ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ರಿಷಿ ಧವನ್ ಮುಖಕ್ಕೆ ಶೀಲ್ಡ್ ಧರಿಸಿ ಬೌಲಿಂಗ್ ಮಾಡಿದ್ದೇಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಬರೋಬ್ಬರಿ 187 ರನ್ನುಗಳನ್ನು ಬಾರಿಸಿತ್ತು. ಅದರಲ್ಲೂ ಗಬ್ಬರ್ ಶಿಖರ್ ಧವನ್ ರವರು ಈ ಪಂದ್ಯದಲ್ಲಿ 59 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ಸಮೇತ 88 ರನ್ನುಗಳನ್ನು ಬಾರಿಸುತ್ತಾರೆ.

ಪಂಜಾಬ್ ತಂಡದ ಮತ್ತೊಬ್ಬ ಬ್ಯಾಟ್ಸ್ಮನ್ ಭಾನುಕ ರಜಪಕ್ಸ 44 ರನ್ನುಗಳನ್ನು ಬಾರಿಸುತ್ತಾರೆ. ಪಂಜಾಬ್ ತಂಡದ ಉತ್ತಮ ಸ್ಕೋರಿಂಗ್ ನಲ್ಲಿ ಇವರಿಬ್ಬರು ಪ್ರಮುಖ ಕಾರಣರಾಗಿರುತ್ತಾರೆ. 188 ರನ್ನುಗಳ ಗುರಿಯನ್ನು ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆರಂಭಿಕ ಆಟಗಾರ ರುತುರಾಜ ಗಾಯಕ್ವಾಡ್ ರವರ 30 ರನ್ನುಗಳ ಉತ್ತಮ ಆಟವನ್ನು ನೀಡುತ್ತಾರೆ. ಆದರೆ ಚೆನ್ನೈ ಸೂಪರ್ ಕಿಂಗ್ ತಂಡದ ಪರವಾಗಿ ಅಂಬಾಟಿ ರಾಯ್ಡು ರವರು 39 ಎಸೆತಗಳಲ್ಲಿ ಆರು ಸಿಕ್ಸರ್ 7 ಬೌಂಡರಿ ಸಮೇತ ಬರೋಬ್ಬರಿ ವೇಗದ 78 ರನ್ನುಗಳನ್ನು ಬಾರಿಸುತ್ತಾರೆ ಆದರೂ ಕೂಡ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 176 ರನ್ನಿಗೆ 6 ವಿಕೆಟ್ ಕಳೆದುಕೊಂಡು 11 ರನ್ನುಗಳ ಸೋಲನ್ನು ಅನುಭವಿಸಿದೆ.

rishi dhawan mask | ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ರಿಷಿ ಧವನ್ ಮುಖಕ್ಕೆ ಶೀಲ್ಡ್ ಧರಿಸಿ ಬೌಲಿಂಗ್ ಮಾಡಿದ್ದೇಕೆ ಗೊತ್ತಾ??
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ರಿಷಿ ಧವನ್ ಮುಖಕ್ಕೆ ಶೀಲ್ಡ್ ಧರಿಸಿ ಬೌಲಿಂಗ್ ಮಾಡಿದ್ದೇಕೆ ಗೊತ್ತಾ?? 2

ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ ಎಂಟು ಬಂದುಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋತು 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಆಲ್-ರೌಂಡರ್ ರಿಷಿ ಧವನ್ ರವರು ವಿಶೇಷವಾಗಿ ಕಾಣಿಸಿಕೊಂಡಿದ್ದು ಈಗ ಸುದ್ದಿಯಾಗುತ್ತಿದೆ. ಹೌದು ಗೆಳೆಯರೇ ಈ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ರಿಶಿ ಧವನ್ ರವರು ಮುಖಕ್ಕೆ ಪಾರದರ್ಶಕ ಶೀಲ್ಡ್ ಅನ್ನು ಧರಿಸಿದ್ದರು. ಇದು ಯಾಕೆ ಎನ್ನುವುದಾಗಿ ಎಲ್ಲರಲ್ಲೂ ಕೂಡ ಕುತೂಹಲ ಮೂಡಿತು ಕೊನೆಗೂ ಕೂಡ ಇದಕ್ಕೆ ಉತ್ತರ ದೊರಕಿದೆ. ಹೌದು ಗೆಳೆಯರೇ ರಿಷಿ ಧವನ್ ರವರು ರಣಜಿಯಲ್ಲಿ ಬೌಲಿಂಗ್ ಮಾಡುವಾಗ ಅವರ ತಲೆಗೆ ಬೌಲ್ ತಾಗಿ ಇಂಜು’ರಿ ಆಗಿತ್ತು. ಈ ಕಾರಣದಿಂದಲೇ ಮುನ್ನೆಚ್ಚರಿಕಾ ಕ್ರಮವಾಗಿ ರಿಷಿ ಧವನ್ ನಿನ್ನೆಯ ಪಂದ್ಯದಲ್ಲಿ ಆರು ವರ್ಷಗಳ ನಂತರ ಐಪಿಎಲ್ ಆಡಬೇಕಾದರೆ ಶೀಲ್ಡ್ ಅನ್ನು ಧರಿಸಿದ್ದರು. ನಿನ್ನೆ ಪಂದ್ಯದಲ್ಲಿ ರಿಷಿ ಧವನ್ ರವರು ಎರಡು ವಿಕೆಟ್ ಗಳನ್ನು ಕಿತ್ತು 39 ರನ್ನುಗಳನ್ನು ನೀಡಿದ್ದಾರೆ. ನಿನ್ನೆ ಪಂದ್ಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.