ಬೇರೇನೂ ಬೇಡ, ಈ ಚಿಕ್ಕ ಕೆಲಸದ ಮೂಲಕ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ. ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಏಕಾಗ್ರತೆ ಸಿಗುವುದಾದರೂ ಎಲ್ಲಿ. ಇಂದಿನ ಟೆನ್ಶನ್ ಜೀವನದಲ್ಲಿ ಏಕಾಗ್ರತೆ ಎಂಬುದು ಮರೀಚಿಕೆ ಆಗಿದೆ ಅಂದರೆ ಇದಕ್ಕೆ ಬಹು ಮುಖ್ಯ ಕಾರಣ ಗೊಂದಲದ ಬದುಕು.ನಾವು ಇಂದು ಕೇವಲ ಒಂದು ನಿಮಿಷ ನಿರ್ದಿಷ್ಟವಾದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿದೆಯೇ.ಇಲ್ಲ ಖಂಡಿತಾ ಇದು ಸಾಧ್ಯವಾಗುತ್ತಿಲ್ಲ.ಕ್ಷಣ ಕ್ಷಣಕ್ಕೂ ಮನಸ್ಸು ಚಂಚಲ ಆಗುತ್ತಿರುತ್ತದೆ.

ಅಷ್ಟರ ಮಟ್ಟಗೆ ನಾವು ನಮ್ಮ ಬದುಕಿನ ಬಂಡಿಯನ್ನ ವೇಗವಾಗಿ ಓಡಿಸುತ್ತಿದ್ದೇವೆ.ಇದರಿಂದಾಗಿ ಅಘಘಾತಗಳೇ ಹೆಚ್ಚಾಗುತ್ತಿವೆ.ಅಪಘಾತಗಳು ಅಂದಾಗ ವಾಹನಗಳ ವಿಚಾರದಲ್ಲಿ ಆಗುವ ಅಪಘಾತಗಳೇ ಆಗಬೇಕಿಲ್ಲ.ದಿನ ನಿತ್ಯ ಜೀವನದಲ್ಲಿ ಪ್ರತಿ ದಿನದ ಕೆಲಸ ಕಾರ್ಯಗಳಲ್ಲಿ ನಾವು ಸೋತರೆ ಅದೂ ಕೂಡ ಅಪಘಾತವೇ ಆಗುತ್ತದೆ.ಹಾಗಾದರೆ ಈ ರೀತಿಯಾಗಿ ನಮಗೆ ಏಕೆ ಅಪೂರ್ಣತೆ ಕಾಡುತ್ತದೆ ಅಂದರೆ ನಮ್ಮಲ್ಲಿನ ಏಕಾಗ್ರತೆಯ ಕೊರತೆ.ಏಕಾಗ್ರತೆ ರಹಿತ ಕೆಲಸ ಎಂದಿಗೂ ಕೂಡ ನಮ್ಮನ್ನು ಪೂರ್ಣಗೊಳಿಸುವುದಿಲ್ಲ.

ಸರಿ ಈ ಏಕಾಗ್ರತೆ ಗಳಿಸಲು ನಾವು ಏನು ಮಾಡಬೇಕು.ಏನು ಮಾಡಬಾರದು.ಯಾವ ರೀತಿಯ ಕ್ರಮಗಳನ್ನ ಅನುಸರಿಸಬೇಕು ಎಂಬುವುದನ್ನ ಗಮನಿಸುವುದಾದರೆ.ಇಂದು ನಾವು ಹಗಲು-ರಾತ್ರಿಗಳ ವ್ಯತ್ಯಾಸವಿಲ್ಲದಂತೆ ದುಡಿಯುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ.ವೇಗವಾಗಿ ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಎಲ್ಲವೂ ಕೂಡ ದುಬಾರಿ ದುನಿಯಾ.ಹಣ ಎಂಬುದು ಜೀವನದಲ್ಲಿ ಪ್ರಮುಖ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.ಈ ಹಣಕ್ಕಾಗಿ ಒಬ್ಬ ವ್ಯಕ್ತಿ ಒಂದಲ್ಲ,ಎರಡಲ್ಲ ವಿವಿಧ ಕಡೆಯಿಂದ ಆದಾಯದ ಮೂಲಗಳನ್ನು ಗಳಿಸಲು ಪ್ರಯತ್ನಿಸುತ್ತಾನೆ.

ಎರಡು ದೋಣಿಗಳ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದು ಅಪಾಯಕಾರಿ.ಬೇಗ ದಡ ಮುಟ್ಟಲು ಸಾಧ್ಯವಿಲ್ಲ.ಅದರಂತೆ ಏಕಾಗ್ರತೆ ಇಲ್ಲದೆ ನಾವು ಮಾಡುವ ಕೆಲಸ ವ್ಯರ್ಥವೇ ಆಗುತ್ತದೆ.ಸದಾ ಚಂಚಲದಿಂದ ಕೂಡಿರುವ ನಮ್ಮ ಮನಸ್ಸು ನಿರ್ದಿಷ್ಟವಾಗಿ ಒಂದೇ ಕೆಲಸದಲ್ಲಿ ತೊಡಗಲು ಬಿಡುವುದಿಲ್ಲ.ಇಂದು ನಾವು ಒಟ್ಟೊಟ್ಟಿಗೆ ಎರಡ್ಮೂರು ಕೆಲಸಗಳಲ್ಲಿ ಮಾಡಲು ಇಷ್ಟ ಪಡುತ್ತೇವೆ.ಕಾರಣ ಅನಿವಾರ್ಯತೆಗಳು.ಆದದೆ ಸದಾ ಚಂಚಲ ಮನಸ್ಸಿನಿಂದ ಮಾಡಿದ ಕೆಲಸ ಯಶಸ್ಸು ಆಗದು.ಇಂದು ನಾವು ಮಲ್ಟಿ ಟಾಸ್ಕರ್ ಆಗಿದ್ದೇವೆ.ಆದರೆ ಯಾವುದರಲ್ಲೂ ಪರಿಪೂರ್ಣತೆ ಪಡೆಯುವುದಿಲ್ಲ.

ಇನ್ನು ನಾವು ಏಕಾಗ್ರತೆ ಕಾಣಬೇಕಾದರೆ ನಮ್ಮ ಮನಸ್ಸನ್ನು ಒಂದಷ್ಟು ನಿಮಿಷಗಳ ಕಾಲ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು.ನಾವು ಮಾಡುತ್ತಿರುವ ಕೆಲಸದ ಉದ್ದೇಶವನ್ನು ಸ್ಪಷ್ಟಗೊಳಿಸಿಕೊಳ್ಳಬೇಕು .ಆದಷ್ಟು ಅವುಗಳನ್ನು ಕ್ಲಿಷ್ಟವಾಗಿಸಿಕೊಳ್ಳದೆ ಸರಳೀಕರಣವಾಗಿಸಿಕೊಳ್ಳಬೇಕು.ಕೆಲಸಗಳ ಬಗ್ಗೆ ಗೊಂದಲ ಮೂಡಿದಾಗ ಒಂದಷ್ಟು ಸಮಯ ಮೌನವಹಿಸಿ,ಆ ಕೆಲಸದ ಬಗ್ಗೆ ಆಂತರ್ಯದಲ್ಲಿ ಚಿಂತನೆ ಮಾಡಬೇಕು.ಏಕಾಏಕಿ ಯಾವುದೇ ದಿಢೀರ್ ನಿರ್ಧಾರಕ್ಕೆ ಬರಬಾರದು.ಯಾವುದೇ ಕೆಲಸ ಅಥವಾ ಅಧ್ಯಾಯನವನ್ನು ಎಷ್ಟು ಸಮಯ ಮಾಡುತ್ತೇವೆ ಎಂಬುದಕ್ಕಿಂತ ಎಷ್ಟು ಹೊತ್ತು ಏಕಾಗ್ರತೆಯಿಂದ ಅವುಗಳೊಂದಿಗೆ ತೊಡಗಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ.

ಈ ಮೌಲ್ಯಯುತ ಸಮಯ ಎಂಬ ಮಾತೊಂದಿದೆ.ಅಂದರೆ ಕೆಲವು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವ ಕೆಲವು ಅಭ್ಯರ್ಥಿಗಳು ದಿನವೊಂದಕ್ಕೆ 12 ತಾಸು ಓದುತ್ತಾರೆ.ಇನ್ನೂ ಕೆಲವರು ದಿನದಲ್ಲಿ ಕೇವಲ ನಾಲ್ಕು ತಾಸು ಓದಿ ಯಶಸ್ಸು ಪಡೆಯುತ್ತಾರೆ.ಇಲ್ಲಿ ಎಷ್ಟು ಸಮಯ ಓದಿದ್ದಾರೆ ಅನ್ನುವುದಕ್ಕಿಂತ ಕಡಿಮೆ ಅವಧಿಯಲ್ಲಿಯೂ ಕೂಡ ಏಕಾಗ್ರತೆಯಿಂದ ಎಷ್ಟರ ಮಟ್ಟಿಗೆ ಓದಿದ್ದಾರೆ ಎಂಬುದು ಮುಖ್ಯವಾಗುತ್ತದೆ.

ಏಕಾಗ್ರತೆಗೆ ಇನ್ನೊಂದು ಉತ್ತಮ ಉದಾಹರಣೆ ನೀಡುವುದಾದರೆ ಎಂದಿನಂತೆ ಅರ್ಜುನ ಮತ್ತು ಭೀಮ ಇಬ್ಬರು ಶಿವನ ಧ್ಯಾನ ಮಾಡುತ್ತಿರುತ್ತಾರೆ.ಒಂದು ದಿನ ಸಾಕ್ಷಾತ್ ಶಿವ ಪ್ರತ್ಯಕ್ಷವಾಗಿ ನಿಮ್ಮಿಬ್ಬರಲ್ಲಿ ನಿಜವಾದ ಭಕ್ತ ಯಾರೆಂದು ನಿಮಗೆ ಗೊತ್ತ ಎಂದು ಕೇಳುತ್ತಾನೆ.ಆಗ ಅರ್ಜುನ ಎರಡು ಗಂಟೆ ಧ್ಯಾನ ಮಾಡುವ ನಾನೇ ನಿಜವಾದ ಭಕ್ತ ಎಂದೇಳುತ್ತಾನೆ.ಆಗ ಶಿವ ಇಲ್ಲ ಅರ್ಜುನ ನಿಜವಾದ ಭಕ್ತ ಭೀಮ.ಕೇವಲ ಎರಡು ನಿಮಿಷ ಧ್ಯಾನ ಮಾಡಿದರು ಕೂಡ ಅತ್ಯಂತ ಚಿತ್ತಶುದ್ದಿಯಿಂದ ಏಕಾಗ್ರತೆಯಿಂದ ಧ್ಯಾನ ಮಾಡಿ ನನ್ನನ್ನು ಗೆದ್ದಿದ್ದಾನೆ ಎಂದು ಶಿವ ಹೇಳುತ್ತಾನೆ ಹಾಗಾಗಿ ಏಕಾಗ್ರತೆಯೇ ನಮ್ಮನ್ನು ಉತ್ತುಂಗಕ್ಕೇ ಏರಿಸುತ್ತದೆ ಎಂಬುದನ್ನ ಇದರಿಂದ ತಿಳಿಯಬಹುದಾಗಿರುತ್ತದೆ.

Comments are closed.