ಮಗನನ್ನು ಯಾವಾಗ ಚಿತ್ರರಂಗಕ್ಕೆ ಪರಿಚಯ ಮಾಡುತ್ತೀರಾ ಅಂತ ಕೇಳಿದ ಪ್ರಶ್ನೆಗೆ ದರ್ಶನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಗೂ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ನಟರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಸ್ಟಾರ್ ಕಲಾವಿದನ ಮಗನಾಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರ ಜರ್ನಿ ಅಷ್ಟೊಂದು ಸುಲಭವಾಗಿರಲಿಲ್ಲ. ಅವಮಾನ ತಿರಸ್ಕಾರ ಗಳನ್ನು ಅನುಭವಿಸಿಯೇ ಕನ್ನಡ ಚಿತ್ರರಂಗದಲ್ಲಿ ಇಂದು ಬಾಕ್ಸಾಫೀಸ್ ಸುಲ್ತಾನನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯಕ್ಕೆ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ಹಿರಿಯ ಕಲಾವಿದರಿಗೆ ಧನಸಹಾಯವನ್ನು ಕೂಡ ಯಾರಿಗೂ ತಿಳಿಯದಂತೆ ನೀಡುತ್ತಾ ಮಾನವೀಯತೆ ಕೂಡ ಮೆರೆಯುವ ಅತ್ಯುತ್ತಮ ಮನಸ್ಸಿನ ವ್ಯಕ್ತಿತ್ವವುಳ್ಳ ಜೀವ ಕೂಡ ಆಗಿದ್ದಾರೆ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ವಿನೀಶ್ ಎನ್ನುವ ಮಗ ಕೂಡ ಇದ್ದಾನೆ. ಡಿ ಬಾಸ್ ರವರ ಐರಾವತ ಹಾಗೂ ಯಜಮಾನ ಸಿನಿಮಾದಲ್ಲಿ ತಮ್ಮ ತಂದೆ ಜೊತೆಗೆ ಪರದೆಯನ್ನು ಹಂಚಿಕೊಂಡಿರುವುದು ನೀವೆಲ್ಲ ನೋಡಿದ್ದೀರಿ. ಈ ಹಿಂದೆ ಮಾಧ್ಯಮದಲ್ಲಿ ಡಿ ಬಾಸ್ ರವರಿಗೆ ನಿಮ್ಮ ಮಗ ಯಾವಾಗ ಸಿನಿಮಾರಂಗಕ್ಕೆ ಬರುವುದು ಎನ್ನುವುದಾಗಿ ಕೇಳಿದಾಗ ಅವರು ನೀಡಿದ ಉತ್ತರ ಎಲ್ಲರನ್ನೂ ಆಶ್ಚರ್ಯ ಗೊಳಿಸಿತು.

Dboss 1 | ಮಗನನ್ನು ಯಾವಾಗ ಚಿತ್ರರಂಗಕ್ಕೆ ಪರಿಚಯ ಮಾಡುತ್ತೀರಾ ಅಂತ ಕೇಳಿದ ಪ್ರಶ್ನೆಗೆ ದರ್ಶನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??
ಮಗನನ್ನು ಯಾವಾಗ ಚಿತ್ರರಂಗಕ್ಕೆ ಪರಿಚಯ ಮಾಡುತ್ತೀರಾ ಅಂತ ಕೇಳಿದ ಪ್ರಶ್ನೆಗೆ ದರ್ಶನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ?? 2

ಹೌದು ಗೆಳೆಯರೇ ಒಂದು ಉದಾಹರಣೆ ನೀಡುತ್ತಾ ಮೊದಲು ಹೋಟೆಲ್ ವ್ಯಾಪಾರದಲ್ಲಿ ಕಸ ಗುಡಿಸುವುದು ಕಲಿತುಕೊಳ್ಳಬೇಕು ನಂತರದ ಗಲ್ಲದಲ್ಲಿ ಕೂರಲು ಸಾಧ್ಯ ಹಾಗೆ ಸಿನಿಮಾರಂಗದಲ್ಲಿ ಆತ ಕಷ್ಟಪಟ್ಟು ಮೊದಲು ಕಲಿಯಬೇಕು ನಂತರ ಆತ ಏನು ಆಗಬೇಕು ಎಂದುಕೊಂಡಿದ್ದಾನೋ ಅದಾಗಬೇಕು ಇಲ್ಲದಿದ್ದರೆ ಆದರೆ ಅದರ ಮೌಲ್ಯ ತಿಳಿಯುವುದಿಲ್ಲ ಎಂಬುದಾಗಿ ಡಿ-ಬಾಸ್ ಉತ್ತರಿಸಿದ್ದಾರೆ. ಈ ಉತ್ತರ ಎಲ್ಲರಿಗೂ ಕೂಡ ಇಷ್ಟವಾಗಿದ್ದು ಇದಕ್ಕೆ ತಾನೆ ನಾವು ಡಿ ಬಾಸ್ ರವರನ್ನು ಇಷ್ಟಪಡುವುದು ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

Comments are closed.