ದಾರೆಯೇ ಸೂರ್ಯ, ಯಾರ ಜೀವನ ಚರಿತ್ರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ತಮಿಳು ನಟ ಸೂರ್ಯ ಕೇವಲ ತಮಿಳಿಗರಿಗೆ ಮಾತ್ರವಲ್ಲ ಕನ್ನಡಿಗರಿಗೂ ಅಚ್ಚುಮೆಚ್ಚು. ಸೂರ್ಯಅವರಿಗೆ ದೇಶ ವಿದೇಶದಲ್ಲಿಯೂ ಫ್ಯಾಲ್ ಫಾಲೋವರ್ಸ್ ಜಾಸ್ತಿ ಅಂತಾನೇ ಹೇಳಬಹುದು. ಹಾಗಾಗಿ ಪ್ರತಿ ವರ್ಷ ಸೂರ್ಯಅವರ ನಟನೆಯ ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಅಭಿಮಾನಿಗಳ ನಿರೀಕ್ಷೆಯನ್ನು ಪೂರೈಸಲು ಸೂರ್ಯ ರವರು ಮತ್ತೊಮ್ಮೆ ಮತ್ತೊಂದು ಜೀವನಾಧಾರಿತ ಚಿತ್ರದ ಮೂಲಕ ಬರ್ತಿದ್ದಾರೆ. ಬನ್ನಿ ಈ ಕುರಿತು ನಿಮಗೆ ಇಂದು ಮಾಹಿತಿ ನೀಡುತ್ತೇವೆ.

ಸ್ನೇಹಿತರೇ, ನಟ ಸೂರ್ಯ ಅವರ ನಟನೆಯ ’ಸೂರಾರೈ ಪೊಟ್ರು’ ಹಿಟ್ ಬಗ್ಗೆ ನಿಮಗೆಲ್ಲಾ ಗೊತ್ತೆ ಇದೆ. ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಕ್ಯಾಪ್ಟನ್ ಗೋಪಿನಾಥ್ ಆವರ ಜೀವನ ಚರಿತ್ರೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ಕಡಿಮೆ ದರದಲ್ಲಿ ಸಾಮಾನ್ಯನಿಗೂ ಪ್ರಯಾಣ ಮಾಡುವಂಥ ವಿಮಾನ ಕಂಪನಿ ಶುರುಮಾಡುವ ಒಬ್ಬ ಕನಸುಗಾರನಾಗಿ ಸೂರ್ಯ ಅವರ ಅಭಿನಯ ಅತ್ಯದ್ಭುತ. ತಮಗೆ ನಿರ್ವಹಿಸಿದ ಯಾವುದೇ ಪಾತ್ರವನ್ನಾದರೂ ಅಚ್ಚುಕಟ್ತಾಗಿ ನಿಭಾಯಿಸುವ ಸೂರ್ಯ ಅವರು”ಸೂರಾರೈ ಪೊಟ್ರು’ ವಿನಲ್ಲೂ ಮತ್ತೆ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಇದೀಗ ನಟ ಸೂರ್ಯ ರವರು ಮತ್ತೊಂದು ಜೀವನದರಿತ ಚಿತ್ರಕ್ಕೆ ಕೈ ಹಾಕಿದಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ಸೂರ್ಯ ರವರ ನಟನೆಯ ‘ಜೈ ಭೀಮ್’ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ತಮಿಳು ಮೂಲದ ಈ ಚಿತ್ರ ಇದೀಗ ಕನ್ನಡದಲ್ಲಿಯೂ ತನ್ನ ಫಸ್ಟ್ ಲುಕ್ ಬಿಡುಗಡೆ ಗೊಳಿಸಿದೆ. ಹೌದು ಸೂರ್ಯ ಅವರು ತಮಿಳಿನ ’ಜೈ ಭೀಮ್’ ನಲ್ಲಿ ನಟಿಸಿದ್ದು ಕನ್ನಡದಲ್ಲಿಯೂ ಈ ಚಿತ್ರ ಡಬ್ ಆಗಲಿದೆ. ಹಾಗಾಗಿ ಪೋಸ್ಟರ್ ನ್ನು ಕೂಡ ಕನ್ನಡದಲ್ಲಿ ಬಿಡುಗಡೆ ಮಾಡಲಾಗಿದೆ. ’ಜೈ ಭೀಮ್’ ಶೀರ್ಷಿಕೆಯಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕಥೆ ಏನು ಎಂಬುದನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. ’ಜೈ ಭೀಮ್’ ಚಿತ್ರದ ಪೋಸ್ಟರ್ ನಲ್ಲಿ ಸೂರ್ಯ ಕಪ್ಪು ಕೋಟ್ ಹಾಕಿಕೊಂಡು ಲಾಯರ್ ರಂತೆ ಕಾಣುತ್ತಾರೆ. ಇದೀಗ ’ಜೈ ಭೀಮ್’ ಎನ್ನಲು ಹೊರಟಿರುವ ನಟ ಸೂರ್ಯ ಅವರು ಈ ಚಿತ್ರದ ಪೊಸ್ಟರ್ ಮೂಲಕವೇ ಕುತೂಹಲ ಮೂಡಿಸಿದ್ದಾರೆ. ಇನ್ನು ತಮಿಳು, ಕನ್ನಡ ಹಾಗೂ ತೆಲಗು ಭಾಷೆಗಳಲ್ಲಿ ಮೂಡಿಬರಲಿದೆ ಈ ಚಿತ್ರ. ’ಜೈ ಭೀಮ್’ ನ್ನು ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದು, ಸೂರ್ಯ ಅವರ 39 ನೇ ಚಿತ್ರ ಇದಾಗಿದೆ.

Comments are closed.