ಗಟ್ಟಿಮೇಳದಲ್ಲಿ ಅಣ್ಣಂದಿರ ಮುದ್ದಿನ ತಂಗಿ ಆದ್ಯಾ ಅಲಿಯಾಸ್ ಅನ್ವಿತಾ ರವರ ತೆರೆಯ ಹಿಂದಿನ ಜೀವನ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳೂ ಅದರದ್ದೇ ಆದ ವಿಶೇಷತೆಯನ್ನ ಹೊಂದಿರುತ್ತೆ, ಪ್ರಾಮುಖ್ಯತೆಯನ್ನ ಹೊಂದಿರುತ್ತೆ. ಹಾಗಾಗಿ ಆಯಾ ಪಾತ್ರಗಳಲ್ಲಿ ನಟಿಸುವ ಕಲಾವಿದರೂ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಾರೆ. ಇದರಿಂದಾಗಿ ಅವರ ಅಭಿಮಾನಿಗಳೂ ಹೆಚ್ಚುತ್ತಾರೆ. ಹಾಗೆಯೇ ಅವರ ನಿಜ ಜೀವನದ ಬಗ್ಗೆ ತಿಳಿದುಕೊಳ್ಳಲೂ ಕೂಡ ಆಸಕ್ತರಾಗಿರುತ್ತಾರೆ. ಹಾಗಾಗಿ ನಾವಿಂದು ನಿಮ್ಮ ನೆಚ್ಚಿನ ’ಗಟ್ಟಿಮೇಳ’ ಧಾರಾವಾಹಿಯ ಆದ್ಯ ಪಾತ್ರಧಾರಿ ಅನ್ವಿತಾ ಬಗ್ಗೆ ಹೇಳ್ತೀವಿ.

anvitha sagar 3 | ಗಟ್ಟಿಮೇಳದಲ್ಲಿ ಅಣ್ಣಂದಿರ ಮುದ್ದಿನ ತಂಗಿ ಆದ್ಯಾ ಅಲಿಯಾಸ್ ಅನ್ವಿತಾ ರವರ ತೆರೆಯ ಹಿಂದಿನ ಜೀವನ ಹೇಗಿದೆ ಗೊತ್ತೇ??
ಗಟ್ಟಿಮೇಳದಲ್ಲಿ ಅಣ್ಣಂದಿರ ಮುದ್ದಿನ ತಂಗಿ ಆದ್ಯಾ ಅಲಿಯಾಸ್ ಅನ್ವಿತಾ ರವರ ತೆರೆಯ ಹಿಂದಿನ ಜೀವನ ಹೇಗಿದೆ ಗೊತ್ತೇ?? 3

ನಟಿ ಅನ್ವಿತಾ ಸಾಗರ್, ಗಟ್ಟಿಮೇಳ ಧಾರಾವಾಹಿಯಲ್ಲಿ ಅಣ್ಣಂದಿರ ಮುದ್ದಿನ ತಂಗಿ. ಮೂಲತಃ ಸಾಗರದವರಾದ ಇವರು ವಿಧ್ಯಾಭ್ಯಾಸವನ್ನೂ ಕೂಡ ಅಲ್ಲಿಯೇ ಮುಗಿಸಿ, ಪ್ರಸ್ತುತ ಅಪ್ಪ ಅಮ್ಮ ಹಾಗೂ ಅಣ್ಣನೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಅನ್ಚಿತಾ ಸಾಗರ್ ಓದುತ್ತಿರುವಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನ ಹೊಂದಿದ್ದವರು. ಹಾಗಾಗಿ ಕಾಲೇಜು ಸಮಯದಲ್ಲಿ ನಿರೂಪಣೆಯನ್ನೂ ಕೂಡ ಮಾಡುತ್ತಿದ್ದರಂತೆ.

ಆದರೆ ಅನ್ವಿತಾ ಅವರಿಗೆ ನಟನೆಯಲ್ಲಿ ಮೊದಲು ಆಸಕ್ತಿ ಇರಲಿಲ್ಲ. ಆದರೆ ಅವರ ಅಣ್ಣ ತುಳು ಚಿತ್ರಗಳಲ್ಲಿ ನಟಿಸುತ್ತಾರೆ. ಹಾಗಾಗಿ ಅಣ್ಣನ ನಟನೆಯ ಘೀಳು ಅವರಿಗೂ ಬಂತು. ನಟಿ ಅನ್ವಿತಾ ಅವರ ಟಿಕ್ ಟಾಕ್ ವಿಡಿಯೋ ನೋಡಿ, ಮಾ. ಆನಂದ್ ಅವರ ಅಣ್ಣ ಅರುಣ್, ಬೆಂಗಳೂರಿಗೆ ಬಂದು ಆಡಿಶನ್ ಕೊಡುವಂತೆ ಸೂಚಿಸಿದರು. ಅದರಂತೆ ಬಂದ ಅನ್ವಿತಾ, ಆದ್ಯಾ ಪಾತ್ರಕ್ಕೆ ಆಯ್ಕೆಯಾದ್ರು.

anvitha sagar 2 | ಗಟ್ಟಿಮೇಳದಲ್ಲಿ ಅಣ್ಣಂದಿರ ಮುದ್ದಿನ ತಂಗಿ ಆದ್ಯಾ ಅಲಿಯಾಸ್ ಅನ್ವಿತಾ ರವರ ತೆರೆಯ ಹಿಂದಿನ ಜೀವನ ಹೇಗಿದೆ ಗೊತ್ತೇ??
ಗಟ್ಟಿಮೇಳದಲ್ಲಿ ಅಣ್ಣಂದಿರ ಮುದ್ದಿನ ತಂಗಿ ಆದ್ಯಾ ಅಲಿಯಾಸ್ ಅನ್ವಿತಾ ರವರ ತೆರೆಯ ಹಿಂದಿನ ಜೀವನ ಹೇಗಿದೆ ಗೊತ್ತೇ?? 4

ನಿಜ ಜೀವನದಲ್ಲಿ ಅಣ್ಣನ ಪ್ರೀತಿಯ ತಂಗಿಯಾಗಿರುವ ಅನ್ವಿತಾಗೆ ತಂಗಿ ಆದ್ಯಾ ಆಗಿ ಗಟ್ಟಿಮೇಳ ದಲ್ಲಿ ನಟಿಸಲು ಕಷ್ಟವಾಗಲಿಲ್ಲವಂತೆ. ಇನ್ನು ತುಳು ಸಿನಿಮಾಗಳಲ್ಲಿಯೂ ಅಭಿನಯಿಸುವ ಅನ್ವಿತಾ ಸಾಗರ್, ಸದ್ಯ ಸಿನಿಮಾ, ಬೆವ್ ಸೀರಿಸ್ ಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಇನ್ನು ಐತಿಹಾಸಿಕ ಪಾತ್ರವನ್ನ ಹೆಚ್ಚಾಗಿ ಇಷ್ಟಪಡುವ ಅನ್ವಿತಾ ಅವರಿಗೆ ನೆಗೆಟೀವ್ ಶೇಡ್ ಪಾತ್ರವನ್ನು ನಿಭಾಯಿಸುವ ಆಸೆಯಂತೆ. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವ ಕರಾವಳಿ ಚೆಲುವೆ ಅನ್ವಿತಾ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನೂ ಗಳಿಸಿಕೊಂಡಿದ್ದಾರೆ.

Comments are closed.