ಇತ್ತೀಚಿಗೆ ಮದುವೆಯಾದ ಆಲಿಯಾ ಪ್ರೇಮ ಕಥೆಗಳು ಗೊತ್ತೇ?? ಮದುವೆಯಾಗುವ ಮುನ್ನ ಆಲಿಯಾ ಪ್ರೀತಿ ಮಾಡಿದ 5 ಜನರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಅಂದರೆ ಏಪ್ರಿಲ್ 14ರಂದು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಲಿಯಾ ಭಟ್ ರವರು ರಣಬೀರ್ ಕಪೂರ್ ಅವರನ್ನು ಮದುವೆಯಾಗಿರುವುದು ನಿಮಗೆಲ್ಲ ಗೊತ್ತಿದೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ರಣಬೀರ್ ಕಪೂರ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಆಲಿಯಾ ಭಟ್ ರವರು ಐವರನ್ನು ಡೇಟಿಂಗ್ ಮಾಡಿದ್ದರು. ಈ ಕುರಿತಂತೆ ನಿಮಗೆ ತಿಳಿದಿರುವುದು ಕಡಿಮೆ ಎಂದು ನಮಗೆ ಗೊತ್ತು. ಈ ಲೇಖನಿಯಲ್ಲಿ ಇದರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ಈ ಲಿಸ್ಟಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ರಮೇಶ್ ದುಬೆ; ಇದು ಯಾರು ಎನ್ನುವುದಾಗಿ ನಿಮಗೆ ಹಲವಾರು ಗೊಂದಲಗಳು ಇರಬಹುದು ಖಂಡಿತವಾಗಿ ಇರಬೇಕಾಗಿದ್ದು ಕೂಡ ನ್ಯಾಯವೇ ಸರಿ ಎಂದು ಹೇಳಬಹುದು. ಯಾಕೆಂದರೆ ಆಲಿಯಾ ಭಟ್ ರವರು ರಮೇಶ್ ದುಬೆ ರವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದು ಹೈಸ್ಕೂಲ್ ಸಂದರ್ಭದಲ್ಲಿ. ಹೌದು ಗೆಳೆಯರೆ ರಮೇಶ್ ದುಬೆ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ಒಂದೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಹೀಗಾಗಿ ಆಲಿಯಾ ಭಟ್ ರವರ ಮೊದಲ ಪ್ರಿಯತಮ ರಮೇಶ್ ದುಬೆ ಎಂದರೆ ತಪ್ಪಾಗಲಾರದು.

Alia Bhatt Ex Ali Dadarkar 2 | ಇತ್ತೀಚಿಗೆ ಮದುವೆಯಾದ ಆಲಿಯಾ ಪ್ರೇಮ ಕಥೆಗಳು ಗೊತ್ತೇ?? ಮದುವೆಯಾಗುವ ಮುನ್ನ ಆಲಿಯಾ ಪ್ರೀತಿ ಮಾಡಿದ 5 ಜನರು ಯಾರ್ಯಾರು ಗೊತ್ತೇ??
ಇತ್ತೀಚಿಗೆ ಮದುವೆಯಾದ ಆಲಿಯಾ ಪ್ರೇಮ ಕಥೆಗಳು ಗೊತ್ತೇ?? ಮದುವೆಯಾಗುವ ಮುನ್ನ ಆಲಿಯಾ ಪ್ರೀತಿ ಮಾಡಿದ 5 ಜನರು ಯಾರ್ಯಾರು ಗೊತ್ತೇ?? 3

ಅಲಿ ದಡಾರ್ಕರ್; ಅಲಿ ದಡಾರ್ಕರ್ ರವರು ಬಾಲಿವುಡ್ನಲ್ಲಿ ಅಷ್ಟೊಂದು ಫೇಮಸ್ ಇಲ್ಲದೆ ಇರಬಹುದು ಆದರೆ ಆಲಿಯಾ ಭಟ್ ಅವರ ಎರಡನೇ ಬಾಯ್ಫ್ರೆಂಡ್ ಆಗಿದ್ದಾರೆ. ಆಲಿಯಾ ಭಟ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಇವರಿಬ್ಬರು ಸಾಕಷ್ಟು ಸಮಾರಂಭಗಳಲ್ಲಿ ಒಟ್ಟಿಗೆ ಹೋಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದರು. ಈ ಕಾರಣದಿಂದಾಗಿಯೇ ಇವರಿಬ್ಬರ ಕುರಿತಂತೆ ಸಾಕಷ್ಟು ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡಿದ್ದವು.

ಸಿದ್ದಾರ್ಥ್ ಮಲ್ಹೋತ್ರಾ; ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಆಲಿಯಾ ಭಟ್ ಇಬ್ಬರೂ ಕೂಡ ಸ್ಟೂಡೆಂಟ್ ಆಫ್ ದ ಇಯರ್ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಒಟ್ಟಿಗೆ ಪಾದರ್ಪಣೆ ಮಾಡುತ್ತಾರೆ. ಇಬ್ಬರೂ ಕೂಡ ಈಗಾಗಲೇ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಸಾಮಿಪ್ಯ ಎನ್ನುವುದು ಹೆಚ್ಚಾಗಿತ್ತು. ಆದರೆ ಅಧಿಕೃತವಾಗಿ ಇಬ್ಬರೂ ಕೂಡ ಇದರ ಕುರಿತಂತೆ ಎಲ್ಲೂ ಹೇಳಿಕೊಂಡಿರುವುದಿಲ್ಲ. ಆದರೆ ಇವರಿಬ್ಬರು ದೂರವಾಗಿದ್ದು ಸಿದ್ಧಾರ್ಥ್ ಮಲ್ಹೋತ್ರ ರವರು ಜಾಕ್ವಲಿನ್ ಫರ್ನಾಂಡೀಸ್ ರವರಿಗೆ ಹತ್ತಿರವಾದ ನಂತರ ಎಂಬುದಾಗಿ ಸುದ್ದಿ ಇದೆ.

ವರುಣ್ ಧವನ್; ವರುಣ್ ಧವನ್ ಅವರು ಕೂಡ ಆಲಿಯಾ ಭಟ್ ರವರ ಜೊತೆಗೆ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ಇಬ್ಬರು ಕೂಡ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕುರಿತಂತೆ ಸಾಕಷ್ಟು ರೂಮರ್ಸ್ ಕೇಳಿಬಂದಿದ್ದವು ಆದರೆ ವರುಣ್ ಧವನ್ ಅವರು ಯಾವಾಗ ಮದುವೆಯಾದರೋ ಆಗ ಆ ಗಾಳಿಸುದ್ದಿ ಕೂಡ ಗಾಳಿಯಲ್ಲಿ ಹರಡಿ ಹೋಯಿತು.

Alia Bhatt Boyfriends Varun Dhawan | ಇತ್ತೀಚಿಗೆ ಮದುವೆಯಾದ ಆಲಿಯಾ ಪ್ರೇಮ ಕಥೆಗಳು ಗೊತ್ತೇ?? ಮದುವೆಯಾಗುವ ಮುನ್ನ ಆಲಿಯಾ ಪ್ರೀತಿ ಮಾಡಿದ 5 ಜನರು ಯಾರ್ಯಾರು ಗೊತ್ತೇ??
ಇತ್ತೀಚಿಗೆ ಮದುವೆಯಾದ ಆಲಿಯಾ ಪ್ರೇಮ ಕಥೆಗಳು ಗೊತ್ತೇ?? ಮದುವೆಯಾಗುವ ಮುನ್ನ ಆಲಿಯಾ ಪ್ರೀತಿ ಮಾಡಿದ 5 ಜನರು ಯಾರ್ಯಾರು ಗೊತ್ತೇ?? 4

ಕವಿನ್ ಮಿತ್ತಲ್; ಭಾರತೀಯ ಉದ್ಯಮ ಕ್ಷೇತ್ರದ ದೊಡ್ಡ ಹೆಸರಾಗಿರುವ ಸುನಿಲ್ ಮಿತ್ತಲ್ ರವರ ಮಗನಾಗಿರುವ ಕವಿನ್ ಮಿತ್ತಲ್ ರವರ ಜೊತೆಗೆ ಕೂಡ ಆಲಿಯಾ ಭಟ್ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರೂ ಕೂಡ ಸೆಮಿನಾರ್ ಒಂದರಲ್ಲಿ ಸ್ನೇಹಿತರ ಮೂಲಕ ಮೊದಲ ಬಾರಿಗೆ ಪರಿಚಿತರಾಗುತ್ತಾರೆ. ಇದಾದ ನಂತರ ಇವರಿಬ್ಬರ ನಡುವೆ ಗುಸುಗುಸು ನಡೆಯುತ್ತಿದೆ ಎಂಬುದಾಗಿ ಬಾಲಿವುಡ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಹರಡಿತ್ತು. ನಂತರದ ದಿನಗಳಲ್ಲಿ ಆ ಗಾಳಿಸುದ್ದಿ ಅಷ್ಟೇ ವೇಗದಲ್ಲಿ ಮರೆಯಾಯಿತು.

ಸದ್ಯಕ್ಕೆ ಈಗ ತಮ್ಮ ಬಾಲ್ಯದ ಕ್ರಶ್ ಆಗಿರುವ ರಣಬೀರ್ ಕಪೂರ್ ಅವರನ್ನು ಆಲಿಯಾ ಭಟ್ ರವರು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಜೋಡಿ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.