ಮಧು ಮೇಹ ನಿವಾರಣೆಗೆ ಅತಿ ಹೆಚ್ಚು ಪ್ರಭಾವ ಬೀರುವ ಬೆಂಡೆಕಾಯಿಯನ್ನು ಬಳಸಿ ಸೃಗಾರ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಧುಮೇಹ ಒಮ್ಮೆ ಬಂದರೆ ಇದು ಬೆಂಬಿಡದ ಖಾಯಿಲೆ. ಒಮ್ಮೆ ದೇಹವನ್ನು ಆಕ್ರಮಿಸಿದರೆ ಜಿವನಪರ್ಯಂತ ಜೊತೆಯೇ ಇರುತ್ತದೆ. ಇದನ್ನು ನಿಯಂತ್ರಿಸಲು ಮಾತ್ರೆಗಳ ಮೊರೆಹೋಗಿತ್ತಾರೆ. ಎಷ್ಟು ದಿನ ಅಂತ ಮಾತ್ರೆ ನುಂಗುತ್ತೀರಿ? ನಿಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ತುಸು ಬದಲಾಯಿಸಿಕೊಂಡರೆ ಮಧುಮೇಹವನು ಖಂಡಿತವಾಗಿ ನಿಯಂತ್ರಿಸಬಹುದು.

ಮಧುಮೇಹ ನಿವಾರಣೆಗೆ ನಾವು ನಿತ್ಯವೂ ಸೇವಿಸುವ ತರಕಾರಿಗಳು ಬಹಳ ಮುಖ್ಯ. ಅವುಗಳಲ್ಲಿರುವ ಜೀವಸತ್ವಗಳು ಮಧುಮೇಹ ನಿಯಂತ್ರಣಕ್ಕೆ ಸಹಾಯವಾಗುತ್ತವೆ. ಅದರಲ್ಲಿ ಒಂದು ಪ್ರಮುಖ ತರಕಾರಿ ಬೆಂಡೆಕಾಯಿ. ಬೆಂಡೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಇದೆ ಹಾಗೂ ಫೈಬರ್ ಅಂಶ ಅಧಿಕವಾಗಿದೆ. ಜೊತೆಗೆ ಫೋಲಿಕ್ ಆಸಿಡ್, ವಿಟಮಿನ್ ಸಿ ಮತ್ತು ಇ ಜೀವಸತ್ವಗಳಿವೆ. ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕ್ಯಾಲ್ಸಿಯಂ ಕೂಡ ಹೆಚ್ಚಾಗಿಯೇ ಇದೆ.

ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವವರು ದಿನವೂ ಬೆಂಡೆಕಾಯಿಯನ್ನು ತಿನ್ನಬೇಕು. ಬೆಂಡೆಕಾಯಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತವೆ. ಟರ್ಕಿಯಂಥ ದೇಶಗಳಲ್ಲಿ ಬೆಂಡೆಕಾಯಿ ಬೀಜ ಮಧುಮೇಹ ಚಿಕಿತ್ಸೆಯಲ್ಲಿ ಅವಶ್ಯವಾಗಿ ಬಳಸಲಾಗುತ್ತದೆ. ಬೆಂಡೆಕಾಯಿಯಲ್ಲಿ ಇರುವ ನಾರಿನಾಂಶ ಮಧುಮೇಹ ನಿಯಂತ್ರಣಕ್ಕೆ ಸಹಾಯಮಾಡುತ್ತದೆ. ಇದು ಗ್ಲೈಸೆಮಿಕ್ ನಿಯಂತ್ರಣವನ್ನು ಉತ್ತೇಜಿಸಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿದ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

ಬೆಂಡೆಕಾಯಿ ಮಧುಮೇಹಕ್ಕೆ ಮಾತ್ರವಲ್ಲದೇ ದೇಹದ ಇತರ ಹಲವು ಖಾಯಿಲೆಗಳ ನಿಯಂತ್ರಕದಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗಗಳಿಂದ ನಮ್ಮನ್ನು ದೂರ ಇಡುತ್ತವೆ. ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಕೂಡ ಸಹಜವಾಗಿಯೇ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅಧಿಕ ಫೈಬರ್ ಅಂಶವಿರುವ ತರಕಾರಿಗಳನ್ನು ತಿನ್ನಬೇಕು. ಬೆಂಡೆಕಾಯಿ ಅಧಿಕ ಫೈಬರ್ ಜೊತೆಗೆ ಆಂಟಿ ಆಂಕ್ಸಿಡೆಂಟ್ ಗುಣ ಹೊಂದಿದ್ದು ಕೊಲೆಸ್ಟ್ರಾಲ್ ನ್ನು ಕೂಡ ನಿಯಂತ್ರಿಸುತ್ತದೆ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಬೆಂಡೆಕಾಯಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಂಡರೆ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.

Comments are closed.