Automobiles: ನೋಡುವುದಕ್ಕೆ ಬಹಳ SIMPLE ONE (ಸಿಂಪಲ್ ಒನ್) ಎನಿಸಿದರೂ, ಬೆಲೆ ಹಾಗೂ ಇದರ ಪವರ್ ನೋಡಿದರೆ ಇಂದೇ ಹೋಗಿ ಮನೆಗೆ ತಗೊಂಡ್ ಬರ್ತೀರಾ.
Automobiles: ಭಾರತದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (Electric Bike) ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕೊಂಡುಕೊಳ್ಳಲು ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈ ಮೊದಲು ಕೇವಲ ಬೆರಳೆಣಿಕೆಯಷ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ಗಳು ಇದೀಗ ರಸ್ತೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿವೆ ಎಂದು ಹೇಳಬಹುದು. ಹೊಸದಾಗಿ ಸ್ಕೂಟರ್ ಕೊಳ್ಳಲು ಆಲೋಚಿಸುವವರು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕೊಳ್ಳಲು ಯೋಚಿಸುತ್ತಾರೆ. ಬೇರೆ ಬೈಕ್ ಗಳಿಗಿಂತ ಎಲೆಕ್ಟ್ರಿಕ್ ಸ್ಕೂಟರ್ ಗಳು ಕಡಿಮೆ ಮೈಲೇಜ್ ಹೊಂದಿರುತ್ತದೆ ಎನ್ನುವುದನ್ನು ಬಿಟ್ಟರೆ ಇನ್ನು ಯಾವ ವಿಷಯದಲ್ಲೂ ಇವುಗಳು ಕಡಿಮೆ ಏನಲ್ಲ. ಆದರೆ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲಾಗುತ್ತಿದೆ.
ಇತ್ತೀಚಿನ ಜನರ ಅಭಿರುಚಿ ಮತ್ತು ಟ್ರೆಂಡ್ ಗೆ ಅನುಗುಣವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನೆ ಹೆಚ್ಚಾಗಿ ಆಗುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುವ ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ವೇಳೆ ಭಾರತದ ಕಂಪನಿಯೊಂದು ಇದೀಗ ಅತಿ ಹೆಚ್ಚು ಮೈಲೇಜ್ ಹೊಂದಿರುವ, ಆಕರ್ಷಕ ಫೀಚರ್ಸ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳನ್ನು ಉತ್ಪಾದಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸ್ಕೂಟರ್ಗಳು ಮಾರುಕಟ್ಟೆಗೆ ಬಂದು ದೊಡ್ಡ ದಾಖಲೆ ನಿರ್ಮಿಸಲಿದೆ ಎಂದು ಸಂಸ್ಥೆ ಭರವಸೆ ವ್ಯಕ್ತಪಡಿಸಿದೆ. ಬೆಂಗಳೂರು (Bangalore) ಮೂಲದ ಸಿಂಪಲ್ ಎನರ್ಜಿ ಕಂಪನಿ (Simple Energy Company) ಸಿಂಪಲ್ ಒನ್ ಸ್ಕೂಟರ್ ಇಂತಹದೊಂದು ಮಹತ್ವದ ಹೆಜ್ಜೆ ಇರಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದನ್ನು ಓದಿ.. Kannada News: ಮೊದಲ ಸಿನೆಮಾದ ಮುಹೂರ್ತದಲ್ಲಿಯೇ ಖಡಕ್ ಮಾತು ಹೇಳಿದ ಪ್ರೇಮ್ ಮಗಳು ಅಮೃತ ಹೇಳಿದ್ದೇನು ಗೊತ್ತೇ??
2023ರ ಮಾರ್ಚ್ ತಿಂಗಳಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಸಂಸ್ಥೆಯು ತನ್ನ ವೆಬ್ಸೈಟ್ನಲ್ಲಿ ಈ ಸ್ಕೂಟರ್ ಹೊಂದಿರುವ ವಿಶೇಷ ಫೀಚರ್ ಗಳ ಬಗ್ಗೆ ವಿವರಿಸಿದೆ. ಈ ಕಂಪನಿಯು ತಮಿಳುನಾಡಿನ ಶೂಲಗಿರಿ ಬಳಿ ಇದ್ದು ನೂರು ಕೋಟಿ ವೆಚ್ಚದಲ್ಲಿ ಬಂಡವಾಳ ಹಾಕಿ ಕಂಪನಿಯನ್ನು ಸ್ಥಾಪಿಸಲಾಗಿದೆ. ವಾರ್ಷಿಕವಾಗಿ 10 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಸಂಸ್ಥೆ ಹೊಂದಿದೆ ಎಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಈ ಸ್ಕೂಟರ್ ನ ಎಕ್ಸ್ ಶೋ ರೂಂ ಬೆಲೆ ರೂ.1.10 ಲಕ್ಷ, ನಂತರ ಇದರ ಬೆಲೆ ಸ್ವಲ್ಪ ಹೆಚ್ಚಾಗಲುಬಹುದು. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಬರೋಬ್ಬರಿ 300 ಕಿಲೋಮೀಟರ್ ವರೆಗೂ ಮೈಲೇಜ್ ನೀಡುತ್ತದೆ ಎಂದು ದೃಢಪಡಿಸಲಾಗಿದೆ. ಜೊತೆಗೆ ಗಂಟೆಗೆ 105 km ವೇಗದಲ್ಲಿ ಈ ಸ್ಕೂಟರ್ ಓಡಲಿದೆ. ಇದನ್ನು ಓದಿ.. Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ?
Comments are closed.