ಮತ್ತೆ ಮುನ್ನೆಲೆಗೆ ಬಂದ ಟೆಲೆಕಾಂ ಪ್ಲಾನ್ ಗಳು: ಜಿಯೋ ಗೆ ಠಕ್ಕರ್ ನೀಡುತ್ತಿರುವ ಏರ್ಟೆಲ್ ನ ಅಗ್ಗದ ಪ್ಲಾನ್ ಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮಗೆ ಬೇರೆಯೆಲ್ಲ ವಸ್ತುಗಳಿಗಿಂತ ಹೆಚ್ಚಾಗಿ ಅಗತ್ಯವಾಗಿರುವುದು ಇಂಟರ್ನೆಟ್ ಸೇವೆ ಎಂದರೆ ತಪ್ಪಾಗಲಾರದು. ಹೀಗಾಗಿ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು ಅತ್ಯಂತ ಉತ್ತಮವಾದ ಸೇವೆಗಳನ್ನು ನೀಡುವ ಮೂಲಕ ಅತ್ಯಂತ ಹೆಚ್ಚು ಗ್ರಾಹಕರನ್ನು ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಸದ್ಯಕ್ಕೆ ನಮ್ಮ ಭಾರತ ದೇಶದಲ್ಲಿ ಲೀಡಿಂಗ್ ಟೆಲಿಕಾಂ ಸಂಸ್ಥೆಗಳು ಎಂದರೆ ಅದು ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು. ಅದರಲ್ಲೂ ಜಿಯೋ ಸಂಸ್ಥೆ ಸಾಕಷ್ಟು ಜನಪ್ರಿಯ ಸೇವೆಗಳ ಮೂಲಕ ಅತ್ಯಂತ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಪಡುತ್ತಿದೆ.

ಈಗ ಜಿಯೋ ಸಂಸ್ಥೆಗೆ ಸೆಡ್ಡು ಹೊಡೆಯುವಂತೆ ಏರ್ಟೆಲ್ ಸಂಸ್ಥೆ ಅತಿ ಅಗ್ಗದ ಬೆಲೆಯಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಏರ್ಟೆಲ್ ಸಂಸ್ಥೆ ಜಾರಿಗೆ ತಂದಿರುವಂತಹ ಅಗ್ಗದ ಬೆಲೆಯ ಹೊಸ ಜನಪ್ರಿಯ ಯೋಜನೆ ಕುರಿತಂತೆ. ಏರ್ಟೆಲ್ 118 ರೂಪಾಯಿಗೆ 12gb ಹೊಸ ವೇಗದ ಇಂಟರ್ನೆಟ್ ಸೇವೆಯನ್ನು ತನ ಗ್ರಾಹಕರಿಗೆ ಪರಿಚಯಿಸಿದೆ. ಇದೇ 12gb ವೇಗದ ಇಂಟರ್ನೆಟ್ ಜಿಯೋ ನಲ್ಲಿ 121 ರೂಪಾಯಿ ಸಿಗುತ್ತದೆ. ಹಾಗೆ ನೋಡಿದರೆ ಏರ್ಟೆಲ್ ಗ್ರಾಹಕರಿಗೆ ಜಿಯೋಗೆ ಹೋಲಿಸಿದರೆ ಇಂಟರ್ನೆಟ್ ಸೇವೆ ಎನ್ನುವುದು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇದು ಕೇವಲ ಇಂಟರ್ನೆಟ್ ಸೇವೆ ಆಗಿರುವುದರಿಂದ ಇದರಲ್ಲಿ ಬೇರೆ ಯಾವ ಸೇವೆಗಳನ್ನು ನಿರೀಕ್ಷಿಸಬಾರದು. ಕೇವಲ ಇಂಟರ್ನೆಟ್ ಸೇವೆ ಮಾತ್ರ ಸಿಗುತ್ತದೆ.

airtel vs jio kannada news 1 | ಮತ್ತೆ ಮುನ್ನೆಲೆಗೆ ಬಂದ ಟೆಲೆಕಾಂ ಪ್ಲಾನ್ ಗಳು: ಜಿಯೋ ಗೆ ಠಕ್ಕರ್ ನೀಡುತ್ತಿರುವ ಏರ್ಟೆಲ್ ನ ಅಗ್ಗದ ಪ್ಲಾನ್ ಗಳು ಯಾವ್ಯಾವು ಗೊತ್ತೇ??
ಮತ್ತೆ ಮುನ್ನೆಲೆಗೆ ಬಂದ ಟೆಲೆಕಾಂ ಪ್ಲಾನ್ ಗಳು: ಜಿಯೋ ಗೆ ಠಕ್ಕರ್ ನೀಡುತ್ತಿರುವ ಏರ್ಟೆಲ್ ನ ಅಗ್ಗದ ಪ್ಲಾನ್ ಗಳು ಯಾವ್ಯಾವು ಗೊತ್ತೇ?? 2

ಕೇವಲ ಇದು ಮಾತ್ರವಲ್ಲದೆ ಏರ್ಟೆಲ್ ನಲ್ಲಿ ಮತ್ತೊಂದು ಯೋಜನೆಯ ಪರಿಚಯವೂ ಕೂಡ ಆಗಿದೆ. ಒಂದು ವೇಳೆ ನಿಮಗೆ 12gb ಇಂಟರ್ನೆಟ್ ಸೇವೆ ಹೆಚ್ಚಾಯಿತು ಎಂದರೆ ಮತ್ತೊಂದು ಯೋಜನೆಯ ಅವಕಾಶ ಕೂಡ ಇದೆ. 108 ರೂಪಾಯಿಗೆ 6gb ಹೈಸ್ಪೀಡ್ ಇಂಟರ್ನೆಟ್ ಹಾಗೂ 30 ದಿನಗಳವರೆಗೆ ಅಮೆಜಾನ್ ಪ್ರೈಮ್ ನ ಚಂದಾದಾರಿಕೆ ಉಚಿತವಾಗಿ ಸಿಗಲಿದೆ ಮತ್ತು ಹಲೋ ಟ್ಯೂನ್ಸ್ ವಿಂಕ್ ಮ್ಯೂಸಿಕ್ ಚಂದಾದಾರಿಕೆ ಕೂಡ ಉಚಿತವಾಗಿ ಏರ್ಟೆಲ್ ಗ್ರಾಹಕರಿಗೆ ದೊರೆಯಲಿದೆ. ಒಂದು ವೇಳೆ ನೀವು ಕೂಡ ಈ ರೀಚಾರ್ಜ್ ಪ್ಲಾನ್ ನ ಸೇವೆಗಳನ್ನು ಉಪಯೋಗಿಸಲು ಇಷ್ಟಪಟ್ಟಿದ್ದರೆ ಇವತ್ತೇ ತಪ್ಪದೆ ರಿಚಾರ್ಜ್ ಮಾಡಲು ಮರೆಯಬೇಡಿ. ಈ ಹೊಸ ಯೋಜನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.