ನಿಖಿಲ್ ಮಗನ ನಾಮಕರಣಕ್ಕೆ ಕರೆಯದೆ ಹೋದರೂ ಕೂಡ ರಾಧಿಕಾ ಕುಮಾರಸ್ವಾಮಿ ಕಳುಹಿಸಿಕೊಟ್ಟ ಉಡುಗೊರೆ ಏನು ಗೊತ್ತೇ?

ದೇವೇಗೌಡರ ಕುಟುಂಬದಲ್ಲಿ ಈಗ ಸಂಭ್ರಮದ ವಾತವಾರಣ ಮನೆಮಾಡಿದೆ. ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಮುದ್ದಿನ ಮಗನಿಗೆ ನಿನ್ನೆ ನಾಮಕರಣ ಶಾಸ್ತ್ರ ನಡೆದಿದೆ. 2020ರ ಏಪ್ರಿಲ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅವರೊಡನೆ ಮದುವೆಯಾದರು. ಕಳೆದ ವರ್ಷ 2021ರ ಸೆಪ್ಟೆಂಬರ್ ನಲ್ಲಿ ಮಗುವಿಗೆ ಜನ್ಮ ನೀಡಿದರು ರೇವತಿ. ನಿನ್ನೆಯಷ್ಟೇ ಇವರ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದ್ದು, ನಿಖಿಲ್ ರೇವತಿ ಅವರ ಮಗುವಿಗೆ ರಾಧಿಕಾ ಕುಮಾರಸ್ವಾಮಿ ಅವರು ಕಲಿಸಿಕೊಟ್ಟಿರುವ ಉಡುಗೊರೆ ಏನು ಗೊತ್ತಾ?

ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಇಲ್ಲಿಯವರೆಗೂ ತಮ್ಮ ಮುದ್ದು ಮಗನ ಮುಖವನ್ನು ರಿವೀಲ್ ಮಾಡಿರಲಿಲ್ಲ. ಸೋಷಿಯಲ್ ಮೀಡಿಯದಲ್ಲಿ ಮಗುವನ್ನು ಪರಿಚಯ ಮಾಡುವುದಿಲ್ಲ ಎಂದಿದ್ದರು. ಇದೀಗ ನಾಮಕರಣ ಶಾಸ್ತ್ರದಂದು ಮಗುವನ್ನು ಎಲ್ಲರಿಗೂ ಪರಿಚಯ ಮಾಡಿದ್ದಾರೆ. ನಿನ್ನೆ ಬೆಂಗಳೂರಿನ, ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಇವರ ಮಗುವಿನ ನಾಮಕರಣ ನಡೆದಿದೆ. ನಿನ್ನೆ ಬೆಳಗ್ಗೆ 10:30 ರಿಂದ 12;20ರ ವರೆಗೂ ನಡೆದ ಶುಭಲಗ್ನದಲ್ಲಿ ಇವರ ಮಗುವಿನ ನಾಮಕರಣ ಶಾಸ್ತ್ರ ನಡೆದಿದೆ. ಕುಟುಂಬದವರು ಪ್ರಪೌತ್ರ ಜನನ ಶಾಂತಿ, ನಾಮಕರಣ ಮತ್ತು ಕನಕಾಭಿಷೇಕ ಮಾಡಿಸಿದ್ದಾರೆ. ಈ ಶುಭ ಸಮಯದಲ್ಲಿ ದೇವೇಗೌಡದ ಇಡೀ ಕುಟುಂಬ ಪಾಲ್ಗೊಂಡಿತ್ತು.

avyaan | ನಿಖಿಲ್ ಮಗನ ನಾಮಕರಣಕ್ಕೆ ಕರೆಯದೆ ಹೋದರೂ ಕೂಡ ರಾಧಿಕಾ ಕುಮಾರಸ್ವಾಮಿ ಕಳುಹಿಸಿಕೊಟ್ಟ ಉಡುಗೊರೆ ಏನು ಗೊತ್ತೇ?
ನಿಖಿಲ್ ಮಗನ ನಾಮಕರಣಕ್ಕೆ ಕರೆಯದೆ ಹೋದರೂ ಕೂಡ ರಾಧಿಕಾ ಕುಮಾರಸ್ವಾಮಿ ಕಳುಹಿಸಿಕೊಟ್ಟ ಉಡುಗೊರೆ ಏನು ಗೊತ್ತೇ? 2

ಇನ್ನು ನಿಖಿಲ್ ರೇವತಿ ದಂಪತಿಯ ಮುದ್ದಿನ ಮಗುವಿಗೆ ಅವ್ಯಾನ್ ದೇವ್ ಎಂದು ಹೆಸರನ್ನು ಇಡಲಾಗಿದೆ. ಈ ಹೆಸರು ಬಹಳ ವಿಭಿನ್ನವಾಗಿದೆ ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಸಹ ನಿಖಿಲ್ ಕುಮಾರಸ್ವಾಮಿ ಅವರ ಮಗುವಿಗೆ ಭರ್ಜರಿಯಾದ ಉಡುಗೊರೆಯೊಂದನ್ನು ಕಳಿಸಿದ್ದಾರೆ. ಅವ್ಯಾನ್ ದೇವ್ ಗಾಗಿ ವಿಶೇಷವಾಗಿ ಚಿನ್ನದ ಸರವನ್ನು ಕಳಿಸಿದ್ದಾರೆ ರಾಧಿಕಾ ಕುಮಾರಸ್ವಾಮಿ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಾಮಕರಣ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳು ಸಹ ವೈರಲ್ ಆಗುತ್ತಿದೆ.

Comments are closed.