ಜಿಯೋ ಗೆ ಠಕ್ಕರ್ ನೀಡಿದ ಏರ್ಟೆಲ್: ಮೂರು ಹೊಸ ಯೋಜನೆಗಳ ಮೂಲಕ ಟೆಲೆಕಾಂ ಕ್ಷೇತ್ರದಲ್ಲಿ ದೂಳೆಬ್ಬಿಸಿದ್ದು ಹೇಗೆ ಗೊತ್ತೇ? ಹೇಗಿವೆ ಗೊತ್ತೇ ಹೊಸ ಪ್ಲಾನ್??

ಭಾರತದಲ್ಲಿ ಒಳ್ಳೆಯ ಇಂಟರ್ನೆಟ್ ಪ್ಲಾನ್ ಗಳನ್ನು ಕೊಡುವಲ್ಲಿ ಅಗ್ರಸ್ಥಾನದಲ್ಲಿ ಇರುವುದು ಜಿಯೋ ಸಂಸ್ಥೆ. ಇದೀಗ ಜಿಯೋ ಸಂಸ್ಥೆಗೆ ಟಕ್ಕರ್ ಕೊಡಲು ಭಾರತಿ ಏರ್ಟೆಲ್ ಸಂಸ್ಥೆ ಹೊಸ ಪ್ಲಾನ್ ಗಳೊಂದಿಗೆ ಬಂದಿದೆ. ಈ ಪ್ಲಾನ್ ಗಳ ಮೂಲಕ ಏರ್ಟೆಲ್ ಸಂಸ್ಥೆಯು ಕಡಿಮೆ ಹಣದಲ್ಲಿ ಸಾವಿರಾರು ಜಿಬಿ ಡೇಟಾ ನೀಡಲಿದೆ. ಹೆಚ್ಚಿನ ಇಂಟರ್ನೆಟ್ ಬಳಸುವವರಿಗೆ ಮನೆಯಲ್ಲಿ ವೈಫೈ ಅಗತ್ಯ ಹೆಚ್ಚಾಗಿರುತ್ತದೆ. ವೈಫೈ ಬಳಸುವವರಿಗೆ ಏರ್ಟೆಲ್ ಬ್ರಾಡ್ ಬ್ಯಾಂಡ್ ಮೂಲಕ ಮೂರು ಭರ್ಜರಿಯಾದ ಆಫರ್ ಗಳನ್ನು ತಂದಿದ್ದು, ಇದರಿಂದಾಗಿ ಏರ್ಟೆಲ್ ಬ್ರಾಸ್ ಬ್ಯಾಂಡ್ ಗ್ರಾಹಕರಿಗೆ ಲಾಭ ಬರುವಂತಹ ಆಫರ್ ಗಳಾಗಿದೆ. ಆ ಮೂರು ಆಫರ್ ಗಳು ಯಾವುವು? ಹೇಗಿವೆ? ತಿಳಿಸುತ್ತೇವೆ ನೋಡಿ..

₹1,599 ರೂಪಾಯಿಯ ಯೋಜನೆ :- ಬಿಡುಗಡೆ ಮಾಡಿರುವ 3 ಯೋಜನೆಗಳಲ್ಲಿ, ಅತ್ಯಂತ ದುಬಾರಿಯಾದ ಯೋಜನೆಯಾಗಿದೆ. ಈ ಹೊಸ ಯೋಜನೆಯಲ್ಲಿ ಪ್ರತಿ ತಿಂಗಳಿಗೆ 3.3TB ಅಂದ್ರೆ 3,000ಜಿಬಿ ಡೇಟಾ ಸಿಗುತ್ತದೆ. ಡೇಟಾ ಸ್ಪೀಡ್ 300MPBS ಸ್ಪೀಡ್ ಇರುತ್ತದೆ. ಈ ಪ್ಲಾನ್ ನಲ್ಲಿ ಹೈ ಸ್ಪೀಡ್ ಡೇಟಾ ಜೊತೆಗೆ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಚಂದಾದಾರಿಕೆ ಸಹ ಸಿಗಿತ್ತದೆ. ಇದರ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ ಗೆ ಲಾಗಿನ್ ಆಗುವ ಮೂಲಕ Sony LIV, Eros Now, Lionsgate Play, Manorama Max, Shemaroo ಹಾಗೂ Shorts TV ಸೇರಿ 14 ಓಟಿಟಿ ಪ್ಲಾಟ್ ಫಾರ್ಮ್ ಗಳು ಫ್ರೀಯಾಗಿ ಸಿಗಲಿದೆ.

₹1,099 ರೂಪಾಯಿಯ ಯೋಜನೆ :- ಈ ಯೋಜನೆಯಲ್ಲಿ 3.3TB ಡೇಟಾ ಅಂದ್ರೆ 3,300 ಜಿಬಿ ಡೇಟಾ ಸಿಗುತ್ತದೆ, ಇದರ ಸ್ಪೀಡ್ 200MBPS ಇರುತ್ತದೆ. ಈ ಯೋಜನೆಯಲ್ಲಿ ಸಹ ಹೈ ಸ್ಪೀಡ್ ಡೇಟಾ ಜೊತೆಗೆ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಚಂದಾದಾರಿಕೆ ಸಹ ಸಿಗಿತ್ತದೆ. ಇದರ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ ಗೆ ಲಾಗಿನ್ ಆಗುವ ಮೂಲಕ Sony LIV, Eros Now, Lionsgate Play, Manorama Max, Shemaroo ಹಾಗೂ Shorts TV ಸೇರಿ 14 ಓಟಿಟಿ ಪ್ಲಾಟ್ ಫಾರ್ಮ್ ಗಳು ಫ್ರೀಯಾಗಿ ಸಿಗಲಿದೆ. ಇದರಲ್ಲಿ ನೆಟ್ ಫ್ಲಿಕ್ಸ್ ಇರುವುದಿಲ್ಲ. ಬದಲಾಗಿ, ಏರ್ಟೆಲ್ ಎಕ್ಸ್ಟ್ರೀಮ್ ಬಾಕ್ಸ್ ನಲ್ಲಿ 350ಕ್ಕಿಂತ ಹೆಚ್ಚು ಟಿವಿ ಚಾನೆಲ್ ಗಳನ್ನು ನೀಡಲಾಗುತ್ತದೆ. ಈ ಸೆಟ್ ಟಾಪ್ ಬಾಕ್ಸ್ ಪ್ರಯೋಜನ ಪಡೆಯಲು, ಎರಡು ಸಾವಿರ ರೂಪಾಯಿ ಪಾವತಿ ಮಾಡಿ, 4K ಏರ್ಟೆಲ್ ಎಕ್ಸ್ಟ್ರೀಮ್ ಬಾಕ್ಸ್ ತೆಗೆದುಕೊಳ್ಳಬೇಕು.

₹699 ರೂಪಾಯಿಯ ಯೋಜನೆ :- ಹೊಸದಾದ ಮೂರು ಪ್ಲಾನ್ ಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ಪ್ಲಾನ್ ಇದಾಗಿದೆ. ಈ ಪ್ಲಾನ್ ನಲ್ಲಿ 3.3TB ಅಂದರೆ 3300ಜಿಬಿ ಡೇಟಾ ಸಿಗಲಿದ್ದು, ಇದರ ಸ್ಪೀಡ್ 40MBPS ಇರುತ್ತದೆ. ಇದರ ಜೊತೆಗೆ 15 ಓಟಿಟಿ ಪ್ಲಾಟ್ ಫಾರ್ಮ್ ಗಳ ಚಂದಾದಾರಿಕೆ ಸಿಗುತ್ತದೆ. ಈ ಪ್ಲಾನ್ ನಲ್ಲಿ ಅಮೆಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಚಂದಾದಾರಿಕೆ ನೀಡಲಾಗಿಲ್ಲ ಇನ್ನುಳಿದ ಎಲ್ಲಾ ಓಟಿಟಿ ಪ್ಲಾಟ್ ಫಾರ್ಮ್ ಗಳನ್ನು ವೆಬ್ ಸೈಟ್ ಗಳ ಮೂಲಕ ಆಕ್ಸೆಸ್ ಮಾಡಬಹುದು.

Comments are closed.