ಮದುವೆಗೂ ಮುನ್ನವೇ ಸಿಹಿ ಸುದ್ದಿ ಹಂಚಿಕೊಂಡ ನಯನತಾರ ಭಾವಿ ಪತಿ. ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು ಹೇಗೆ ಗೊತ್ತೇ?

ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಪಡೆದುಕೊಂಡಿರುವವರು ನಟಿ ನಯನತಾರಾ. ಇದೀಗ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯ ವಿಚಾರ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಜೋಡಿ ತಮ್ಮ ಮದುವೆಯ ಬಗ್ಗೆ ಎಲ್ಲಿಯೂ ಹೆಚ್ಚಾಗಿ ಹೇಳಿಕೊಂಡಿರಲಿಲ್ಲ. ಆದರೆ ಹಲವು ಮೂಲಗಳಿಂದ ಜೂನ್ 9ರಂದು ಈ ಜೋಡಿಯ ಮದುವೆ ನಡೆಯುತ್ತದೆ ಎನ್ನುವ ವಿಚಾರ ಕೇಳಿ ಬಂದಿತ್ತು. ಇದೀಗ ಆ ಸುದ್ದಿ ನಿಜವೇ ಆಗಿದ್ದು, ವಿಘ್ನೇಶ್ ಶಿವನ್ ಅವರು ಇದರ ಬಗ್ಗೆ ಅಧಿಕೃತವಾದ ಹೇಳಿಕೆ ನೀಡಿದ್ದಾರೆ.

ನಟಿ ನಯನತಾರ ಅವರಿಗೆ ದಕ್ಷಿಣ ಭಾರತದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಇದೆ, ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಸಹ ಇವರು. ಇವರ ಮದುವೆ ಯಾವಾಗ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಲಿದ್ದರು. ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಚಾರ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿದ್ದರು ಸಹ, ಇವರಿಬ್ಬರು ಎಲ್ಲಿಯು ತಮ್ಮಿಬ್ಬರ ಮದುವೆ ಮತ್ತು ಪ್ರೀತಿ ವಿಚಾರದ ಬಗ್ಗೆ ಹೇಳಿಕೊಂಡಿರಲಿಲ್ಲ. ನಾನುಂ ರೌಡಿ ಧಾನ್ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಇವರಿಬ್ಬರಿಗೂ ಪರಿಚಯವಾಗಿ, ಅಲ್ಲಿಂದ ಸ್ನೇಹ ಪ್ರೀತಿ ಶುರುವಾಯಿತು, ಇದೀಗ ಈ ಜೋಡಿ ತಮ್ಮ 7 ವರ್ಷದ ಪ್ರೀತಿಯ ಜೀವನವನ್ನು, ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

nayantara vighnesh shivan | ಮದುವೆಗೂ ಮುನ್ನವೇ ಸಿಹಿ ಸುದ್ದಿ ಹಂಚಿಕೊಂಡ ನಯನತಾರ ಭಾವಿ ಪತಿ. ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು ಹೇಗೆ ಗೊತ್ತೇ?
ಮದುವೆಗೂ ಮುನ್ನವೇ ಸಿಹಿ ಸುದ್ದಿ ಹಂಚಿಕೊಂಡ ನಯನತಾರ ಭಾವಿ ಪತಿ. ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು ಹೇಗೆ ಗೊತ್ತೇ? 2

ಈ ಬಗ್ಗೆ ಮಾತನಾಡಿರುವ ವಿಘ್ನೇಶ್ ಶಿವನ್ ಅವರು, ಇಷ್ಟು ಸಮಯ ತಮಗೆ ಪ್ರೋತ್ಸಾಹ ನೀಡಿ, ಸಪೋರ್ಟ್ ಮಾಡಿದ ಎಲ್ಲಾ ಅಭಿಮಾನಿಗಳಿಗೂ ಮತ್ತು ಮಾಧ್ಯಮದವರಿಗೂ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಮುಂದಿನ ಸಿನಿಮಾ ಖ್ಯಾತ ನಟ ಅಜಿತ್ ಅವರೊಡನೆ ಮಾಡುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಜೊತೆಗೆ ನಯನತಾರ ಹಾಗೂ ತಮ್ಮ ಮದುವೆ ಜೂನ್ 9ರಂದು ಮಹಾಬಲಿಪುರಂ ನಲ್ಲಿ ನಡೆಯಲಿದೆ ಎನ್ನುವ ಸುದ್ದಿಯನ್ನು ತಿಳಿಸಿದ್ದಾರೆ. 7 ಮತ್ತು 8ನೇ ತಾರೀಕು ಅರಿಶಿನದ ಶಾಸ್ತ್ರ ನಡೆಯುತ್ತದೆ ಎಂದು ಹೇಳಿದ್ದಾರೆ ವಿಘ್ನೇಶ್ ಶಿವನ್. ಮಹಾಬಲಿಪುರಂ ನಲ್ಲಿ ಮದುವೆಯ ಬಳಿಕ, ಚೆನ್ನೈನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಳ್ಳಲಿದೆ ಈ ಜೋಡಿ. ಇನ್ನು ಅಭಿಮಾನಿಗಳು ಇವರಿಬ್ಬರ ಮದುವೆಯ ಸುಂದರ ಕ್ಷಣಗಳನ್ನು ಕಣ್ಣುತುಂಬಿಕೊಳ್ಳಲು ಕಾಯುತ್ತಿದ್ದಾರೆ.

Comments are closed.