ಐಪಿಎಲ್ ನ ಎಲ್ಲಾ ತಂಡದ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ ತಂಡ ಕಟ್ಟಿದ ಇಫ್ರಾನ್ ಪಠಾಣ್. ಟಾಪ್ ಭಾರತೀಯರು ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೇ??

ಈಗಷ್ಟೇ ಐಪಿಎಲ್ 15ನೇ ಆವೃತ್ತಿ ಮುಕ್ತಾಯಗೊಂಡಿದೆ. ಮೇ 29ರಂದು ನಡೆದ ಐಪಿಎಲ್ ಫಿನಾಲೆಯಲ್ಲಿ ಗುಜರಾತ್ ಟೈಟನ್ಸ್ ತಂಡ ಗೆಲ್ಲುವನ್ನು ಸಾಧಿಸಿದೆ. ಹಾರ್ದಿಕ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಆರಂಭದಿಂದಲೂ ಅದ್ಭುತವಾದ ಪ್ರದರ್ಶನ ನೀಡಿ, ತಂಡವು ಈಗ ಐಪಿಎಲ್ ಟ್ರೋಫಿ ಗೆದ್ದು, ಚಾಂಪಿಯನ್ಸ್ ಆಗಿದ್ದಾರೆ. ಐಪಿಎಲ್ ಮುಗಿದ ಬೆನ್ನಲಲ್ಲೇ ಇದೀಗ ಭಾರತ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ತಮ್ಮದೇ ಆದ ಪ್ಲೇಯಿಂಗ್ 11 ಟೀಮ್ ರಚಿಸಿದ್ದು, ಇದರಲ್ಲಿ ಧೋನಿ, ಕೋಹ್ಲಿ ಯಾರು ಇಲ್ಲ. ಹಾಗಿದ್ದರೆ, ಪಠಾಣ್ ಅವರ ಪ್ಲೇಯಿಂಗ್ 11 ಟೀಮ್ ನಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ ಗೊತ್ತಾ?

ಇರ್ಫಾನ್ ಪಠಾಣ್ ಅವರ ಟೀಮ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಕ್ಯಾಪ್ಟನ್ ಸ್ಥಾನ ನೀಡಿದ್ದು, ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆಮಾಡಿಕೊಂಡಿದ್ದಾರೆ. ಇನ್ನು ಓಪನಿಂಗ್ ಬ್ಯಾಟ್ಸ್ಮನ್ ಗಳಾಗಿ ಆಯ್ಕೆ ಆಗಿರುವವರು ರಾಜಸ್ತಾನ್ ರಾಯಲ್ಸ್ ತಂಡದ ಪ್ರಮುಖ ಆಟವಾರ ಜೋಸ್ ಬಟ್ಲರ್ ಹಾಗೂ ಲಕ್ನೌ ತಂಡದ ಕ್ಯಾಪ್ಟನ್ ಕೆ.ಎಲ್.ರಾಹುಲ್. ಇನ್ನು ನಮ್ಮ ಆರ್.ಸಿ.ಬಿ ತಂಡದ ಹರ್ಷಲ್ ಪಟೇಲ್ ಅವರನ್ನು ತಂಡಕ್ಕೆ ಆಯ್ಕೆಮಾಡಿಕೊಂಡಿದ್ದಾರೆ ಪಠಾಣ್. ಪಠಾಣ್ ಅವರು ಸೆಲೆಕ್ಟ್ ಮಾಡಿರುವ ಪೂರ್ತಿ ತಂಡದ ಆಟಗಾರರು ಈ ಕೆಳಗೆ ತಿಳಿಸಿರುವಂತೆ ಇದ್ದಾರೆ…

Irfan | ಐಪಿಎಲ್ ನ ಎಲ್ಲಾ ತಂಡದ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ ತಂಡ ಕಟ್ಟಿದ ಇಫ್ರಾನ್ ಪಠಾಣ್. ಟಾಪ್ ಭಾರತೀಯರು ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೇ??
ಐಪಿಎಲ್ ನ ಎಲ್ಲಾ ತಂಡದ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ ತಂಡ ಕಟ್ಟಿದ ಇಫ್ರಾನ್ ಪಠಾಣ್. ಟಾಪ್ ಭಾರತೀಯರು ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೇ?? 2

ಹಾರ್ದಿಕ ಪಾಂಡ್ಯ (ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜೋಸ್ ಬಟ್ಲರ್, ಕೆ.ಎಲ್.ರಾಹುಲ್, ಲಿಯಾಮ್ ಲಿವಿಂಗ್ ಸ್ಟೋನ್, ರಶೀದ್ ಖಾನ್, ಹರ್ಷಲ್ ಪಟೇಲ್, ಡೇವಿಡ್ ಮಿಲ್ಲರ್ , ಮೊಹಮ್ಮದ್ ಶಮ್ಮಿ, ಉಮ್ರಾನ್ ಮಲಿಕ್, ಯುಜವೆಂದ್ರ ಚಾಹಲ್, ಹಾಗೂ 12ನೇ ಆಟಗಾರನಾಗಿ ಕುಲದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ. ಇವರ ತಂಡದಲ್ಲಿ ಭಾರತದ ಪ್ರಮುಖ ಆಟಗಾರರೇ ಇಲ್ಲದಿರುವುದು, ಆಶ್ಚರ್ಯಕ್ಕೆ ಕಾರಣವಾಗಿದೆ.

Comments are closed.