ಕಾಫಿ ಟೀ ನಲ್ಲಿ ಸಕ್ಕರೆ ಬದಲು ಬೆಲ್ಲ ಬಳಸಿದರೇ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬೆಳಗ್ಗೆ, ಸಂಜೆ ಈ ಎರಡು ಹೊತ್ತುಗಳನ್ನಂತೂ ’ಟೀ ಟೈಮ್’ ಎಂದೇ ಹೇಳುತ್ತಾರೆ. ಸಾಮಾನ್ಯವಾಗಿ ಈ ಸಮಯದಲ್ಲಿ ಚಹ ಅಥವಾ ಕಾಫಿಯನ್ನು ಕುಡಿಯದೇ ಇರುವವರೇ ಕಡಿಮೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ನೀವು ಯಾವುದೇ ಭಾಗಕ್ಕೆ ಹೋದರು ಚಹ ಅಥವಾ ಕಾಫಿ ಸಿಕ್ಕೇ ಸಿಗುತ್ತದೆ. ಅದರಲ್ಳೂ ಈ ಪಾನೀಯಗಳಿಗೆ ಸಕ್ಕರೆಯನ್ನುಹಾಕಿ ಮಾಡಿದರೆ ಅದರ ಟೇಸ್ಟ್ ಕೂಡ ಸೂಪರ್! ಆದ್ರೆ ಈ ಸಕ್ಕರೆಯನ್ನು ದಿನವೂ ಬಳಸುವುದು ಎಷ್ಟು ಸೂಕ್ತ? ಆರೋಗ್ಯಕ್ಕೆ ಎಷ್ಟು ಉತ್ತಮ?

ಸಕ್ಕರೆಯ ಬದಲು ಬೆಲ್ಲ ಬಳಸಿ ನೋಡಿ, ರುಚಿಯಲ್ಲಿ ತುಸು ವ್ಯತ್ಯಾಸವಾಗಬಹುದು. ಆದರೆ ದಿನಕಳೆದಂತೆ ಅದು ಅಭ್ಯಾಸವಾಗುತ್ತದೆ. ಇದರಲ್ಲಿರುವ ಆರೋಗ್ಯ ಪ್ರಯೋಜನಗಳು ಹಲವಾರು. ಹಾಗಾಗಿಯೇ ಮೊದಲಿನಿಂದಲೂ ದಿನವೂ ತಿನ್ನುವ ಆಹಾರಗಳಲ್ಲಿ ಬೆಲ್ಲವನ್ನು ಯಾವುದಾದರೂ ಒಂದು ರೂಪದಲ್ಲಿ ಸೇವಿಸಲಾಗುತ್ತಿದೆ.

ಬೆಲ್ಲದ ಮಹತ್ವ: ’ಬಲ್ಲವರೇ ಬಲ್ಲರು ಬೆಲ್ಲದ ರುಚಿಯ’ ಎಂಬ ಮಾತಿದೆ. ಇದು ಕೇವಲ ಬೆಲ್ಲಕ್ಕೆ ಮಾತ್ರ ಸೀಮಿತವಲ್ಲದ, ಭಾವಾರ್ಥ ಬೇರೆಯೇ ಇರುವ ಮಾತಾಗಿದ್ದರೂ ಬೆಲ್ಲದ ರುಚಿಗೆ ಈ ಮಾತು ಪುಷ್ಠಿ ನೀಡುತ್ತದೆ. ಪೂರ್ವಜರು ಯಾವುದೇ ಕಠಿಣ ಕೆಲಸದ ನಂತರ ಒಂದು ತಂಬಿಗೆ ನೀರು ಹಾಗೂ ಬೆಲ್ಲವನ್ನು ಸೇವಿಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಈ ರೂಢಿಯನ್ನು ಕಾಣಬಹುದು. ನೀರಿನೊಟ್ಟಿಗೆ ಹೀಗೆ ಬೆಲ್ಲವನ್ನು ಸೇವಿಸುವುದರಿಂದ ಶೀತ ನೆಗಡಿಯಂಥ ಖಾಯಿಲೆಗಳು ಹತ್ತಿರವೂ ಸುಳಿಯುವುದಿಲ್ಲ.

ಬೆಲ್ಲದ ಬಳಕೆ: ಬೆಲ್ಲವನ್ನು ದಿನವೂ ಕುಡಿಯುವ ಟೀ ಕಾಫಿ ಯಲ್ಲಿ ಬೆರೆಸಿ ಕುಡಿಯುವುದು ಬಹಳ ಒಳ್ಳೆಯದು. ಸಾಕಷ್ತು ಕಡೆ ’ಬೆಲ್ಲದ ಟೀ’ ಯನ್ನೇ ಕುಡಿಯಲು ಕೊಡುತ್ತಾರೆ. ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿಯೂ ಈ ರುಚಿಕರ ಬೆಲ್ಲದ ಟೀ ಸವಿಯಬಹುದು. ಬೆಲ್ಲದಲ್ಲಿ ಕಬ್ಬಿಣಾಂಶ ಹಾಗೂ ಖನಿಜಾಂಶಗಳಿರುತ್ತವೆ. ಇವು ನಮ್ಮ ದೇಹದ ಮೂಳೆಗಳ ಆರೋಗ್ಯಕ್ಕೆ ಬೇಕೆ ಬೇಕು. ಇನ್ನು ಈ ಬೆಲ್ಲದಲ್ಲಿರುವ ರೋಗನಿರೋಧಕ ಶಕ್ತಿ ಮುಪ್ಪು ಬೇಗ ಬರದಂತೆ ನೋಡಿಕೊಳ್ಳುತ್ತದೆ.

ದಿನವು ಅತಿಯಾಗಿ ಚಹ ಕಾಫಿ ಕುಡಿಯುವುದು ದೇಹಕ್ಕೆ ಒಳ್ಳೆಯದಂತೂ ಅಲ್ಲ, ಆದರೆ ಕುಡಿಯಲೇ ಬೇಕು ಎಂದಿದ್ದರೆ ಸಕ್ಕರೆಯ ಬದಲು ಬೆಲ್ಲವನ್ನೆ ಬಳಸಿ. ಇದು ಕೂದಲಿನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಸಣ್ಣವಯಸ್ಸಿನಲ್ಲಿ ಸಕ್ಕರೆ ಖಾಯಿಲೆ, ರಕ್ತದೊತ್ತಡ ಸಮಸ್ಯೆಗಳು ಬರದಂತೆಯೂ ಇಂಥ ಆರೋಗ್ಯಕರ ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಇನ್ಯಾಕೆ ತಡ.. ಇಂದಿನ ಚಹ ಅಥವಾ ಕಾಫಿಗೆ ಬೆಲ್ಲ ಸೇರಿಸಿ ಸವಿಯುತ್ತೀರಲ್ಲವೇ!

Comments are closed.