ಪತ್ನಿಗೆ ಸರ್ಕಾರೀ ನೌಕರಿ ಸಿಕ್ಕಿದ ತಕ್ಷಣ ಆಕೆಯನ್ನು ಕೈಯನ್ನು ಕತ್ತರಿಸಿದ ಗಂಡ. ಅದಕ್ಕೆ ಕಾರಣ ಕೂಡ ಇದ್ಯಂತೆ. ಏನಂತೆ ಗೊತ್ತೇ?

ಪ್ರಪಂಚದಲ್ಲಿ ಕೆಲವೊಮ್ಮೆ ನಾವು ಊಹಿಸದಂತಹ ಘಟನೆಗಳು ನಡೆಯುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಒಬ್ಬರಿಗಾದರು ಸರ್ಕಾರಿ ಕೆಲಸ ಸಿಗಲಿ ಎಂದು ಬಯಸುತ್ತಾರೆ. ಕೆಲಸ ಸಿಕ್ಕರೆ ಸಂತೋಷ ಪಡುತ್ತಾರೆ. ಸರ್ಕಾರಿ ಕೆಲಸದಿಂದ ಏನೆಲ್ಲಾ ಪ್ರಯೋಜನ ಇದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಆದರೆ ಪಶ್ಚಿಮ ಬಂಗಾಳದ, ಕೋಲ್ಕತ್ತಾದಲ್ಲಿ ಒಬ್ಬ ವ್ಯಕ್ತಿ ತನ್ನ ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದೆ ಎಂದು ಆಕೆಯ ಕೈಯನ್ನೇ ಕತ್ತರಿಸಿ ಬಿಟ್ಟಿದ್ದಾನೆ. ಅಲ್ಲದೆ ಇದಕ್ಕೆ ಒಂದು ಕಾರಣವನ್ನು ನೀಡಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಈತ ಮಾಡಿದ ಕೆಲಸಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈತನ ಹೆಸರು ಶೇರ್ ಮೊಹಮ್ಮದ್, ಈಕೆಯ ಪತ್ನಿಯ ಹೆಸರು ರೇಣು ಋತನ್. ಕೋಲ್ಕತ್ತಾದ ಪೂರ್ವ ಬುರ್ದ್ವನ್ ನಲ್ಲಿರುವ ಕೆತುಗ್ರಾಮ್ ನಲ್ಲಿ ಇವರಿಬ್ಬರು ವಾಸವಾಗಿದ್ದರು. ಈತನ ಪತ್ನಿ ರೇಣು, ದುರ್ಗಾಪುರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸಿಂಗ್ ಟ್ರೈನಿಂಗ್ ಪಡೆಯುತ್ತಿದ್ದರು. ಆಕೆಗೆ ಸರ್ಕಾರಿ ಕೆಲಸ ಸಹ ಸಿಕ್ಕಿತು. ಬಹಳ ಸಂತೋಷದಿಂದ ಆಕೆ ಕೆಲಸಕ್ಕೆ ಹೋಗುವ ಹುಮ್ಮಸ್ಸಿನಲ್ಲಿದ್ದಳು, ಆದರೆ ಆಕೆಯ ಗಂಡನಿಗೆ ಹೆಂಡತಿ ಸರ್ಕಾರಿ ಕೆಲಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಯಾಕಂದ್ರೆ, ಮೊಹಮ್ಮದ್ ಗೆ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ.

mohammad | ಪತ್ನಿಗೆ ಸರ್ಕಾರೀ ನೌಕರಿ ಸಿಕ್ಕಿದ ತಕ್ಷಣ ಆಕೆಯನ್ನು ಕೈಯನ್ನು ಕತ್ತರಿಸಿದ ಗಂಡ. ಅದಕ್ಕೆ ಕಾರಣ ಕೂಡ ಇದ್ಯಂತೆ. ಏನಂತೆ ಗೊತ್ತೇ?
ಪತ್ನಿಗೆ ಸರ್ಕಾರೀ ನೌಕರಿ ಸಿಕ್ಕಿದ ತಕ್ಷಣ ಆಕೆಯನ್ನು ಕೈಯನ್ನು ಕತ್ತರಿಸಿದ ಗಂಡ. ಅದಕ್ಕೆ ಕಾರಣ ಕೂಡ ಇದ್ಯಂತೆ. ಏನಂತೆ ಗೊತ್ತೇ? 2

ಆತನಿಗೆ ತನಗೆ ಸರ್ಕಾರಿ ಕೆಲಸ ಸಿಕ್ಕಿಲ್ಲ ಎಂದು ಹೆಂಡತಿಗೆ ಕೆಲಸ ಸಿಕ್ಕ ಕಾರಣ ಆಕೆಯ ಮೇಲೆ ಅಸೂಯೆ ಮೂಡಲು ಶುರುವಾಯಿತು. ಕೆಲಸಕ್ಕೆ ಹೋಗಬೇಡ ಎಂದು ಹೆಂಡತಿಗೆ ಸಾಕಷ್ಟು ಬಾರಿ ಹೇಳಿದನು, ಆದರೆ ಆಕೆ ಗಂಡ ಹೇಳಿದ ಮಾತನ್ನು ಕೇಳಲಿಲ್ಲ, ಕೆಲಸಕ್ಕೆ ಹೋಗೆ, ಹೋಗ್ತೀನಿ ಎಂದು ಹಠ ಹಿಡಿದಳು. ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳವಾಗಿ, ಮೊಹಮ್ಮದ್ ತನ್ನ ಹೆಂಡತಿಯ ಕೈಯನ್ನೇ ಕತ್ತರಿಸಿದ. ಕತ್ತರಿಸಿದ ಅಂಗೈಯನ್ನು ಮನೆಯಲ್ಲೇ ಬಿಟ್ಟು, ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಕತ್ತರಿಸಿರುವ ಕೈಯನ್ನು ತೆಗೆದುಕೊಂಡು ಹೋದರೆ, ಅದನ್ನು ಜೋಡಿಸಿಬಿಡುತ್ತಾರೆ ಎನ್ನುವ ಭಯ ಆತನಿಗೆ ಇತ್ತು. ಕೊನೆಗೆ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Comments are closed.