ಕೊನೆಗೂ ಸಿಕ್ಕರೂ ಮಿಂಚಿ ಮರೆಯದ ಯಾರೇ ನೀನು ಚೆಲುವೆ ಸಂಗೀತ, ಒಂದು ಕಾಲದ ಟಾಪ್ ನಟಿ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ಕೆಲ ನಟಿಯರು ನಮ್ಮ ಚಿತ್ರರಂಗದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿ ಸೈಲೆಂಟ್ ಆಗಿಯೇ ಹೊರ ಹೋದರೂ ಸಹ ಅವರ ಕ್ರಿಯೆಟ್ ಮಾಡಿರುವ ಇಂಪ್ಯಾಕ್ಟ್ ಕನ್ನಡಿಗರ ಮನದಲ್ಲಿ ಇಂದಿಗೂ ಹಾಗೇ ಉಳಿದಿದೆ. ಅದು ಅವರ ನಟನೆಗೆ ಇದ್ದಂತಹ ಶಕ್ತಿ. ನಮ್ಮ ಕನ್ನಡಿಗರು ಹೆಚ್ಚಾಗಿ ನೆಚ್ಚಿದ್ದು ಹೊರಗಿನಿಂದ ಬಂದ ನಟಿಯರನ್ನೇ. ಆದರೆ ಒಮ್ಮೆ ಅವರನ್ನು ನೆಚ್ಚಿದ ಮೇಲೆ ಅವರನ್ನು ಕನ್ನಡಿಗರಂತೆಯೇ ನೋಡಿದ್ದಾರೆ.

ಕನ್ನಡಿಗ ಪ್ರೇಕ್ಷಕ ಮಹಾಪ್ರಭುಗಳು ಅವರನ್ನು ನೆಚ್ಚೋಕೆ ಕೂಡ ಕಾರಣ ಇರಲೇಬೇಕು ಅಲ್ಲವೆ. ಇಂದು ನಾವು ಹೇಳ ಹೊರಟಿರುವ ನಾಯಕ ನಟಿಯ ಕುರಿತಂತೆ ಕೂಡ ಇದೇ ತರಹದ ಅಂಶಗಳು ಕಾಣಿಸುತ್ತವೆ. ಬಾಲನಟಿಯಾಗಿ ಕನ್ನಡದಲ್ಲಿ ಒಂದು ಸಿನಿಮಾ ಹಾಗೂ ನಾಯಕನಟಿಯಾಗಿ ಕನ್ನಡದಲ್ಲಿ 2 ಸಿನಿಮಾಗಳನ್ನಷ್ಟೇ ಮಾಡಿದರೂ ಸಹ ಅವರ ಪಾತ್ರ ಮಾಡಿದ್ದ ಇಂಪ್ಯಾಕ್ಟ್ ಇನ್ನೂ ಅವರನ್ನು ಕನ್ನಡಿಗರು ಮರೆಯದೇ ಇರೋ ಹಾಗೆ ನೋಡಿಕೊಂಡಿದೆ. ನಾವು ಇಂದಿನ ವಿಚಾರದಲ್ಲಿ ಮಾತನಾಡುತ್ತ ಇರೋದು ನಟಿ ಸಂಗೀತ ಬಗ್ಗೆ.

ಇಂದಿನ ಕೆಲವರಿಗೆ ನಟಿ ಸಂಗೀತ ಎಂದಾಗ ಯಾರು ಎಂಬುದು ಗುರುತಿಸಲು ಕಷ್ಟವಾಗಬಹುದು. ಸಂಗೀತ ಕೇರಳದಲ್ಲಿ 1978ರಲ್ಲಿ ಜನಿಸಿದಾಕೆ. ಹುಟ್ಟಿದಾಗಿನಿಂದಲೂ ಸಹ ಸೈಲೆಂಟ್ ಸ್ವಭಾವದವರೇ. ಸಿನಿಮಾ ಗಳಲ್ಲಿ ಅವರು ಕಾಣಿಸಿಕೊಂಡಂತೆ ಅವರ ಲೈಫ್ ನಲ್ಲಿ ಕೂಡ ಅವರು ತುಂಬಾ ಸೈಲೆಂಟ್ ಮನೋಭಾವ ಉಳ್ಳವರು. ಮೊದಲಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಟನಾಗಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ಶಾಂತಿ ಕ್ರಾಂತಿ ಯಲ್ಲಿ ಬಾಲನಟಿಯಾಗಿ ಕಾಣಿಸುವ ಮೂಲಕ ಕನ್ನಡ ಚಿತ್ರಕ್ಕೆ ಪಾದಾರ್ಪಣೆ ಮಾಡಿದರು ಎನ್ನಬಹುದು.

ಇದಾದ ನಂತರ ಎವರ್ ಗ್ರೀನ್ ಸೂಪರ್ ಹಿಟ್ ಚಿತ್ರವೆಂದು ಕನ್ನಡ ಚಿತ್ರರಂಗದಲ್ಲಿ ಕರೆಸಿಕೊಳ್ಳುವ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಯಾರೇ ನೀ ಚೆಲುವೆ ಚಿತ್ರದಿಂದ ಕನ್ನಡದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಚಿತ್ರದ ಮ್ಯೂಸಿಕ್ ಹಾಗೂ ಸಂಗೀತ ರವರ ಹಾವ ಭಾವಗಳು ಹಾಗೂ ಅವರ ಸಿಂಪಲ್ ಸೈಲೆಂಟ್ ಆಟಿಟ್ಯೂಡ್ ಕನ್ನಡ ಪ್ರೇಕ್ಷಕರಿಗೆ ಬಹಳಷ್ಟು ಇಷ್ಟವಾಯಿತು. ಜನರು ರವಿಚಂದ್ರನ್ ರವರನ್ನು ನೋಡಲು ಎಷ್ಟು ಬಾರಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡುತ್ತಿದ್ದರೋ ಅಷ್ಟೇ ಸಂಗೀತ ರವರನ್ನು ಕೂಡ ನೋಡಲು ಟಿಕೆಟ್ ತೆಗೆದುಕೊಂಡು ದೊಡ್ಡ ಪರದೆಯ ಮೇಲೆ ಅವರನ್ನು ನೋಡಲು ಮುಗಿ ಬೀಳುತ್ತಿದ್ದರು.

ಆ ಕಾಲಕ್ಕೆ ಕೇವಲ ಒಂದು ಚಿತ್ರಕ್ಕೆ ತಮ್ಮ ಸಿಂಪಲ್ ನಟನೆಯಿಂದ ಕನ್ನಡಿಗರ ಕೃಷ್ ಆಗಿದ್ದರು. ಸಂಗೀತ. ಆಗಿನ ಹುಡುಗರೆಲ್ಲ ಲವ್ ಮಾಡಿದರೆ ಇಂತಹ ಹುಡುಗಿಯನ್ನೇ ಲವ್ ಮಾಡಬೇಕೆಂದು ಯಾರೇ ನೀ ಚೆಲುವೆ ಚಿತ್ರದಲ್ಲಿ ನಟಿಸಿದ್ದ ಸಂಗೀತ ರವರ ಪಾತ್ರವನ್ನು ನೋಡಿ ಹೇಳೋವಷ್ಟು ಪ್ರಸಿದ್ಧಿ ಪಡೆದಿದ್ದರು. ನಂತರದ ದಿನಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಸೂಪರ್ ಹಿಟ್ ಚಿತ್ರ ಯಾರೇ ನೀ ಅಭಿಮಾನಿ ಎಂಬ ಚಿತ್ರ ಕೂಡ ಸಂಗೀತ ರವರಿಗೆ ತುಂಬಾ ಹೆಸರನ್ನು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ಶಿವಣ್ಣ ರವರೊಂದಿಗೆ ರಮ್ಯಾ ಕೃಷ್ಣ ಹಾಗೂ ಸಂಗೀತ ರವರು ನಾಯಕಿಯಾಗಿ ನಟಿಸಿದ್ದರು. ಸಂಗೀತ ರವರ ಎಮೋಷನಲ್ ಪಾತ್ರ ಎಲ್ಲರನ್ನೂ ಮೆಚ್ಚಿಸಿತ್ತು.

ಇದಾದ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಸಂಗೀತ ಕಾಣಿಸಿಕೊಳ್ಳದಿದ್ದರೂ ಸಹ ಕನ್ನಡಿಗರ ಮನದಲ್ಲಿ ಸದಾ ಎವರ್ ಗ್ರೀನ್ ನಟಿಯಾಗಿ ಸಂಗೀತ ಉಳಿದು ಕೊಂಡರು. ನಂತರದ ದಿನಗಳಲ್ಲಿ ಸಂಗೀತ ತಮಿಳು ಮಲಯಾಳಂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿ ಅಲ್ಲಿನ ಪ್ರೇಕ್ಷಕರ ಮನವನ್ನೂ ಕೂಡ ಗೆದ್ದರು. ಪ್ರೇಕ್ಷಕರನ್ನು ತನ್ನ ನಟನೆಯಿಂದ ಗೆಲ್ಲೋಕೆ ಅಂತಾನೇ ಚಿತ್ರರಂಗಕ್ಕೆ ಬಂದಂತಿತ್ತು ಸಂಗೀತ ರವರ ನಟನೆ ಹಾಗೂ ಸೌಮ್ಯ ಸ್ವಭಾವದ ಸಿಂಪಲ್ ವ್ಯಕ್ತಿತ್ವ. ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಮಿಂಚಿದರು.

ಸದಾ ಅಜಾತಶತ್ರುವಿನಂತೆ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು ನಟಿ ಸಂಗೀತ. ಕೆರಳ ರಾಜ್ಯ ಸರ್ಕಾರದಿಂದ ಉತ್ತಮ ನಟಿ ಎಂಬ ಪ್ರಶಸ್ತಿಗೆ ಕೂಡ 1998 ರಲ್ಲಿ ಭಾಜನರಾಗಿದ್ದಾರೆ. ನಂತರ ಚಿತ್ರರಂಗದಿಂದ ಕ್ರಮೇಣವಾಗಿ ದೂರಾಗಿ ತಮ್ಮ ವೈಯಕ್ತಿಕ ಜೀವನದತ್ತ ಗಮನಹರಿಸಿದ ನಟಿ ಸಂಗೀತ, 2000 ನೇ ಇಸವಿಯಲ್ಲಿ ನಟಿ ಸಂಗೀತಾ ತಮಿಳಿನ ಸಿನಿಮಾ ಛಾಯಾಗ್ರಹಕ ಹಾಗೂ ನಿರ್ದೇಶಕ ಶರವಣ ಎಂಬುವವರನ್ನು ಮದುವೆಯಾದರು. ಎರಡೇ ವರ್ಷಗಳ ಅಂತರದಲ್ಲಿ ನಟಿ ಸಂಗೀತ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದರು.

ಗಂಡನಿಗೆ ಶರವಣ ರವರಿಗೆ ತಕ್ಕ ಮಡದಿಯಾಗಿ ಮಗಳು ಸಾಯಿ ತೇಜಸ್ವತಿ ಗೆ ತಕ್ಕ ತಾಯಿಯಾಗಿ ಸಂತೋಷ ಜೀವನವನ್ನು ಬಾಳುತ್ತಿದ್ದಾರೆ ನಟಿ ಸಂಗೀತ. ಸದಾ ಸೈಲೆಂಟ್ ಮನೋ ಪೃವೃತ್ತಿಯನ್ನು ಹೊಂದಿದ್ದ ಸಂಗೀತ ರವರು ಮತ್ತೆ ನಟನೆಗೆ ಹಿಂದಿರುಗಲಿಲ್ಲ ಆದರೆ ಪತಿ ಶರವಣ ರವರು ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡುವಾಗ ಅವರಿಗೆ ಸಹಾಯಕರಾಗಿ ಆಗಾಗ ಕೆದಸ ಮಾಡುತ್ತ ಪತಿಯ ಕಾರ್ಯಕ್ಕೆ ಭುಜಭಲ ನೀಡೋ ಮೂಲಕ ಆದರ್ಶ ಪತ್ನಿಯಾಗಿದ್ದಾರೆ. ನಟಿ ಸಂಗೀತ ರವರ ಕಹಾನಿ ಕೇಳಿದ್ರಲ್ಲ ಏನನ್ನಿಸಿತು ಕಾಮೆಂಟ್ ನ ಮೂಲಕ ತಿಳಿಸಿ.

Comments are closed.