ಅತ್ಯುತ್ತಮ ಆಟಗಾರ ರಿಷಬ್ ಪಂತ್ ರವರ ಸ್ಥಾನಕ್ಕೆ ಕುತ್ತು ತರುತ್ತಿರುವ ಆಟಗಾರ ಯಾರು ಗೊತ್ತೇ?? ಸ್ಥಾನ ಕಳೆದುಕೊಳ್ತಾರಾ ಪಂತ್?? ಯಾರು ಗೊತ್ತೇ??

ಐಪಿಎಲ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡುವ ಆಟಗಾರರನ್ನು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಐಪಿಎಲ್ ಮುಗಿದಿದ್ದು, ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳು ಜೂನ್ 9ರಂದು ಶುರುವಾಗಬೇಕಿದೆ. ಈಗಾಗಲೇ ಭಾರತ ಕ್ರಿಕೆಟ್ ತಂಡವು ಈ ಪಂದ್ಯಗಳಿಗೆ ಆಯ್ಕೆಯಾಗಿರುವ 18 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಇವರ್ಯಾರು ಇಲ್ಲದೆ, ಕೆ.ಎಲ್.ರಾಹುಲ್ ನಾಯಕನಾಗಿ, ಪಂದ್ಯಗಳು ನಡೆಯಲಿದೆ. ಈ ಬಾರಿ ರಿಷಬ್ ಪಂತ್ ಸಹ ಭಾರತ ತಂಡದ ಪರವಾಗಿ ಆಡುತ್ತಾರೆ ಎನ್ನಲಾಗಿತ್ತು, ಆದರೆ ಈಗ ರಿಷಬ್ ಪಂತ್ ಅವರಿಗೆ ಕಾಂಪಿಟೇಶಮ್ ಎನ್ನುವಂತೆ ಮತ್ತೊಬ್ಬ ಆಟಗಾರ ಇದ್ದಾರೆ..

ಆ ಆಟಗಾರ ಮತ್ಯಾರು ಅಲ್ಲ, ಈ ವರ್ಷ ಐಪಿಎಲ್ ನಲ್ಲಿ ನಮ್ಮ ಆರ್.ಸಿ.ಬಿ ತಂಡದ ಪಾಲಿಗೆ ಅದ್ಭುತವಾದ ಫಿನಿಷರ್ ಆಗಿದ್ದ ದಿನೇಶ್ ಕಾರ್ತಿಕ್ ಅವರು. ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ತಂಡದ ಗೆಲುವಿಗೆ ಪ್ರಮುಖ ಕಾರಣ ಆಗಿದ್ದರು. ಆರ್.ಸಿ.ಬಿ ಪರವಾಗಿ ಆಡಿದ 16 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 330 ರನ್ ಗಳಿಸಿದರು, ಇವ ಸ್ಟ್ರೈಕ್ ರೇಟ್ 183.33 ಇತ್ತು. ಆರ್.ಸಿ.ಬಿ ತಂಡಕ್ಕೆ ಉತ್ತಮವಾದ ಫಿನಿಷರ್ ಸ್ಥಾನಕ್ಕೆ ಬಂದ ಡಿಕೆ, ಈ ಸಾಲಿನಲ್ಲಿ ನೀಡಿದ ಅದ್ಭುತವಾದ ಪ್ರದರ್ಶನದಿಂದ ಭಾರತ ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ ಡಿಕೆ. ಈ ವರ್ಷ ಡಿಕೆ ಅವರಿಗೆ ಬೆಸ್ಟ್ ಸ್ಟ್ರೈಕರ್ ಆಫ್ ದಿ ಸೀಸನ್ ಅವಾರ್ಡ್ ಸಹ ಸಿಕ್ಕಿತು.

rishab | ಅತ್ಯುತ್ತಮ ಆಟಗಾರ ರಿಷಬ್ ಪಂತ್ ರವರ ಸ್ಥಾನಕ್ಕೆ ಕುತ್ತು ತರುತ್ತಿರುವ ಆಟಗಾರ ಯಾರು ಗೊತ್ತೇ?? ಸ್ಥಾನ ಕಳೆದುಕೊಳ್ತಾರಾ ಪಂತ್?? ಯಾರು ಗೊತ್ತೇ??
ಅತ್ಯುತ್ತಮ ಆಟಗಾರ ರಿಷಬ್ ಪಂತ್ ರವರ ಸ್ಥಾನಕ್ಕೆ ಕುತ್ತು ತರುತ್ತಿರುವ ಆಟಗಾರ ಯಾರು ಗೊತ್ತೇ?? ಸ್ಥಾನ ಕಳೆದುಕೊಳ್ತಾರಾ ಪಂತ್?? ಯಾರು ಗೊತ್ತೇ?? 2

ದಿನೇಶ್ ಕಾರ್ತಿಕ್ ಅವರ ಕೆರಿಯರ್ ಇನ್ನೇನು ಮುಗಿಯುವ ಹಂತದಲ್ಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಡಿಕೆ ಅವರು ಮತ್ತೊಮ್ಮೆ ಫಾರ್ಮ್ ಗೆ ಬಂದಿದ್ದು, ಇದೀಗ ಡಿಕೆ ಅವರು ಮತ್ತೊಮ್ಮೆ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಬಹಳ ಸಂತೋಷ ನೀಡಿದೆ. ಆದರೆ ಡಿಕೆ ಅವರು ಆಯ್ಕೆ ಆಗಿರುವುದು, ಹಾಗೂ ರಿಷಬ್ ಪಂತ್ ಅವರು ಫಾರ್ಮ್ ನಲ್ಲಿ ಇಲ್ಲದೆ ಇರುವುದರಿಂದ, ದಕ್ಷಿಣ ಆಫ್ರಿಕಾ ಸರಣಿ ಪಂದ್ಯದಲ್ಲಿ, ಪ್ಲೇಯಿಂಗ್ 11 ಇಂದ ರಿಷಬ್ ಪಂತ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದ್ದು, ಡಿಕೆ ಅವರು ಫಾರ್ಮ್ ನಲ್ಲಿರುವ ಕಾರಣ ಅವರನ್ನೇ ಆಯ್ಕೆಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಭಾರತ ತಂಡ ಅದರಲ್ಲಿ ಆಡುವುದರಿಂದ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳು ಬಹಳ ಮುಖ್ಯವಾಗಿದೆ, ಹಾಗಾಗಿ ಡಿಕೆ ಅವರು ರಿಷಬ್ ಪಂತ್ ಗಿಂತಲೂ ಉತ್ತಮವಾದ ಫಾರ್ಮ್ ನಲ್ಲಿರುವ ಕಾರಣ, ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Comments are closed.