ಕನ್ನಡದ ‘ರಾಬರ್ಟ್’ ಸಿನಿಮಾದಲ್ಲಿ ನಟಿಸಿದ ನಟಿ ಆಶಾ ಭಟ್ ಅವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಅಯ್ಯೋ ಇಷ್ಟೊಂದಾ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ತೆರೆಕಾಣುವ ಸಿನಿಮಾಗಳ ಮೂಲಕ ಹೊಸ ಮುಖಗಳ ನಟಿಯರನ್ನು ಪರಿಚಯಿಸಲಾಗುತ್ತಿದೆ. ಹೌದು ಇದೀಗ ಕನ್ನಡದ ಹಲವಾರು ಸಿನಿಮಾಗಳಲ್ಲಿ ಹೊಸ ಹೊಸ ನಟಿಯರು ಅಭಿನಯಿಸುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ಇನ್ನು ಇತ್ತೀಚೆಗೆ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಆಶಾ ಭಟ್ ಕೂಡ ಅವರಲ್ಲಿ ಒಬ್ಬರು.

ಹೌದು ಆಶಾ ಭಟ್ ಅವರು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಹೌದು ರಾಬರ್ಟ್ ಸಿನಿಮಾದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಸಿನಿ ಪರದೆಯನ್ನು ಹಂಚಿಕೊಂಡಿರುವ ಆಶಾ ಭಟ್ ಅವರು ಇದೀಗ ಕನ್ನಡಿಗರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಆಶಾ ಭಟ್ ಅವರು ಒಬ್ಬರು ಮಾಡೆಲ್, ನಟಿ ಹಾಗೂ ವೃತ್ತಿಯಿಂದ ಇಂಜಿನಿಯರ್ ಆಗಿದ್ದಾರೆ. ಇನ್ನು ಇವರು ರಾಬರ್ಟ್ ಸಿನಿಮಾದಲ್ಲಿ ನಟಿಸಲು ಪಡೆದುಕೊಂಡ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಸುದ್ದಿಯನ್ನು ಓದಿ.

ಆಶಾ ಭಟ್ ಅವರು ಸಪ್ಟೆಂಬರ್ 5 1992 ರಲ್ಲಿ ಭದ್ರಾವತಿಯಲ್ಲಿ ಜನಿಸಿದರು. ನಂತರ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇನ್ನು 2014ರಲ್ಲಿ ಅವರು ಮಿಸ್ ಸೂಪರ್ ನ್ಯಾಚುರಲ್ ಎಂಬ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಈ ಸ್ಥಾನವನ್ನು ಪಡೆದ ಮೊದಲ ಭಾರತೀಯ ಮಾಡೆಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಕಿರೀಟಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಇವರು ಮಿಸ್ ಕರ್ನಾಟಕ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ. ಇನ್ನು ಇವರು ಬಾಲಿವುಡ್ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಹೌದು 2019ರಲ್ಲಿ ಹಿಂದಿ ಭಾಷೆಯಲ್ಲಿ ತೆರೆಕಂಡ ‘ಜಂಗ್ಲಿ’ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಆಶಾ ಅವರು ಬಾಲಿವುಡ್ ಖ್ಯಾತ ನಟ ವಿದ್ಯುತ್ ಜಮ್ವಾಲ್ ಅವರೊಂದಿಗೆ ಸಹಕಲಾವಿದರಾಗಿ ಮೀರಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಮೂಲಕ ಅವರು ಬಣ್ಣದ ಲೋಕಕ್ಕೆ ಬಂದವರು.

ನಂತರ ಆಶಾ ಭಟ್ ಅವರು ತಮ್ಮ ಎರಡನೇ ಸಿನಿಮಾ ಕನ್ನಡದ ರಾಬರ್ಟ್ ನಲ್ಲಿ ನಾಯಕಿಯಾಗಿ ಭಡ್ತಿ ಪಡೆದರು. ಇನ್ನು ಇದು ಅವರಿಗೆ ಕನ್ನಡದ ಮೊದಲ ಸಿನಿಮಾ. ಈ ಸಿನಿಮಾ ಕೂಡ ಚಿತ್ರಮಂದಿರಗಳಲ್ಲಿ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇನ್ನು ಈ ಚಿತ್ರದ ಮೂಲಕ ಅವರು ನಾಯಕಿಯಾಗಿ ಹೆಸರನ್ನು ಪಡೆದರು. ಇನ್ನು ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದು, ಅವರು ರಾಬರ್ಟ್ ಚಿತ್ರದಲ್ಲಿ ನಟಿಸಲು ಪಡೆದ ಸಂಭಾವನೆ ಎಷ್ಟು ಎಂದು ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ.

ಹೌದು ನಟಿ ಆಶಾ ಭಟ್ ಅವರು ರಾಬರ್ಟ್ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 80 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೌದು ತಮ್ಮ ಮೊದಲ ಕನ್ನಡ ಸಿನಿಮಾದಲ್ಲಿ ಈ ಬಾರಿ ಮೊತ್ತವನ್ನು ಸಂಭಾವನೆಯಾಗಿ ಪಡೆದಿರುವ ನಟಿ ಇವರಾಗಿದ್ದಾರೆ. ಇನ್ನು ಇವರು ಇದೇ ರೀತಿ ಯಶಸ್ಸನ್ನು ಮುಂದಿನ ಭವಿಷ್ಯತ್ತಿನಲ್ಲಿ ಕಾಣಲಿ ಎಂದು ನಾವು ಈ ಮೂಲಕ ಹಾರೈಸೋಣ. ಇನ್ನು ಈ ಸುದ್ದಿ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Comments are closed.