ಕೇವಲ 400 ರೂಪಾಯಿ ಒಳಗಡೆ ನಿಮಗೆ ಸಿಗುವ ಬೆಸ್ಟ್ ರೀಚಾರ್ಜ್ ಪ್ಲಾನ್ ಗಳು ಯಾವ್ಯಾವು ಗೊತ್ತೇ?? ಇವುಗಳೇ ಬೆಸ್ಟ್ ಎಂದ ನೆಟ್ಟಿಗರು.

ನಮ್ಮ ಭಾರತ ದೇಶದಲ್ಲಿ ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳು ಗ್ರಾಹಕರಿಗೆ ಒಳ್ಳೆಯ ಆಫರ್ ಗಳನ್ನು ನೀಡುತ್ತಿವೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ, ಅನಿಯಮಿತ ಕರೆಗಳು, ಎಸ್.ಎಂ.ಎಸ್ ಗಳು ಎಲ್ಲವೂ ಇದ್ದು, 400 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಒಳ್ಳೆಯ ಆಫರ್ ಗಳನ್ನು ನೀಡಿವೆ. ಈ ಮೂರು ಸಂಸ್ಥೆಗಳು ಗ್ರಾಹಕರಿಗೆ ನೀಡಿರುವ ಪ್ಲಾನ್ ಗಳ ಬಗ್ಗೆ ಮಾಹಿತಿಗಳನ್ನು ತಪ್ಪದೇ ಓದಿ..

ಜಿಯೋ ₹299 ಪ್ರೀಪೇಯ್ಡ್ ಪ್ಲಾನ್ :- ಈ ಯೋಜನೆಯ ಅವಧಿ 28 ದಿನಗಳು, ಈ ಪ್ಲಾನ್ ನಲ್ಲಿ ದಿನನಿತ್ಯ 2ಜಿಬಿ ಡೇಟಾ ಸಿಗುತ್ತದೆ, ಜೊತೆಗೆ ಅನಿಯಮಿತ ಕರೆಗಳು, ಹಾಗೂ ಪ್ರತಿದಿನ 100 ಎಸ್.ಎಂ.ಎಸ್ ಗಳು ಉಚಿತವಾಗಿ ಸಿಗುತ್ತದೆ.
ಜಿಯೋ ₹259 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :- ಇದರ ಮಾನ್ಯತೆ ಪ್ರೀಪೇಯ್ಡ್ ಕ್ಯಾಲೆಂಡರ್ ಅವಧಿಯ ಪ್ರಕಾರ ಇರುತ್ತದೆ. ಈ ಪ್ಲಾನ್ ನಲ್ಲಿ ಪ್ರತಿದಿನ 1.5ಜಿಬಿ ಉಚಿತ ಡೇಟಾ, ಹಾಗೂ ಡೇಟಾ ಮುಗಿದ ಬಳಿಕ, 64kpbs ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಹಾಗೂ ಅನಿಯಮಿತ ಉಚಿತ ಕರೆಗಳು, ಹಾಗೂ ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ. ಇವುಗಳ ಜೊತೆಗೆ ಜಿಯೋ ಅಪ್ಲಿಕೇಶನ್ ಗಳು ಸಹ ಉಚಿತವಾಗಿ ಸಿಗುತ್ತದೆ.

jio airtel vi | ಕೇವಲ 400 ರೂಪಾಯಿ ಒಳಗಡೆ ನಿಮಗೆ ಸಿಗುವ ಬೆಸ್ಟ್ ರೀಚಾರ್ಜ್ ಪ್ಲಾನ್ ಗಳು ಯಾವ್ಯಾವು ಗೊತ್ತೇ?? ಇವುಗಳೇ ಬೆಸ್ಟ್ ಎಂದ ನೆಟ್ಟಿಗರು.
ಕೇವಲ 400 ರೂಪಾಯಿ ಒಳಗಡೆ ನಿಮಗೆ ಸಿಗುವ ಬೆಸ್ಟ್ ರೀಚಾರ್ಜ್ ಪ್ಲಾನ್ ಗಳು ಯಾವ್ಯಾವು ಗೊತ್ತೇ?? ಇವುಗಳೇ ಬೆಸ್ಟ್ ಎಂದ ನೆಟ್ಟಿಗರು. 2

ಏರ್ಟೆಲ್ ₹399 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :- ಈ ಪ್ಲಾನ್ ನ ಅವಧಿ 28 ದಿನಗಳ ವರೆಗೂ ಇರುತ್ತದೆ, ಈ ಯೋಜನೆಯಲ್ಲಿ ಪ್ರತಿದಿನ 2.5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಹಾಗೂ ಅನಿಯಮಿತ ಕರೆಗಳು,ಹಾಗೂ ದಿನಕ್ಕೆ 100ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ. ಜೊತೆಗೆ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ ಸಹ ಉಚಿತವಾಗಿ ಸಿಗುತ್ತದೆ.
ಏರ್ಟೆಲ್ ₹359 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :- ಈ ಪ್ಲಾನ್ ನ ಅವಧಿ ಸಹ 28 ದಿನಗಳ ವರೆಗೂ ಇರುತ್ತಡ್ಸ್. ಈ ಯೋಜನೆಯಲ್ಲಿ ಪ್ರತಿದಿನ 2ಜಿಬಿ ಉಚಿತ ಡೇಟಾ ಸಿಗುತ್ತದೆ, ಜೊತೆಗೆ ಅನಿಯಮಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು, ಇವುಗಳ ಜೊತೆಗೆ, ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್ಸ್, ಹಾಗೂ ಫಾಸ್ಟ್ಯಾಗ್ ನಲ್ಲಿ ₹100 ರೂಪಾಯಿಯ ಕ್ಯಾಶ್ ಬ್ಯಾಕ್ ಸಹ ಸಿಗಲಿದೆ.

ವಿಐ ₹299 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :- ಈ ಪ್ಲಾನ್ ನ ಅವಧಿ 28 ದಿನಗಳವರೆಗೂ ಇರುತ್ತದೆ. ಇದರಲ್ಲಿ ಒಂದು ದಿನಕ್ಕೆ ಉಚಿತ 1.5ಜಿಬಿ ಡೇಟಾ ಸಿಗುತ್ತದೆ. ಹಾಗೂ ಪ್ರತಿದಿನ ಅನಿಗಮಿತ ಕರೆಗಳು, ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ. ಇವುಗಳ ಜೊತೆಗೆ ನೈಟ್ ಬಿಂಜ್ ಆಫರ್ ಸಹ ಇರುತ್ತದೆ.
ವಿಐ ₹359 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :- ಈ ಪ್ಲಾನ್ ನ ಅವಧಿ 28 ದಿನಗಳ ವರೆಗೂ ಇರುತ್ತದೆ. ಇದರಲ್ಲಿ ಒಂದು ದಿನಕ್ಕೆ 2ಜಿಬಿ ಉಚಿತ ಡೇಟಾ ಸಿಗುತ್ತದೆ, ಹಾಗೆಯೇ ಪ್ರತಿದಿನ ಅನಿಯಮಿತ ಕರೆಗಳು, ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ. ಇವುಗಳ ಜೊತೆಗೆ, ವಿ ಮೂವೀಸ್, ಲೈವ್ ಟಿವಿ ಸಿಗುತ್ತದೆ.

Comments are closed.