ಬಹುತೇಕ ಚಿತ್ರಗಳಲ್ಲಿ ಇದ್ದೇ ಇರುವ ನಂಬರ್ 1 ಪೋಷಕ ನಟ ಅಚ್ಯುತ್ ಕುಮಾರ್ ರವರು ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಕ ನಟ ಹಾಗೂ ನಟಿಯರಷ್ಟೇ ಪ್ರಾಮುಖ್ಯತೆಯನ್ನು ಪೋಷಕ ನಟರು ಕೂಡ ಪಡೆಯುತ್ತಿದ್ದಾರೆ. ಹೌದು ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ವೀಕ್ಷಕರ ಚಿತ್ರ ನೋಡುವ ದೃಷ್ಟಿಕೋನ ಬದಲಾಗಿದೆ. ಎಲ್ಲಾ ಪಾತ್ರಗಳಿಗೂ ಕೂಡ ಸಮನಾದಂತಹ ಪ್ರಾಮುಖ್ಯತೆಯನ್ನು ನೀಡಿರುವ ಮೂಲಕ ಎಲ್ಲರಿಗೂ ಕೂಡ ಜನ ಮನ್ನಣೆ ಸಿಗುತ್ತಿದೆ. ಇಂದು ನಾವು ಹೇಳಹೊರಟಿರುವ ನಟರೊಬ್ಬರು ಕೂಡ ಈ ಸಾಲಿನಲ್ಲಿ ಬರುತ್ತಾರೆ. ತಿಪಟೂರಿನಲ್ಲಿ ಜನಿಸಿದಂತಹ ಇವರು ಮುಂದಿನ ದಿನಗಳಲ್ಲಿ ನಟನೆಯ ಮೇಲಿನ ಆಸಕ್ತಿಯ ಕಾರಣದಿಂದಾಗಿ ನಿನಾಸಂ ಗೆ ಸೇರಿಕೊಂಡು ನಟನಾ ತರಬೇತಿಯನ್ನು ಪಡೆಯುತ್ತಾರೆ.

ಮೊದಲಿಗೆ ಕಿರುತೆರೆ ವಾಹಿನಿಯಲ್ಲಿ ಮೂಡಲ ಮನೆ ಪ್ರೀತಿ ಇಲ್ಲದ ಮೇಲೆ ಎನ್ನುವಂತಹ ಸೂಪರ್ ಹಿಟ್ ಧಾರವಾಹಿಗಳಲ್ಲಿ ಕೂಡ ನಟಿಸಿದ್ದರು. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತದಲ್ಲಿ ಅತ್ಯಂತ ಬಹುಬೇಡಿಕೆಯ ಪೋಷಕ ನಟನಾಗಿ ಮಿಂಚುತ್ತಿರುವ ಅಚ್ಯುತ್ ಕುಮಾರ್ ಅವರ ಕುರಿತಂತೆ. ಕನ್ನಡಿಗರು ಅವರನ್ನು ಪ್ರೀತಿಯಿಂದ ಆಚ್ಯುತ್ ಅಣ್ಣ ಎಂದು ಕರೆಯುತ್ತಾರೆ. ಇನ್ನು ಇವರು ತಮ್ಮ ನಟನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಹಾಗೂ ಮೂರು ಬಾರಿ ಫಿಲಂಫೇರ್ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಇನ್ನು ಇವರು ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ್ದು ಆ ದಿನಗಳು ಚಿತ್ರದ ಮೂಲಕ. ಇನ್ನು 2011 ರಿಂದ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ನಟಿಸಲು ಪ್ರಾರಂಭಿಸಿದರು. ಇನ್ನು ನಮ್ಮ ನೆಚ್ಚಿನ ಅಚ್ಚುತ್ ಅಣ್ಣನವರು ಒಂದು ದಿನದ ಕಾಲ್ ಶೀಟ್ ಗಾಗಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಇವರು ಬರೋಬ್ಬರಿ ದಿನಕ್ಕೆ 80 ಸಾವಿರದಿಂದ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇದುವರೆಗೆ ನೂರಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ವರ್ಷಕ್ಕೆ 15ರಿಂದ 16 ಸಿನಿಮಾಗಳಲ್ಲಿ ಬಿಜಿಯಾಗಿರುತ್ತಾರೆ. ಇವರ ಕಾಲ್ ಶೀಟ್ ಗಾಗಿ ಸಿನಿಮಾ ನಿರ್ಮಾಪಕರು ಪ್ರತಿಬಾರಿ ಕಾಯೋದು ಸುಳ್ಳಲ್ಲ. ಅದಿಕ್ಕೆ ಅಲ್ವಾ ಹೇಳೋದು ಸ್ನೇಹಿತರೆ ಸರಸ್ವತಿ ಇದ್ದಲ್ಲಿ ಲಕ್ಷ್ಮಿ ತಾನಾಗಿ ಹುಡುಕಿಕೊಂಡು ಬರುತ್ತಾಳೆ ಎಂದು.

Comments are closed.