ಕೇವಲ 150 ರೂಪಾಯಿಗಳ ಒಳಗೆ ಮೂರು ಭರ್ಜರಿ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ ಏರ್ಟೆಲ್: ಎಷ್ಟು ರೂಪಾಯಿಗೆ ಎಷ್ಟು ಲಾಭ ಗೊತ್ತೇ?

ನಮಸ್ಕಾರ ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರನ್ನು ಇನ್ನಷ್ಟು ಸೆಳೆಯುವುದಕ್ಕೆ ಸತತ ಪ್ರಯತ್ನವನ್ನು ಮಾಡುತ್ತಿದೆ. ಯಾಕೆಂದರೆ ಜಿಯೋ ಸಂಸ್ಥೆ ಸದ್ಯದ ಮಟ್ಟಿಗೆ ಸಾಕಷ್ಟು ಮುಂದಿದ್ದು ಜನಪ್ರಿಯ ಯೋಜನೆಗಳ ಮೂಲಕ ಏರ್ಟೆಲ್ ಮತ್ತೊಮ್ಮೆ ತನ್ನ ಸ್ಥಾನವನ್ನು ಪಡೆಯಲು ಉತ್ತಮ ಯೋಜನೆಗಳನ್ನು ಪರಿಚಯಿಸುತ್ತಿದೆ. ಇನ್ನು ಇತ್ತೀಚಿಗಷ್ಟೇ 150 ರೂಪಾಯಿಗಳಿಗೂ ಕಡಿಮೆ ಬೆಲೆ ಇರುವ ಮೂರು ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದರ ಕುರಿತಂತೆ ಇಂದಿನ ಲೇಖನಿಯಲ್ಲಿ ನಿಮಗೆ ವಿವರವಾಗಿ ತಿಳಿಸಲು ಹೊರಟಿದ್ದೇವೆ.

ಮೊದಲಿಗೆ 109 ರೂಪಾಯಿಗಳ ರಿಚಾರ್ಜ್ ಕುರಿತಂತೆ ಮಾತನಾಡೋಣ. ಇದರೊಂದಿಗೆ 30 ದಿನಗಳ ವ್ಯಾಲಿಡಿಟಿ ಹಾಗೂ 99 ರೂಪಾಯಿಗಳ ಟಾಕ್ ಟೈಮ್ ವ್ಯಾಲಿಡಿಟಿ ಕೂಡ ಸಿಗುತ್ತದೆ. ಇನ್ನು 200 ಎಮ್.ಬಿ ಇಂಟರ್ನೆಟ್ ಡೇಟಾ ಕೂಡ ದೊರೆಯುತ್ತದೆ. ಮೆಸೇಜ್ ಕಳುಹಿಸಲು ಒಂದು ಮೆಸೇಜಿಗೆ ಒಂದು ರೂಪಾಯಿ ಹಾಗೂ ಎಸ್ಟಿಡಿ ಸಂದೇಶಕ್ಕೆ 1.5 ರೂಪಾಯಿ ತಗಲುತ್ತದೆ. ಕರೆ ಮಾಡಲು ಪ್ರತಿ ಸೆಕೆಂಡಿಗೆ 2.5 ಪೈಸೆ ತಗಲುತ್ತದೆ. ಮತ್ತೊಂದು ಯೋಜನೆ 111 ರೂಪಾಯಿಗಳದ್ದು. ಒಂದು ತಿಂಗಳ ವ್ಯಾಲಿಡಿಟಿ ಜೊತೆಗೆ 99ರ ಟಾಕ್ ಟೈಮ್ ದೊರೆಯುತ್ತದೆ.

Airtel | ಕೇವಲ 150 ರೂಪಾಯಿಗಳ ಒಳಗೆ ಮೂರು ಭರ್ಜರಿ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ ಏರ್ಟೆಲ್: ಎಷ್ಟು ರೂಪಾಯಿಗೆ ಎಷ್ಟು ಲಾಭ ಗೊತ್ತೇ?
ಕೇವಲ 150 ರೂಪಾಯಿಗಳ ಒಳಗೆ ಮೂರು ಭರ್ಜರಿ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ ಏರ್ಟೆಲ್: ಎಷ್ಟು ರೂಪಾಯಿಗೆ ಎಷ್ಟು ಲಾಭ ಗೊತ್ತೇ? 2

200mb ಇಂಟರ್ನೆಟ್ ಡೇಟಾ ಜೊತೆಗೆ ಇಲ್ಲೆ ತಿಳಿಸಿರುವಂತೆ ಅದೇ ಮಾದರಿಯ ಕರೆದರ ಹಾಗೂ ಮೆಸೇಜ್ ದರಗಳು ಇಲ್ಲಿ ಕೂಡ ಇರುತ್ತದೆ. ಕೊನೆಯದಾಗಿ 131 ರೂಪಾಯಿಗಳ ರಿಚಾರ್ಜ್ ಪ್ಲಾನ್ ಇಲ್ಲಿ ಕಂಡುಬರುತ್ತದೆ. ಒಂದು ತಿಂಗಳ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ನಲ್ಲಿ ಕೂಡ ಕಂಡುಬರುತ್ತದೆ. ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳಿಗೆ 2.5 ಪೈಸೆ ಪ್ರತಿ ಸೆಕೆಂಡಿಗೆ ಆದರೆ ರಾಷ್ಟ್ರೀಯ ಹಾಗೂ ವಿಡಿಯೋ ಕರೆಗೆ ಪ್ರತಿ ಸೆಕೆಂಡಿಗೆ 5 ಪೈಸೆ ಆಗಿದೆ. ಇನ್ನು ಪ್ರತಿ ಎಂಬಿ ಇಂಟರ್ನೆಟ್ ಡೇಟಾ ಗೆ 50 ಪೈಸೆ ಆಗಿದೆ. ಇನ್ನುಳಿದಂತೆ ಎಸ್ಎಂಎಸ್ ಅದರ ಹಿಂದೆ ತಿಳಿಸಿದಂತೆ ಸೇಮ್ ಆಗಿದೆ. ನೀವು ಕೂಡ ಏರ್ಟೆಲ್ ಚಂದಾದಾರರಾಗಿ ಇದ್ದರೆ ಈ ರಿಚಾರ್ಜ್ ಪ್ಲಾನ್ ಗಳನ್ನು ಬಳಕೆ ಮಾಡಬಹುದಾಗಿದೆ.

Comments are closed.