ಇಂದು ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಪ್ರಶಾಂತ್ ನೀಲ್ ರವರಿಗೆ ದರ್ಶನ್ ಮಾಡಿದ ಸಹಾಯ ಏನು ಗೊತ್ತೇ?? ಡಿ ಬಾಸ್ ಅಂದು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ಹೇಗೆ ದೇಶ-ವಿದೇಶಗಳಲ್ಲಿ ಒಂದಾದಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಿದೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ನಾಯಕನಟನಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ನಾವು ಎಷ್ಟೇ ಹೊಗಳಬಹುದು ಆದರೆ ಈ ಚಿತ್ರದ ಗೆಲುವಿನ ನಿಜವಾದ ಶ್ರೇಯ ಹೋಗಬೇಕಾಗಿರುವುದು ನಿರ್ದೇಶಕ ಪ್ರಶಾಂತ್ ನೀಲ್ ರವರಿಗೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ಹೇಳಬಹುದಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಶಾಂತ್ ನೀಲ್ ರವರು ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಕಾಲಿಟ್ಟಿದ್ದು ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಉಗ್ರಂ ಚಿತ್ರದ ಮೂಲಕ. ಉಗ್ರಂ ಚಿತ್ರದಲ್ಲಿ ನಾಯಕನಾಗಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ ಕೂಡ ಶ್ರೀ ಮುರಳಿ ರವರಿಗೆ ಕನ್ನಡ ಚಿತ್ರರಂಗದಲ್ಲಿ ಮರುಜನ್ಮ ಹಾಗೂ ಪ್ರಶಾಂತ್ ನೀಲ್ ರವರಿಗೆ ನಿರ್ದೇಶಕನಾಗಿ ಒಂದೊಳ್ಳೆ ಜನ ಮನ್ನಣೆ ಸಿಕ್ಕಿತು ಎಂದರೆ ತಪ್ಪಾಗಲಾರದು.

prashanth neel darshan | ಇಂದು ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಪ್ರಶಾಂತ್ ನೀಲ್ ರವರಿಗೆ ದರ್ಶನ್ ಮಾಡಿದ ಸಹಾಯ ಏನು ಗೊತ್ತೇ?? ಡಿ ಬಾಸ್ ಅಂದು ಮಾಡಿದ್ದೇನು ಗೊತ್ತೇ??
ಇಂದು ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಪ್ರಶಾಂತ್ ನೀಲ್ ರವರಿಗೆ ದರ್ಶನ್ ಮಾಡಿದ ಸಹಾಯ ಏನು ಗೊತ್ತೇ?? ಡಿ ಬಾಸ್ ಅಂದು ಮಾಡಿದ್ದೇನು ಗೊತ್ತೇ?? 3

ಸಾಕಷ್ಟು ಜನಕ್ಕೆ ಈ ವಿಚಾರದ ಕುರಿತಂತೆ ಗೊತ್ತಿಲ್ಲದೆ ಇರಬಹುದು. ಪ್ರಶಾಂತ್ ನೀಲ್ ರವರು ಉಗ್ರಂ ಚಿತ್ರದ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲದೆ ನಿರ್ಮಾಣದಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದರು. ಹೌದು ಪ್ರಶಾಂತ್ ನೀಲ್ ಅವರ ಸ್ವಂತ ತಮ್ಮ ಖರ್ಚಿನಿಂದ ಉಗ್ರಂ ಚಿತ್ರದ ನಿರ್ಮಾಣಕ್ಕಾಗಿ ಬರೋಬ್ಬರಿ ಆರು ಕೋಟಿ ರೂಪಾಯಿಯನ್ನು ವಿನಿಯೋಗಿಸಿದ್ದರು. ಈ ಸಮಯದಲ್ಲಿ ಚಿತ್ರೀಕರಣ ಮುಗಿದ ನಂತರ ಚಿತ್ರದ ವ್ಯಾಪಾರಕ್ಕಾಗಿ ಯಾವುದೇ ವಿತರಕರು ಕೂಡ ಮುಂದೆ ಬಂದಿರಲಿಲ್ಲ. ಇದು ನಿಜಕ್ಕೂ ಕೂಡ ಚಿತ್ರದ ಮೊದಲ ಹಿನ್ನಡೆಯಾಗಿತ್ತು ಎಂದರೆ ತಪ್ಪಾಗಲಾರದು.

ಈ ಸಮಯದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಪ್ರಶಾಂತ್ ನೀಲ್ ಹಾಗೂ ಉಗ್ರಂ ಚಿತ್ರಕ್ಕೆ ದಾರಿದೀಪವಾಗಿ ಬಂದಿದ್ದು ದರ್ಶನ್ ತೂಗುದೀಪ್ ರವರು ಎಂದರೆ ತಪ್ಪಾಗಲಾರದು. ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ಅವರು ಇದರ ಕುರಿತಂತೆ ಮಾತನಾಡುತ್ತಾ ಒಂದು ನಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಪ್ರಮುಖ ಕಾರಣವಾಗಿದ್ದು ದಿನಕರ್ ತೂಗುದೀಪ್ ಸರ್ ಹಾಗೂ ದರ್ಶನ್ ಸರ್ ಮತ್ತು ಅವರ ಸಂಸ್ಥೆ ಎಂಬುದಾಗಿ ಹೇಳಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಪ್ರಶಾಂತ್ ನೀಲ್ ರವರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ಸಲಾರ್ ಸಿನಿಮಾವನ್ನು ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಈ ಚಿತ್ರದ ಚಿತ್ರೀಕರಣವೂ ಆರಂಭವಾಗಲಿದೆ. ನಂತರ ಜೂನಿಯರ್ ಎನ್ಟಿಆರ್ ರವರ ಜೊತೆಗೆ ಕೂಡ ಒಂದು ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನ ನಂತರ ಪ್ರಶಾಂತ್ ನೀಲ್ ರವರ ಜನಪ್ರಿಯತೆ ರಾಜಮೌಳಿಯವರ ಜನಪ್ರಿಯತೆಗೆ ಸರಿಸಮಾನವಾಗಿ ನಿಂತಿದೆ ಎಂದರೆ ತಪ್ಪಾಗಲಾರದು.

darshan 1 | ಇಂದು ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಪ್ರಶಾಂತ್ ನೀಲ್ ರವರಿಗೆ ದರ್ಶನ್ ಮಾಡಿದ ಸಹಾಯ ಏನು ಗೊತ್ತೇ?? ಡಿ ಬಾಸ್ ಅಂದು ಮಾಡಿದ್ದೇನು ಗೊತ್ತೇ??
ಇಂದು ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಪ್ರಶಾಂತ್ ನೀಲ್ ರವರಿಗೆ ದರ್ಶನ್ ಮಾಡಿದ ಸಹಾಯ ಏನು ಗೊತ್ತೇ?? ಡಿ ಬಾಸ್ ಅಂದು ಮಾಡಿದ್ದೇನು ಗೊತ್ತೇ?? 4

ಇಂದು ಭಾರತೀಯ ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಎಷ್ಟೇ ದೊಡ್ಡ ಮಟ್ಟದ ಸಾಧನೆ ಮಾಡಿರಬಹುದು ಅದಕ್ಕೆ ಅವರ ಹಿಂದಿನ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 1 ರ ಯಶಸ್ಸೇ ಕಾರಣವಾಗಿದೆ. ಆದರೆ ಅವರು ಚಿತ್ರರಂಗಕ್ಕೆ ಹೊಸಬರು ಆಗಿದ್ದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರನ್ನು ಗುರುತಿಸಿ ಅವರ ಪ್ರಯತ್ನಕ್ಕೆ ಒಂದು ಒಳ್ಳೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಿದರು ಎಂಬುದನ್ನು ನಾವೆಲ್ಲ ತಪ್ಪದೆ ನೆನಪಿಸಿಕೊಳ್ಳಬೇಕಾಗಿದೆ. ಇದನ್ನೇ ಪ್ರಶಾಂತ ನೀಲ್ ರವರು ಕೂಡ ಈ ಸಂದರ್ಶನದಲ್ಲಿ ಮಾಡಿರುವುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.