ಕೊನೆಗೂ ಸಿಕ್ತು ಅಸಲಿ ಅಂಕಪಟ್ಟಿ. ಸಾಕಷ್ಟು ಗಾಳಿಸುದ್ದಿಗಳು ನಡುವೆ SSLC ಅಲ್ಲಿ ಗಟ್ಟಿಮೇಳ ಮಹತಿ ಪಡೆದಿದ್ದು ಎಷ್ಟು ಅಂಕ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಟಿಆರ್ ಪಿ ವಿಚಾರದಲ್ಲಿ ಸಾಕಷ್ಟು ಸಮಯಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಸದಾಕಾಲ ಮುಂದಿರುತ್ತದೆ ಎಂಬುದಾಗಿ. ಪ್ರೇಕ್ಷಕರು ಈ ಧಾರವಾಹಿಯನ್ನು ಯಾವ ಮಟ್ಟದಲ್ಲಿ ಇಷ್ಟಪಟ್ಟಿದ್ದಾರೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಇನ್ನು ನಾವು ಇಂದಿನ ವಿಚಾರದಲ್ಲಿ ಮಾತನಾಡುತ್ತಿರುವುದು ಗಟ್ಟಿಮೇಳ ಧಾರವಾಹಿಯ ಮಹತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲ ನಟಿಯ ಕುರಿತಂತೆ‌. ಹೌದು ಗೆಳೆಯರೇ ಗಟ್ಟಿಮೇಳ ಧಾರವಾಹಿಯ ಮಹತ್ವ ಪಾತ್ರ ಧಾರವಾಹಿ ವೀಕ್ಷಕರ ನೆಚ್ಚಿನ ಪಾತ್ರಗಳಲ್ಲಿ ಒಂದಾಗಿದ್ದು ಈ ಮಹತಿ ಪಾತ್ರವನ್ನು ನಿರ್ವಹಿಸುತ್ತಿರುವುದು ವೈಷ್ಣವಿ ಎನ್ನುವ ಹುಡುಗಿ. ತನ್ನ ಮುದ್ದಾದ ಮುಖದಿಂದ ಹಾಗೂ ಅತ್ಯಂತ ಲವಲವಿಕೆಯ ಮಾತುಗಳಿಂದ ಹಾಗೂ ನಟನೆಯಿಂದ ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ವೈಷ್ಣವಿ ಯಶಸ್ವಿಯಾಗಿದ್ದಾಳೆ. ಕೇವಲ ಪಾತ್ರದಲ್ಲಿ ನಟಿಸುವುದು ಮಾತ್ರವಲ್ಲದೆ ಪಾತ್ರದ ಪರಕಾಯ ಪ್ರವೇಶವನ್ನು ಮಾಡುವ ಮೂಲಕ ಈ ಚಿಕ್ಕ ವಯಸ್ಸಿನಲ್ಲಿ ಕೂಡ ತಾನು ಅತ್ಯದ್ಭುತ ಕಲಾವಿದೆ ಎಂಬುದಾಗಿ ನಿರೂಪಿಸಿದ್ದಾರೆ.

mahathi sslc | ಕೊನೆಗೂ ಸಿಕ್ತು ಅಸಲಿ ಅಂಕಪಟ್ಟಿ. ಸಾಕಷ್ಟು ಗಾಳಿಸುದ್ದಿಗಳು ನಡುವೆ SSLC ಅಲ್ಲಿ ಗಟ್ಟಿಮೇಳ ಮಹತಿ ಪಡೆದಿದ್ದು ಎಷ್ಟು ಅಂಕ ಗೊತ್ತೇ??
ಕೊನೆಗೂ ಸಿಕ್ತು ಅಸಲಿ ಅಂಕಪಟ್ಟಿ. ಸಾಕಷ್ಟು ಗಾಳಿಸುದ್ದಿಗಳು ನಡುವೆ SSLC ಅಲ್ಲಿ ಗಟ್ಟಿಮೇಳ ಮಹತಿ ಪಡೆದಿದ್ದು ಎಷ್ಟು ಅಂಕ ಗೊತ್ತೇ?? 2

ಇನ್ನು ಇವರು ಬಾಲ ನಟಿ ಆಗಿರುವುದರ ಜೊತೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿ ಕೂಡ ಆಗಿದ್ದಾರೆ. ಇನ್ನು ಇತ್ತೀಚಿಗೆ ಅವರ ಎಸ್ಎಸ್ಎಲ್ಸಿ ಫಲಿತಾಂಶ ಕೂಡ ಹೊರಬಂದಿದ್ದು ಸಾಕಷ್ಟು ಗಾಳಿಸುದ್ದಿಗಳು ಕೂಡ ಹರಿದಾಡಿದ್ದವು ಆದರೆ ಈಗ ಇವರ ಅಂಕ ಎಷ್ಟು ಎನ್ನುವುದು ಅಧಿಕೃತವಾಗಿ ಅವರ ಇನ್ಸ್ಟಾಗ್ರಾಮ್ ಅಕೌಂಟ್ ನಿಂದಲೇ ಹೊರಬಂದಿದೆ. ಹೌದು ಗೆಳೆಯರೆ ಮಹತಿ ಖ್ಯಾತಿಯ ನಟಿ ವೈಷ್ಣವಿ ರವರು ತಮ್ಮ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 99.04% ಅಂಕವನ್ನು ಪಡೆದಿದ್ದಾರೆ. ಫಲಿತಾಂಶವನ್ನು ಹಂಚಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳನ್ನು ಕೋರಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ಕಲಿಕೆಯಲ್ಲಿ ಕೂಡ ಮಹತಿ ಚುರುಕಾಗಿರುವುದು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ ಎಂದು ಹೇಳಬಹುದಾಗಿದೆ.

Comments are closed.